Baarayya Poli Putta Lyrics

in Hucchana Maduveli Undone Jana

Video:

LYRIC

-
ಬಾರಯ್ಯ ಪೋಲಿ ಪುಟ್ಟ
ಹತ್ತಯ್ಯ ಪ್ರೀತಿ ಬೆಟ್ಟ
 
ಬಾರಯ್ಯ ಪೋಲಿ ಪುಟ್ಟ
ಹತ್ತಯ್ಯ ಪ್ರೀತಿ ಬೆಟ್ಟ
ಈ ಉಕ್ಕಿನಿಂತ ಪ್ರಾಯದ ಹೆಣ್ಣು ನಿಂಗೆ ಕಣಯ್ಯ
ನೀ ದುಂಬಿಯಂತೆ ಹಾರಿ ಬಂದು ದಾಳಿಮಾಡಯ್ಯ
ನೀ ಹತ್ತಿರ ಬಾರೊ ಸ್ವರ್ಗ ನೋಡೋಣ
 
ಹೋಯ್‌
ಅಯ್ಯಯ್ಯೊ ಬಾರಿ ಕಷ್ಟ
ಒಪ್ಕೊಂಡ್ರೆ ನಂಗೆ ನಷ್ಟ
ಈ ರಾತ್ರಿ ಹೊತ್ತು ಡ್ಯಾಡಿ ಮಮ್ಮಿ ಆಟ ಯಾಕಮ್ಮ
ಈ ಬ್ರಹ್ಮಚಾರಿಯ ಕೆಣಕದೆ ಇದ್ರೆ ಅಷ್ಟೆ ಸಾಕಮ್ಮ
ಆ ಸ್ವರ್ಗ ಬೇಡ ರೈಟ್‌ ಏಳಮ್ಮ
||ಬಾರಯ್ಯ ಪೋಲಿ ಪುಟ್ಟ
ಅಯ್ಯಯ್ಯೊ ಬಾರಿ ಕಷ್ಟ||
 
ಕಾಯುತ್ತ ಕುಂತೆನಲ್ಲ ಕಾಯಿಸೋದು ಒಳ್ಳೆದಲ್ಲ
ಕಾಮಣ್ನನ ಕಥೆಯ ಕೇಳು ಸರಸ ತುಂಬೈತೆ
ಓಯ್‌ ನಿನ್‌ ಮಾತು ಕೇಳೊದಿಲ್ಲ ತಪ್ಪನ್ನು ಮಾಡೋದಿಲ್ಲ
ನನ್‌ ಬಿಟ್ಟು ತೆಪ್ಪಗೆ ಮಲಗು ರಾತ್ರಿ ಆಗೈತೆ
ಕಾದಿದೆ ಮಂಚ ಬಂದು ಸೇರೊ
ನಾಚಿಕೆ ಇಲ್ಲ ಯಾವ ಊರೊ
ವಯ್ಯಾರ ನೋಡೊ ವಯಸ್ಸು ನೋ ನೋ ಅನ್ನಬೇಡ
ಈ ನಿನ್ನ ಚಮಕ್‌ ಗಿಮಕ್‌ ನನ್ನ ಹತ್ರ ಬೇಡ
ಬಿಗುಮಾನ ಯಾಕೆ ಬಾರೊ ಲೋ
 
||ಅಯ್ಯಯ್ಯೊ ಬಾರಿ ಕಷ್ಟ
ಹತ್ತಯ್ಯ ಪ್ರೀತಿ ಬೆಟ್ಟ||
 
ದೀಪನ ಆರುಸ್ತೀನಿ ರೂಪನ ತೋರುಸ್ತೀನಿ
ಕೇಳಿದ್ರು ಕೇಳದೆ ಇದ್ರು ನನ್ನೆ ಕೊಡ್ತೀನಿ
ಬ್ಯಾಡಮ್ಮಿ ನಿನ್‌ ಧಮ್ಮಯ್ಯ
ಮುಟ್ಬೇಡ ನನ್‌ ಅಮ್ಮಯ್ಯ
ನೀ ಸ್ವಲ್ಪ ಸುಮ್ನೆ ಇದ್ರೆ ಕಾಲಿಗ್‌ ಬೀಳ್ತೀನಿ ಪ್ಲೀಸ್
ದೇಹದ ತುಂಬ ಬಯಕೆ ನೋಡು
ಬೇಡವೆ ಬೇಡ ಇಲ್ಲಿಂದ ಓಡು
ಶೃಂಗಾರ ಮುಂದೆ ಇದ್ರು ಮುಟ್ಟದೆ ಇದ್ರೆ ಮೂಢ
ಯಾಕಿಂಗೆ ಕಾಡ್ತೀಯಮ್ಮಿ ಹಾಡ್ತೀಯಮ್ಮಿ ಹಾಡ
ಅಂದದ ಬಾಚಿಕೊಳ್ಳೊಲೊ
 
||ಅಯ್ಯಯ್ಯೊ ಬಾರಿ ಕಷ್ಟ
ಹತ್ತಯ್ಯ ಪ್ರೀತಿ ಬೆಟ್ಟ
ಈ ರಾತ್ರಿ ಹೊತ್ತು ಡ್ಯಾಡಿ ಮಮ್ಮಿ ಆಟ ಯಾಕಮ್ಮ
ಈ ಉಕ್ಕಿನಿಂತ ಪ್ರಾಯದ ಹೆಣ್ಣು ನಿಂಗೆ ಕಣಯ್ಯ
ಆ ಸ್ವರ್ಗ ಬೇಡ ರೈಟ್‌ ರೈಟ್‌ ಏಳಮ್ಮ
ಬಾರಯ್ಯ ಪೋಲಿ ಪುಟ್ಟ
ಅಯ್ಯಯ್ಯೊ ಬಾರಿ ಕಷ್ಟ||

Baarayya Poli Putta song lyrics from Kannada Movie Hucchana Maduveli Undone Jana starring Jaggesh, Radhika Choudary, Swapna Madhuri, Lyrics penned by V Nagendra Prasad Sung by Rajesh Krishnan, Nanditha, Music Composed by Prashanth Raj, film is Directed by C H Balaji Singh and film is released on 2003