Ninu Pandyadalli Gellabeku Lyrics

in Hosa Raga

Video:

LYRIC

ನೀನು ಪಂದ್ಯದಲ್ಲಿ ಗೆಲ್ಲಬೇಕು
ನಿನ್ನ ಹೆಸರು ಇಲ್ಲಿ ನಿಲ್ಲಬೇಕು
ನಿತ್ಯ ಎದ್ದ ಕೂಡಲೇ ಓಡಬೇಕು
ಯೋಗ ಮಾಡಿ ರೋಗ ತಡೆಯಬೇಕು
ನಿನ್ನ ಗುಟ್ಟು ಬಿಟ್ಟ ಹೇಳಬೇಡ
ಇಂಥ ಖೊಟ್ಟಿ ಜನರ ನಂಬಬೇಡ
ನನ್ನ ಮುದ್ದು ಮಗುವೇ ಬಾಳಿನಲ್ಲಿ ಎಂದೂ
ನೀನು ಯಾವ ಪಂದ್ಯದಲ್ಲೂ ಸೋಲಬೇಡಾ

ಪುಟಿ ಪುಟಿವ ಚೆಂಡಾಗೂ ಬದುಕಿನಲಿ
ಮುಂದಾಗು ಕಲಿಸಿ  ಕೊಡುವೆ ಎಲ್ಲಾ ಪಾಠ
ಪಡೆಯಿಸುವೇ  ಟ್ರೈನಿಂಗೂ ಕ್ಷಣಕ್ಷಣವೂ ಥ್ರಿಲ್ಲಿಂಗು
ಗೆಲುವ ಛಲವೂ ನಿನ್ನ ಬಲವು
ಯತ್ನವ ಎಂದಿಗೂ ನಿಲ್ಲಿಸಬೇಡ
ಕಲಿಯುವ ವಯಸಲು ಸೌಖ್ಯವ ಬೇಡ
ಉಳಿ ಏಟು ಸಹಿಸಿದಾಗಲೇನೆ
ಶಿಲೆಯೂ ಕೂಡಾ ಶಿಲ್ಪವಂತೇ

|| ನೀನು ಪಂದ್ಯದಲ್ಲಿ ಗೆಲ್ಲಬೇಕು ||

ಗೆಳೆಯರಿಗೆ ಹೂವಾಗೂ ಹಗೆಗಳಿಗೆ ಮುಳ್ಳಾಗು
ಭಂಡ ಜನಕೆ ಚೆಂಡಿಯಾಗೂ
ಮರೆಯದಿರೂ ನಿನ್ನೋರ
ತೊರೆಯದಿರೂ ನಿನ್ನೋರ
ಪೆದ್ದ ಮಗುವು ಜಗಕೆ ಭಾರ
ಈರ್ಷೆಯ ಮಾತಿಗೆ ಕಿವಿಗೊಡ ಬೇಡ
ಕೋಪ  ಹೊರಗೆ ತೋರಿಸಬೇಡ
ನಿನ್ನ ಏಳ್ಗೆ ಕಂಡು ಸಹಿಸಿದವರೇ
ಕೊನೆಗೆ ತಲೆಯ ಬಾಗುವಂತೆ

|| ನೀನು ಪಂದ್ಯದಲ್ಲಿ ಗೆಲ್ಲಬೇಕು ||
 
ಕಲಿಸುವೆ ಸ್ವಿಮ್ಮಿಂಗು ನಿನಗೇಕೆ ಬಾದರಿಂಗೂ
ಮನೆಗೆ ಹೋಗಿ ತಿನ್ನು ಇಂಗೂ 
ಸರಸರನೆ ಡ್ಯಾನ್ಸಿಂಗೂ ಕಲಿಸುವೆಯ ಡಾರ್ಲಿಂಗು
ಕುಸ್ತಿಯಲ್ಲಿ ನಾನೇ ಕಿಂಗೂ 
ಯಾರಿಗೂ ತಲೆಯನು ಬಾಗಿಸಬೇಡ
ಯಾರದೇ ಮನಸನು ನೋಯಿಸಬೇಡ 
 
ನೀನು ಪಂದ್ಯದಲ್ಲಿ ಗೆಲ್ಲಬೇಕು
ನಿನ್ನ ಹೆಸರು ಇಲ್ಲಿ ನಿಲ್ಲಬೇಕು
ನಿತ್ಯ ಎದ್ದ ಕೂಡಲೇ ಓಡಬೇಕು
ಯೋಗ ಮಾಡಿ ರೋಗ ತಡೆಯಬೇಕು
ನಿನ್ನ ಗುಟ್ಟು ಬಿಟ್ಟ ಹೇಳಬೇಡ
ಇಂಥ ಖೊಟ್ಟಿ ಜನರ ನಂಬಬೇಡ
ನನ್ನ ಮುದ್ದು ಮಗುವೇ ಬಾಳಿನಲ್ಲಿ ಎಂದೂ
ನೀನು ಯಾವ ಪಂದ್ಯದಲ್ಲೂ ಸೋಲಬೇಡಾ 

Ninu Pandyadalli Gellabeku song lyrics from Kannada Movie Hosa Raga starring Shashikumar, Sudharani,, Lyrics penned by Shyamasundar Kulkarni Sung by S P Balasubrahmanyam, Music Composed by Sangeetha Raja, film is Directed by K V Jayaram and film is released on 1992