Anaatha Maguvaade Nanu Lyrics

ಅನಾಥ ಮಗುವಾದೆ ನಾನು Lyrics

in Hosa Jeevana

in ಹೊಸ ಜೀವನ

LYRIC

Song Details Page after Lyrice

ಉಳ್. ಳ್ಳ್ಳ್... ಆಯಿ ಆಯಿ..... ಆಯಿ
ಮೇಲೆ ನೋಡೊ ಕಂದ ಚಂದಮಾಮ ನಗ್ತಾನೆ
ಕಣ್ಣು ಮುಚ್ಚೊ ಕಂದ ನಿದ್ದೆಗುಮ್ಮ ಬರ್ತಾನೆ
ಉಳ್..ಳ್ಳ್ಳ್.... ಆಯಿ ಆಯಿ..... ಆಯಿ
 
ಅನಾಥ ಮಗುವಾದೆ ನಾನು
ಅಪ್ಪನು ಅಮ್ಮನು ಇಲ್ಲ
ಅಣ್ಣನು ತಮ್ಮನು ಇಲ್ಲ
ಭಿಕಾರಿ ದೊರೆಯಾದೆ ನಾನು
ಅತ್ತರೆ ಮುದ್ದಿಸೋರಿಲ್ಲ
ಸತ್ತರೆ ಹೊದ್ದಿಸೋರಿಲ್ಲ
ಎಂಜಲೇ ಮೃಷ್ಟಾನ್ನವಾಯ್ತು
ಬೈಗಳೇ ಮೈಗೂಡಿಹೋಯ್ತು
ಈ ಮನಸೇ ಕಲ್ಲಾಗಿಹೋಯ್ತು
 
|| ಅನಾಥ ಮಗುವಾದೆ ನಾನು
ಅಪ್ಪನು ಅಮ್ಮನು ಇಲ್ಲ
ಅಣ್ಣನು ತಮ್ಮನು ಇಲ್ಲ||
 
ಬೀದಿಗೆ ಒಂದು ನಾಯಿ ಕಾವಲಂತೆ
ನಾಯಿಗೂ ಒಂದು ರೊಟ್ಟಿ ಮೀಸಲಂತೆ
ನಾಯಿಗೂ ಹೀನವಾದೆ ನಾ..
ಮಾಳಿಗೆಗೆ ಒಂದು ಬೆಕ್ಕು ಕಾವಲಂತೆ
ಬೆಕ್ಕಿಗೂ ನಿತ್ಯ ಹಾಲು ತುಪ್ಪವಂತೆ
ಬೆಕ್ಕಿಗಿಂತ ಕೆಟ್ಟ ಶಕುನ ನಾ..
ತಿಂದೋರು ಎಲೆಯ ಬಿಸಾಡೋ ಹಾಗೆ
ಹೆತ್ತೋಳು ನನ್ನ ಎಸೆದಾಯ್ತು
ಸತ್ತೋರ ಎಡೆಯ ಕಾಗೆಗೆ ಇರಿಸಿ
ಹೆತ್ತೋರ ಕೂಗಿ ಕರೆದಾಯ್ತು
ಉತ್ತರ ಇಲ್ಲ ಪ್ರಶ್ನೆಯೇ ಎಲ್ಲ
ಕೇಳೋ ದೇವನೇ 
 
