ಗಗನಕ್ಕೆ ಮುದ್ದು ಮಾಡುವ
ಗಾಳಿಗೆ ಗುದ್ದು ನೀಡುವ
ಮೋಡದ ನಿದ್ದೆ ಕೆಡಿಸುವ
ಸೂರ್ಯನನ್ನು ಭೇಟಿ ಮಾಡಿ
ಕಷ್ಟಸುಖ ಮಾತನಾಡಿ
ಭೂಮಿಗೆ ಕರೆಯುವ..
ಪಾರ್ಟಿಯ ಕೊಡಿಸುವ
ಗಾಳಿಪಟ ಗಾಳಿಪಟ
ಗಗಗಗ ಗಾಳಿಪಟ
ಯೌವ್ವನ ತೀರ ಘೋರ
ಅನಿಸೋ ಟೈಮಲೇ
ಯಾವ್ದೊ ಚೂಡಿದಾರವು ಚಿಮ್ಮಿಬರುವುದು
ಆಪ್ ಮ್ಯಾಪ್ಲಿ ಹುಡುಕಿದರೆಂದು ಸಿಕ್ಕದು
ರೋಡು ಸೈಡಿನಲ್ಲೆ ನಲ್ಮೆ ಸಿಗುವುದು
ಪ್ರೇಮವೂ ಕಾಮನ ಬಿಲ್ಲು
ಸ್ನೇಹವೂ ಕ್ಯಾಂಟೀನ್ ಬಿಲ್ಲು
ಫ್ರೆಂಡಿಗಿಂತ ಹುಡ್ಗಿ ಹೆಚ್ಚ
ಹುಡ್ಗಿಗಿಂತ ಫ್ರೆಂಡು ಹೆಚ್ಚ
ಯಾರನು ಕೇಳುವ..
ಪ್ರೀತಿಸಿ ನೋಡುವ
ಗಾಳಿಪಟ ಗಾಳಿಪಟ
ಗಗಗಗ ಗಾಳಿಪಟ
ಗಾಳಿ ಬೀಸಲು ಎಂತ ಸಂತಸ ಹೆರಳಿಗೆ
ಬಿಡುಗಡೆಗೊಂಡ ಖೈದಿಯ ಸಂಭ್ರಮ ಸೆರಗಿಗೆ
ಖಾಲಿ ಹೃದಯ ಪೋಲಿ ಆಗುವ ಘಳಿಗೆಗೆ
ನೀಲಿ ಬಣ್ನದ ಧೂಳು ಬಂತು ಕನಸಿಗೆ
ಮಿಡಿವುದು ಗುಂಡಿಗೆ
ತಿಳಿವುದು ಫ್ರೆಂಡಿಗೆ
ಒಂದೇ ಚಡ್ಡಿ ಬೈಟು ಮಾಡಿ
ದುಡ್ದಿಸೇರೊತನಕ ಸೇರಿ ಬೆಳೆಯುವ
ಸ್ನೇಹಿತರಾಗೆ ಉಳಿಯುವ
ಗಾಳಿಪಟ ಗಾಳಿಪಟ
ಗಗಗಗ ಗಾಳಿಪಟ