Nambu Nanna Nalle Lyrics

in Hendthighelbedi

LYRIC

ನಂಬು ನನ್ನ ನಲ್ಲೆ ಕೋಪ ಏತಕೆ...
ನಿನ್ನನು ಬಿಟ್ಟರೆ ಇಲ್ಲವೇ ನನ್ನಯ ಬಾಳು
ತಪ್ಪನು ಮನ್ನಿಸಿ ನನ್ನೀ ಮೊರೆಯಾ ಕೇಳು
ಸಂಗ ಬಿಡದೆ ಮಾತಾಡೇ
ಬೇಗ ಒಲಿದು ದಯೆತೋರೆ
ಭೂಮಿ ತಾಯಿ ಆಣೆ
ಬಾಷೆ ಕೊಡುವೇ ಬಾ ಬಾರೆ
ಅಕ್ಕ ತಂಗಿ ತಾಯಿ ಹಾಗೆ
ಬೇರೆ ನಾರಿ ನನ್ನ ಪಾಲಿಗೆ..

|| ನಂಬು ನನ್ನ ನಲ್ಲೆ... ಕೋಪ ಏತಕೆ ||
 
ಪ್ರೀತಿಯಿಂದ ಒಲಿದೋಳೆ ಕಣ್ಣು ಏಕೆ ಕೆಂಪಾಯ್ತು 
ಸುಖದ ಸುಗ್ಗಿ ತಂದೋಳೆ ಮನಸು ಏಕೆ ಕಲ್ಲಾಯ್ತು 
ಬೇಡ ಇಂಥ ಅನುಮಾನವೂ...
ಬಾಳದಾರಿಯಲ್ಲಿ ಎಂದೂ ನಡೆವೆ ನೀನು ನುಡಿದಂತೇ
ದೇವಿ ನೀನು ದಾಸ ನಾನು ನಲ್ಲೇ ಇನ್ನೂ ಬಿಡು ಚಿಂತೇ
ಒಳಗೇ ನೀನು ಹೊರಗೆ ನಾನು ಕರುಣೆ ನಿನಗೇ ಬಾರದೇನೂ

|| ನಂಬು ನನ್ನ ನಲ್ಲೇ.....  ಕೋಪ ಏತಕೆ ||
 
ತೋಳಿನಲ್ಲಿ ನೀ ಬಂದೆ ತಂಪು ಗಾಳಿ ಬಂದಂತೆ 
ಜೀವ ಭಾವ ಒಂದಾಯ್ತು ಹೂವು ಕಂಪು ಬೆರೆತಂತೆ 
ಒಲವೇ ನಮ್ಮ ಬದುಕಾಗಿದೆ 
ಏಳು ಹೆಜ್ಜೆ ಇಟ್ಟ ನಾವು ಏಳು ಜನ್ಮ ಸಂಗಾತಿ 
ಏಳು ಲೋಕ ನಾಚಬೇಕು ನೋಡಿ ನಮ್ಮ ಪ್ರೀತಿ 
ಏಳು ಸ್ವರವು ಸೇರಿದಂತೇ ಬಾಳು ಮಧುರ ಗೀತೆಯಂತೇ...  
 
|| ನಂಬು ನನ್ನ ನಲ್ಲೆ ಕೋಪ ಏತಕೆ
ನಿನ್ನನು ಬಿಟ್ಟರೆ ಇಲ್ಲವೆ ನನ್ನಯ ಬಾಳು 
ತಪ್ಪನು ಮನ್ನಿಸಿ ನನ್ನೀ ಮೊರೆಯಾ ಕೇಳು
ಸಂಗ ಬಿಡದೆ ಮಾತಾಡೇ
ಬೇಗ ಬಂದು ದಯೆತೋರೆ
ಭೂಮಿ ತಾಯಿ ಆಣೆ
ಬಾಷೆ ಕೊಡುವೇ ಬಾ ಬಾರೆ
ಅಕ್ಕ ತಂಗಿ ತಾಯಿ ಹಾಗೆ
ಬೇರೆ ನಾರಿ ನನ್ನ ಪಾಲಿಗೆ…||

Nambu Nanna Nalle song lyrics from Kannada Movie Hendthighelbedi starring Ananthnag, Mahalakshmi, Devaraj, Lyrics penned by Su Rudramurthy Shastry Sung by S P Balasubrahmanyam, Music Composed by Vijayanand, film is Directed by Dinesh Babu and film is released on 1989