|| ಅನಾಥ ಮಗುವಾದೆ ನಾನು
ಅಪ್ಪನು ಅಮ್ಮನು ಇಲ್ಲ
ಅಣ್ಣನು ತಮ್ಮನು ಇಲ್ಲ||
 
ಉಳ್..ಳ್ಳ್ಳ್.... ಆಯಿ ಆಯಿ..... ಆಯಿ
ಹುಟ್ಟೋ ಮಕ್ಕಳೆಲ್ಲ ತೂಗೋ ತೊಟ್ಟಿಲಲ್ಲಿ
ನನ್ನ ನಿಟ್ಟರಲ್ಲ ತಿಪ್ಪೆ ತೊಟ್ಟಿಯಲ್ಲಿ
ನಾನು ಏನು ಪಾಪ ಮಾಡಿದೆ?
ಅರ್ಧ ರಾತ್ರಿಯಲ್ಲಿ ಅರ್ಧ ನಿದ್ದೆಯಲ್ಲಿ
ತಾಯಿ ಹಾಲುಎಲ್ಲಿ?
ಲಾಲಿ ಹಾಡು ಎಲ್ಲಿ?
ನಾನು ಯಾವ ದ್ರೋಹಮಾಡಿದೆ?
ಭೂಮಿಯ ತುಂಬ ಅನಾಥರೆಂಬ
ಕೋಟ್ಯಾನುಕೋಟಿ ಕೂಗು ಇದೆ
ಗ್ರಾಚಾರ ಬರೆಯೋ ಬ್ರಹ್ಮ
ನಿನಗೆ ಎಂದೆಂದೂ ಅವರ ಶಾಪ ಇದೆ
ಉತ್ತರ ಇಲ್ಲ ಪ್ರಶ್ನೆಯೇ ಎಲ್ಲ
ಹೇಳೋ ದೇವನೇ
 
|| ಅನಾಥ ಮಗುವಾದೆ ನಾನು
ಅಪ್ಪನು ಅಮ್ಮನು ಇಲ್ಲ
ಅಣ್ಣನು ತಮ್ಮನು ಇಲ್ಲ
ಭಿಕಾರಿ ದೊರೆಯಾದೆ ನಾನು
ಅತ್ತರೆ ಮುದ್ದಿಸೋರಿಲ್ಲ
ಸತ್ತರೆ ಹೊದ್ದಿಸೋರಿಲ್ಲ
ಎಂಜಲೇ ಮೃಷ್ಟಾನ್ನವಾಯ್ತು
ಬೈಗಳೇ ಮೈಗೂಡಿಹೋಯ್ತು
ಈ ಮನಸೇ ಕಲ್ಲಾಗಿಹೋಯ್ತು ||

ಉಳ್. ಳ್ಳ್ಳ್... ಆಯಿ ಆಯಿ..... ಆಯಿ
ಮೇಲೆ ನೋಡೊ ಕಂದ ಚಂದಮಾಮ ನಗ್ತಾನೆ
ಕಣ್ಣು ಮುಚ್ಚೊ ಕಂದ ನಿದ್ದೆಗುಮ್ಮ ಬರ್ತಾನೆ
ಉಳ್..ಳ್ಳ್ಳ್.... ಆಯಿ ಆಯಿ..... ಆಯಿ
 
ಅನಾಥ ಮಗುವಾದೆ ನಾನು
ಅಪ್ಪನು ಅಮ್ಮನು ಇಲ್ಲ
ಅಣ್ಣನು ತಮ್ಮನು ಇಲ್ಲ
ಭಿಕಾರಿ ದೊರೆಯಾದೆ ನಾನು
ಅತ್ತರೆ ಮುದ್ದಿಸೋರಿಲ್ಲ
ಸತ್ತರೆ ಹೊದ್ದಿಸೋರಿಲ್ಲ
ಎಂಜಲೇ ಮೃಷ್ಟಾನ್ನವಾಯ್ತು
ಬೈಗಳೇ ಮೈಗೂಡಿಹೋಯ್ತು
ಈ ಮನಸೇ ಕಲ್ಲಾಗಿಹೋಯ್ತು
 
