So Yennire Lyrics

in Kakana Kote

LYRIC

ಸೋ ಎನ್ನಿರೋ ಸೋಬಾನ ಎನ್ನಿರೋ
ಸೋ ಎನ್ನಿರೋ ಸೋಬಾನ ಎನ್ನಿರೋ 
ಊರಿನ ಗೌಡ ಬನ್ನಿ
ನಾಡಿನ ದೊರೆಯೇ ಬನ್ನಿ 
ಬೇಗಾನೇ ಬನ್ನೀ ಸೋ ಎನ್ನಿರೇ 
 
|| ಸೋ ಎನ್ನಿರೋ ಸೋಬಾನ ಎನ್ನಿರೋ…||
 
ಬರಗಲ್ಲ ಗೂಡಾಗೆ ಸಡಗರ ಬಂದೈತೆ 
ಬರಗಲ್ಲ ಗೂಡಾಗೆ ಸಡಗರ ಬಂದೈತೆ 
ಕಾಕನ ಮಗಳು ಮೊಲ್ಲೆಯಾ 
ಕಾಕನ ಮಗಳು ಮೊಲ್ಲೆಯಾ ಮಡಿಲಿಗೆ 
ತೂರಿಬರುತ್ತಾಳೆ ಬೆಲೆ ಮೂಡಿ 
 
|| ಸೋ ಎನ್ನಿರೋ ಸೋಬಾನ ಎನ್ನಿರೋ…||
 
ನಾಗರ ಹೆಡೆ ಚೆಂದ ಮಾನಿನ ವೇಣಿಚಂದ 
ನಾಗರ ಹೆಡೆ ಚೆಂದ ಮಾನಿನ ವೇಣಿಚಂದ 
ಕಾಕನ ಮಗಳ ಮುಡಿ ಚೆಂದ 
ಕಾಕನ ಮಗಳ ಮುಡಿ ಚೆಂದ ನಾಡಿನ 
ಹೆಜ್ಜೆಯಾಡುದಿ ಬಲು ಚೆಂದ 
 
|| ಸೋ ಎನ್ನಿರೋ ಸೋಬಾನ ಎನ್ನಿರೋ…||
 
ಹಂದರದ ಜನ ಕೇಳಿ ಬಂಧು ಬಳಗ ಹೇಳಿ
ಹಂದರದ ಜನ ಕೇಳಿ ಬಂಧು ಬಳಗ ಹೇಳಿ
ಸಿಂಗಾರ ಮದುಮಗ ನೀವ್ ಕೇಳಿ
ಸಿಂಗಾರ ಮದುಮಗ
ನೀವ್ ಕೇಳಿ ನಿಮ್ಮ ಹೆಸರು
ದಂಗಾಗಿ ನಿಂತಾಳೆ ಮದುಮಗಳು

|| ಸೋ ಎನ್ನಿರೋ ಸೋಬಾನ ಎನ್ನಿರೋ 
ಸೋ ಎನ್ನಿರೋ ಸೋಬಾನ ಎನ್ನಿರೋ….|| 
 

So yennire song lyrics from Kannada Movie Kakana Kote starring Lokesh, Srinath, Loknath, Lyrics penned by Masti Venkatesh Iyengar Sung by Kousalya Gayithri, Music Composed by C Ashwath, film is Directed by C R Simha and film is released on 1977