-
ಇಟ್ಟಂತೆ ಇರುವೆನು ಶಿವನೆ ನೀ ಇಟ್ಟಂತೆ ಇರುವೆನು ಶಿವನೆ
ನೀ ಕೊಟ್ಟಿದ್ದೆ ಸಾಕು ಬೇರೇನು ಬೇಕು ಹಾಯಾಗಿ ಬಾಳುವೆ ಹರನೆ

ಹೊನ್ನನು ಮಣ್ಣಲ್ಲಿ ಇಟ್ಟೋನು ನೀ ತಾನೆ
ಹೊನ್ನನು ಮಣ್ಣಲ್ಲಿ ಇಟ್ಟೋನು ನೀ ತಾನೆ
ಮುತ್ತನ್ನು ಕಡಲಲ್ಲಿ ಎಸೆದೆ
ಹೂವನ್ನು ಮುಳ್ಳಲಲಿ ಕೆಸರಲ್ಲಿ ಇಟ್ಟೋನು
ತಾರೆಯ ಗಗನಕ್ಕೆ ಬೆಸೆದೆ
ಯಾವಾಗ ಯಾರನ್ನು ಎಲ್ಲೆಲ್ಲಿ ಇಡಬೇಕು
ಅರೆ ಯಾವಾಗ ಯಾರನ್ನು ಎಲ್ಲೆಲ್ಲಿ ಇಡಬೇಕು
ಶ್ರೀಕಂಠ ನೀ ತಾನೆ ಬಲ್ಲೆ
ನೋವೆಂಬ ಮಾತನ್ನು ನಾ ಎಂದೊ ಮರೆತಾಯ್ತು
ನಗುನಗುತ ಇರ್ತೀನಿ ಇಲ್ಲಿ
ನಗುನಗುತ ಇರ್ತೀನಿ ಇಲ್ಲಿ
||ಇಟ್ಟಂತೆ ಇರುವೆನು ಶಿವನೆ ನೀ ಇಟ್ಟಂತೆ ಇರುವೆನು ಶಿವನೆ
ನೀ ಕೊಟ್ಟಿದ್ದೆ ಸಾಕು ಬೇರೇನು ಬೇಕು ಹಾಯಾಗಿ ಬಾಳುವೆ ಹರನೆ||
||ಇಟ್ಟಂತೆ ಇರುವೆನು ಶಿವನೆ ನೀ ಇಟ್ಟಂತೆ ಇರುವೆನು ಶಿವನೆ||
ಮುಗಿಲಲ್ಲಿ ಮಿಂಚನ್ನು ಗುಡುಗನ್ನು ಸಿಡಿಲನ್ನು
ಮುಗಿಲಲ್ಲಿ ಮಿಂಚನ್ನು ಗುಡುಗನ್ನು ಸಿಡಿಲನ್ನು
ಕೊಟ್ಟೋನು ನಂಜುಂಡ ತಾನೆ
ಮಳೆ ಬಂದರೇನಂತೆ ಅಭಿಷೇಕ ಎನ್ನುತ ಆನಂದದಿಂದ ಕುಣಿವೆ
ಹಗಲಲ್ಲಿ ಸೂರ್ಯನ್ನ ಇರುಳಲ್ಲಿ ಚಂದ್ರನ್ನ
ತಂದೋನು ನನ್ನಪ್ಪ ನೀನೆ
ನಟರಾಜ ನಾ ನಿನ್ನ ಮಗನಲ್ಲವೇನಯ್ಯ
ಬಂದದ್ದು ಬರಲೆಂದು ಇರುವೆ