|| ಅನಾಥ ಮಗುವಾದೆ ನಾನು
ಅಪ್ಪನು ಅಮ್ಮನು ಇಲ್ಲ
ಅಣ್ಣನು ತಮ್ಮನು ಇಲ್ಲ||
 
ಬೀದಿಗೆ ಒಂದು ನಾಯಿ ಕಾವಲಂತೆ
ನಾಯಿಗೂ ಒಂದು ರೊಟ್ಟಿ ಮೀಸಲಂತೆ
ನಾಯಿಗೂ ಹೀನವಾದೆ ನಾ..
ಮಾಳಿಗೆಗೆ ಒಂದು ಬೆಕ್ಕು ಕಾವಲಂತೆ
ಬೆಕ್ಕಿಗೂ ನಿತ್ಯ ಹಾಲು ತುಪ್ಪವಂತೆ
ಬೆಕ್ಕಿಗಿಂತ ಕೆಟ್ಟ ಶಕುನ ನಾ..
ತಿಂದೋರು ಎಲೆಯ ಬಿಸಾಡೋ ಹಾಗೆ
ಹೆತ್ತೋಳು ನನ್ನ ಎಸೆದಾಯ್ತು
ಸತ್ತೋರ ಎಡೆಯ ಕಾಗೆಗೆ ಇರಿಸಿ
ಹೆತ್ತೋರ ಕೂಗಿ ಕರೆದಾಯ್ತು
ಉತ್ತರ ಇಲ್ಲ ಪ್ರಶ್ನೆಯೇ ಎಲ್ಲ
ಕೇಳೋ ದೇವನೇ 
 
|| ಅನಾಥ ಮಗುವಾದೆ ನಾನು
ಅಪ್ಪನು ಅಮ್ಮನು ಇಲ್ಲ
ಅಣ್ಣನು ತಮ್ಮನು ಇಲ್ಲ||
 
ಉಳ್..ಳ್ಳ್ಳ್.... ಆಯಿ ಆಯಿ..... ಆಯಿ
ಹುಟ್ಟೋ ಮಕ್ಕಳೆಲ್ಲ ತೂಗೋ ತೊಟ್ಟಿಲಲ್ಲಿ
ನನ್ನ ನಿಟ್ಟರಲ್ಲ ತಿಪ್ಪೆ ತೊಟ್ಟಿಯಲ್ಲಿ
ನಾನು ಏನು ಪಾಪ ಮಾಡಿದೆ?
ಅರ್ಧ ರಾತ್ರಿಯಲ್ಲಿ ಅರ್ಧ ನಿದ್ದೆಯಲ್ಲಿ
ತಾಯಿ ಹಾಲುಎಲ್ಲಿ?
ಲಾಲಿ ಹಾಡು ಎಲ್ಲಿ?
ನಾನು ಯಾವ ದ್ರೋಹಮಾಡಿದೆ?
ಭೂಮಿಯ ತುಂಬ ಅನಾಥರೆಂಬ
ಕೋಟ್ಯಾನುಕೋಟಿ ಕೂಗು ಇದೆ
ಗ್ರಾಚಾರ ಬರೆಯೋ ಬ್ರಹ್ಮ
ನಿನಗೆ ಎಂದೆಂದೂ ಅವರ ಶಾಪ ಇದೆ
ಉತ್ತರ ಇಲ್ಲ ಪ್ರಶ್ನೆಯೇ ಎಲ್ಲ
ಹೇಳೋ ದೇವನೇ
 
|| ಅನಾಥ ಮಗುವಾದೆ ನಾನು
ಅಪ್ಪನು ಅಮ್ಮನು ಇಲ್ಲ
ಅಣ್ಣನು ತಮ್ಮನು ಇಲ್ಲ
ಭಿಕಾರಿ ದೊರೆಯಾದೆ ನಾನು
ಅತ್ತರೆ ಮುದ್ದಿಸೋರಿಲ್ಲ
ಸತ್ತರೆ ಹೊದ್ದಿಸೋರಿಲ್ಲ
ಎಂಜಲೇ ಮೃಷ್ಟಾನ್ನವಾಯ್ತು
ಬೈಗಳೇ ಮೈಗೂಡಿಹೋಯ್ತು
ಈ ಮನಸೇ ಕಲ್ಲಾಗಿಹೋಯ್ತು ||

Anaatha Maguvaade Nanu song lyrics from Kannada Movie Hosa Jeevana starring Shankarnag, Deepika, Ramesh Bhat, Lyrics penned by Hamsalekha Sung by K J Yesudas, Chandrika Gururaj, Music Composed by Hamsalekha, film is Directed by Bhargava and film is released on 1990
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