Bandare Nanna Jeevanadalli Lyrics

in Hennina Sedu

Video:

LYRIC

ಬಂದರೆ ನನ್ನ ಜೀವನದಲ್ಲಿ
ನಿನ್ನಂಥ ಚೆಲುವಾದ ಹುಡುಗಿ
ಕೊಂದರೆ ನಿನ್ನ ಕಣ್ಣುಗಳಲ್ಲಿ
ಈ ನನ್ನ ಗತಿಯೇನೆ ಬೆಡಗಿ
 
ಬಂದರೆ ನನ್ನ ಜೀವನದಲ್ಲಿ
ನಿನ್ನಂಥ ಸೊಗಸಾದ ಹುಡುಗ
ಕೊಂದರೆ ನಿನ್ನ ನಗುವನು ಚೆಲ್ಲಿ
ಈ ನನ್ನ ಗತಿಯೇನು ಹುಡುಗ
 
ಬಾಳಿನ ಹೂಬನದಲ್ಲಿ
ಹೊಸ ಚೈತ್ರದ ಚಿಗುರಾಗಿ ಬಂದೆ 
ಒಲವಿನ ಲತೆಯಾಗಿ
ನವಿಲಿನ ಹೊನಲಾಗಿ
ಹೊಸ ತೋರಣ ತಳಿರಾಗಿ ನಿಂದೆ
ಆಆಆ... ರಾಗಕೆ ಸಾವಿರ ರೂಪ
ಅನುರಾಗದ ನಿಜರೂಪ ಒಂದೇ
ಸ್ನೇಹವು ಹಲವು ಬಗೆ
ಬಂಧವು ಹಲವು ಬಗೆ
ಅನುಬಂಧಕೆ ನಿಜರೂಪ ಒಂದೇ
 
|| ಬಂದರೆ ನನ್ನ ಜೀವನದಲ್ಲಿ
ನಿನ್ನಂಥ ಚೆಲುವಾದ ಹುಡುಗಿ
ಕೊಂದರೆ ನಿನ್ನ ಕಣ್ಣುಗಳಲ್ಲಿ
ಈ ನನ್ನ ಗತಿಯೇನೆ ಬೆಡಗಿ
 
ಬಂದರೆ ನನ್ನ ಜೀವನದಲ್ಲಿ
ನಿನ್ನಂಥ ಸೊಗಸಾದ ಹುಡುಗ
ಕೊಂದರೆ ನಿನ್ನ ನಗುವನು ಚೆಲ್ಲಿ
ಈ ನನ್ನ ಗತಿಯೇನು ಹುಡುಗ….||
 
ಮಾತಿನ ಮಂಟಪದೆ
ಹೊಂಗನಸಿನ ಉಯ್ಯಾಲೆ ತೂಗಿ
ಅನುಭವ ಹೊಸ ಹೊಸದು
ತಲ್ಲಣ ಹೊಸ ಹೊಸದು
ನನ್ನೆದೆಯಲ್ಲಿ ನೀನಿಂದು ತಂದೆ
ಓಓಓ .... ಯೌವ್ವನ ತೇರಿನ ಮೇಲೆ
ವನದೇವಿಯ ಬರುವಂತೆ ಬಂದೆ
ಮದುವೆಯ ಇಂಗಿತವ ಮೌನದ ಸಮ್ಮತವ
ಕಣ್ಣಂಚಲಿ ನೀ ತೋರಿ ನಿಂದೆ
 
|| ಬಂದರೆ ನನ್ನ (ಲಲಲ)
ಜೀವನದಲ್ಲಿ (ಲಲಲ)
ನಿನ್ನಂಥ ಸೊಗಸಾದ ಹುಡುಗ (ತರರ  )
ಕೊಂದರೆ ನಿನ್ನ (ಲಲಲ)
ನಗುವನು ಚೆಲ್ಲಿ (ಲಲಲ)
ಈ ನನ್ನ ಗತಿಯೇನು ಹುಡುಗ (ತರರ)
 
ಬಂದರೆ ನನ್ನ (ಲಲಲ)
ಜೀವನದಲ್ಲಿ (ಲಲಲ)
ನಿನ್ನಂಥ ಚೆಲುವಾದ ಹುಡುಗಿ
ಕೊಂದರೆ ನಿನ್ನ (ಅಅ )
ಕಣ್ಣುಗಳಲ್ಲಿ (ಅಅ)
ಈ ನನ್ನ ಗತಿಯೇನೆ ಬೆಡಗಿ (ಅಅ )
ಲಲ್ಲಲಲ ಆಅಅಆಆ…..||

Bandare Nanna Jeevanadalli song lyrics from Kannada Movie Hennina Sedu starring Srinath, Kokila Mohan, Geetha, Lyrics penned by R N Jayagopal Sung by S P Balasubrahmanyam, S Janaki, Music Composed by Ramesh Naidu, film is Directed by A M Sameevulla and film is released on 1981