ಗಂಡು : ಹೇ... ಹೇ.. ಹೇ... ಹೇ
ಇನ್ನು ಯಾಕ ಇನ್ನು ಯಾಕ
ಇನ್ನು ಯಾಕ ನಾಚ್ಕೊಂತೀಯೆ
ಹುಬ್ಬಳ್ಳಿ ಹೆಣ್ಣೇ.. ಹುಬ್ಬಳ್ಳಿ ಹೆಣ್ಣೇ..
ಹೆಣ್ಣು : ಹಿಂಗ ಯಾಕ ... ಹಿಂಗ ಯಾಕ...
ಹಿಂಗ ಯಾಕ ಹಿಂಗಾಡ್ತೀಯೊ
ಕಿಲಾಡಿ ಗಂಡೇ.. ಕಿಲಾಡಿ ಗಂಡೇ..
ಗಂಡು : ಇಳ್ಕಲ್ ಸೀರೆ ಮೈಗೆ ಮಣಭಾರ ಅಲ್ವೇನ...
ಹೆಣ್ಣು : ತೂಕದ ಸೀರೆ ಹೆಣ್ಣಿಗೆ..ಗಂಭೀರ ಅಲ್ವೇನ...
|| ಗಂಡು : ಇನ್ನು ಯಾಕ... (ಹೂಂಹೂಂಹೂಂ)
ಇನ್ನು ಯಾಕ (ಹೂಂಹೂಂಹೂಂ)
ಇನ್ನು ಯಾಕ ನಾಚ್ಕೊಂತೀಯೆ
ಹುಬ್ಬಳ್ಳಿ ಹೆಣ್ಣೇ.. ಹುಬ್ಬಳ್ಳಿ ಹೆಣ್ಣೇ..||
ಗಂಡು : ಹೂವಿಗೆ ಹೋಲ್ಯಾವ ಸಖಿ ನಿನ್ನ ಪಾದಗಳು...
ಪ್ರಾಯದ ಭಾರ ಅವು ಹ್ಯಾಂಗ ಹೊರುತಾವೆ
ಹೆಣ್ಣು : ತಾಳಿಯ ಬಂಗಾರ ಕರಿಮಣಿ ಎಳೆಯಾಗ
ಜೀವನ ಭಾರ ಹೊರುವಂಗ ಹೊರತಾವ
ಗಂಡು : ಹುಣ್ಣಿಮೆ ಊಟಕ ಚಿನ್ನವು ಯಾತಕ
ಹೆಣ್ಣು : ನಾಚಿಕೆ ಇಲ್ಲದ ಸರಸವು ಯಾತಕ
ಗಂಡು : ಬೇಸಿಗೆಯಾಗ ರವಿಕೆ ಬಿಗಿಯಾಗುತ್ತಿಯೇನ
ಹೆಣ್ಣು : ಮನಸ್ಸು ಬಿಗಿದರೆ ಹೆಣ್ಣು ಶಶಿಯಾಗುತ್ತಾಳೇನ
|| ಗಂಡು: ಇನ್ನು ಯಾಕ ಇನ್ನು ಯಾಕ
ಇನ್ನು ಯಾಕ ನಾಚ್ಕೊಂತೀಯೆ
ಹುಬ್ಬಳ್ಳಿ ಹೆಣ್ಣೇ.. ಹುಬ್ಬಳ್ಳಿ ಹೆಣ್ಣೇ..
ಹೆಣ್ಣು : ಹಿಂಗ ಯಾಕ ... ಹಿಂಗ ಯಾಕ...
ಹಿಂಗ ಯಾಕ ಹಿಂಗಾಡ್ತೀಯೊ
ಕಿಲಾಡಿ ಗಂಡೇ.. ಕಿಲಾಡಿ ಗಂಡೇ.. ||
ಗಂಡು : ಕಾಮನು ಬಂದಾನ ಕದನಕ ಕರೆದಾನ
ನನ್ನ ಪ್ರಾಣ ನಿನ್ನ ಎದೆಯಾಗ ಎರದೇನ..
ಹೆಣ್ಣು : ಹೂವಿನ ಬಾಣನ ಕಾಮನು ಬಿಡತಾನ
ನಿನ್ನ ಪ್ರಾಣಕೆಂದು ನಾ ಪ್ರಾಣ ಬಿಡಲೇನ
ಗಂಡು : ನನಗೆ ನೀ ಗೌಡತಿ ನಿನಗೆ ನಾ ಮೂಗುತಿ
ಹೆಣ್ಣು : ಮೂಗುತಿ ಎನ್ನುತಿ ಉಸಿರಿಗೆ ಕಾಡುತಿ
ಗಂಡು : ಇಳ್ಕಲ್ ಸೀರೆ ಮೈಗೆ ಮಣಭಾರ ಅಲ್ವೇನ...
ಹೆಣ್ಣು : ತೂಕದ ಸೀರೆ ಹೆಣ್ಣಿಗೆ..ಗಂಭೀರ ಅಲ್ಲೇನ...
|| ಹೆಣ್ಣು : ಹಿಂಗ ಯಾಕ ... ಹಿಂಗ ಯಾಕ...
ಹಿಂಗ ಯಾಕ ಹಿಂಗಾಡ್ತೀಯೊ
ಕಿಲಾಡಿ ಗಂಡೇ.. ಕಿಲಾಡಿ ಗಂಡೇ..
ಗಂಡು: ಇನ್ನು ಯಾಕ ಇನ್ನು ಯಾಕ
ಇನ್ನು ಯಾಕ ನಾಚ್ಕೊಂತೀಯೆ
ಹುಬ್ಬಳ್ಳಿ ಹೆಣ್ಣೇ.. ಹುಬ್ಬಳ್ಳಿ ಹೆಣ್ಣೇ
ಹುಬ್ಬಳ್ಳಿ ಹೆಣ್ಣೇ.. ಹುಬ್ಬಳ್ಳಿ ಹೆಣ್ಣೇ..
ಹೆಣ್ಣು : ಸ್ವಾಮೀ ... ಸ್ವಾಮೀ ... ಸ್ವಾಮೀ ...
ಸ್ವಾಮೀ ... (ಅಮ್ಮಾ ಕರದ್ರ.. )