Koghilegu Lyrics

in Hori

Video:

LYRIC

ಕೋಗಿಲೆಗೂ ಮುಜುಗರವ
ಮಾತಿನಲ್ಲೆ ತಂದೆ ನೀನು ಏನು ಸಂಗತಿ
ಹೂಗಳಿಗು ಸಡಗರವ
ನೋಟದಲ್ಲೆ ತಂದೆ ನೀನು ಏನು ಸಂಗತಿ
ಏನೊ ಇದೆ ಇರಬಹುದೆ
ಮನಸ್ಸಿನ ಕುಂಚವು ನಿನ್ನದೆ ಚಿತ್ರ ಬಿಡಿಸುತಿದೆ
ನನಗು ಅದೇ ಅನಿಸುತಿದೆ
ಹೃದಯದ ಹಕ್ಕಿಗೆ ರೆಕ್ಕೆ ಮೂಡಿ ಹಾರುತಿದೆ
ಕೋಗಿಲೆಗೂ ಮುಜುಗರವ
ಮಾತಿನಲ್ಲೆ ತಂದೆ ನೀನು ಏನು ಸಂಗತಿ
 
ಬಾನಿಗೆ ಚಂದಿರ ತಾರೆ ಬಾಳಲಿ ನಾವೆ ಚಂದಿರ ತಾರೆ
ನಾನೊಮ್ಮೆ ಕಂಡೆನು ಕನಸು ಆಯಿತು ಈಗ ಕನಸದು ನನಸು
ಗಾಳೀಲಿ ತಂಪಿನ ಹಾಗೆ ಇದು ಮೋಡದಿ ಮಳೆಯು ಅವಿತ ಹಾಗೆ
ಗಾಳೀಲಿ ತಂಪಿನ ಹಾಗೆ ಇದು ಮೋಡದಿ ಮಳೆಯು ಅವಿತ ಹಾಗೆ
ನಾನು ನೀನು ಸೇರಿ ಹೋಗುವ….
ಒಲವೇ ಒಲವೇ ನಿನ್ನ ಸವಿಯೇ ಸವಿಯೇ ಚಿನ್ನ
ಮಧುರ ಮಧುರ ಪ್ರೀತಿಯು
 
||ಕೋಗಿಲೆಗೂ ಮುಜುಗರವ
ಮಾತಿನಲ್ಲೆ ತಂದೆ ನೀನು ಏನು ಸಂಗತಿ||
 
ನಾ ಗೀಚಿದ ಪದಗಳು ಎಲ್ಲ ಕವಿತೆಗಳಾಗಿ ಮೂಡಿವೆ ಎಲ್ಲ
ಈ ನನ್ನ ಕವಿತೆ ಸಾರ ನೀನೆ ಅಲ್ಲವೇ
ಆ ಮೇಣವು ಕರಗದ ನಿನ್ನಲ್ಲಿ ನಾನು ಕರಗಿ ಹೋದೆ
ಈ ನನ್ನ ಬಾಳ ಬೆಳಕು ನೀನೆ ಅಲ್ಲವೆ
ಎದೆಯ ತುಂಬ ಹರಡಿಕೊಂಡ ಧಮನಿ ನೀನಾದೆ
ಮೊದಲ ಮಳೆಯ ಪರಿಮಳದಂತೆ ನನ್ನ ಉಸಿರಾದೆ
ಒಲವೇ ಒಲವೇ ನಿನ್ನ ಸವಿಯೇ ಸವಿಯೇ ಚಿನ್ನ
ಮಧುರ ಮಧುರ ಪ್ರೇಮವು
ಹೂಗಳಿಗು ಸಡಗರವ
ನೋಟದಲ್ಲೆ ತಂದೆ ನೀನು ಏನು ಸಂಗತಿ
 
||ಕೋಗಿಲೆಗೂ ಮುಜುಗರವ
ಮಾತಿನಲ್ಲೆ ತಂದೆ ನೀನು ಏನು ಸಂಗತಿ
ಏನೊ ಇದೆ ಇರಬಹುದೆ
ಮನಸ್ಸಿನ ಕುಂಚವು ನಿನ್ನದೆ ಚಿತ್ರ ಬಿಡಿಸುತಿದೆ
ನನಗು ಅದೇ ಅನಿಸುತಿದೆ
ಹೃದಯದ ಹಕ್ಕಿಗೆ ರೆಕ್ಕೆ ಮೂಡಿ ಹಾರುತಿದೆ||

Koghilegu song lyrics from Kannada Movie Hori starring Vinod Prabhakar, Gowri Munjal, Ramaneetu Chaudhari, Lyrics penned by V Srikanth Sung by Chithra, Hariharan, Music Composed by Renukumar, film is Directed by Nagendra Magadi and film is released on 2011