ಈ ಸೃಷ್ಟಿ ಎಂಥಾ ಚೆಲುವಿನಾಲಯ
ಸೌಂದರ್ಯದ ಈ ನೆಲೆ ದೇವಾಲಯ
ಈ ಸೃಷ್ಟಿ ಎಂಥಾ ಚೆಲುವಿನಾಲಯ
ಸೌಂದರ್ಯದ ಈ ನೆಲೆ ದೇವಾಲಯ
ಝಳ ಝಳ ಝಳ ಹರಿವ ನೀರ ಧಾರೆ
ಫಳ ಫಳ ಫಳ ಹೊಳೆವ ಕೋಟಿ ತಾರೆ
ಝಳ ಝಳ ಝಳ ಹರಿವ ನೀರ ಧಾರೆ
ಫಳ ಫಳ ಫಳ ಹೊಳೆವ ಕೋಟಿ ತಾರೆ
ಸಂಜೆ ಮುಗಿಲ ಸಾಲು, ಸಾವಿರ ಝರಿ ಸೀರೆ
ಸಂಜೆ ಮುಗಿಲ ಸಾಲು, ಸಾವಿರ ಝರಿ ಸೀರೆ
ತೇಲುತ್ತಿದೆ ಬೆಳ್ಳಕ್ಕಿಯ ಮಾಲೆ….
|| ಈ ಸೃಷ್ಟಿ ಎಂಥಾ ಚೆಲುವಿನಾಲಯ
ಸೌಂದರ್ಯದ ಈ ನೆಲೆ ದೇವಾಲಯ…||
ಹೂಗಿಡ ಬಳ್ಳಿಗೆ ಬೆಂಕಿಯು ತಾಗಿ
ಧಗ ಧಗ ಉರಿಯುತಿದೆ
ಬೀದಿ ಬೀದಿಯಲ್ಲಿ ಬಡವರ ರಕ್ತ
ಚಿಮ್ಮುತ ಹರಿಯುತಿದೆ
ಹೂಗಿಡ ಬಳ್ಳಿಗೆ ಬೆಂಕಿಯು ತಾಗಿ
ಧಗ ಧಗ ಉರಿಯುತಿದೆ
ಬೀದಿ ಬೀದಿಯಲ್ಲಿ ಬಡವರ ರಕ್ತ
ಚಿಮ್ಮುತ ಹರಿಯುತಿದೆ
ಹಕ್ಕಿಯ ಕೊರಳಿಗೆ ಹಗ್ಗವು ಬಿಗಿದು
ಕಂಬನಿ ಸುರಿಯುತಿದೆ
ಹಸಿವಿನ ತಾಪ ತಾಳದೆ ಲೋಕ
ನಿಟ್ಟುಸಿರಾಡುತಿದೆ.. ಆಆಆ...
ಶಿಖರದಿಂದ ಭೂಮಿಗಿಳಿವ ಬಿಸಿಲು
ಬಿಸಿಲ ಕಾಸಿ ತಲೆದೂಗುವ ಹಸಿರು
ಶಿಖರದಿಂದ ಭೂಮಿಗಿಳಿವ ಬಿಸಿಲು
ಬಿಸಿಲ ಕಾಸಿ ತಲೆದೂಗುವ ಹಸಿರು
ಗಾಳಿ ಎಂಬುದೆಲ್ಲ ಬರಿಯ ಸುಳ್ಳು ಹೆಸರು
ಗಾಳಿ ಎಂಬುದೆಲ್ಲ ಬರಿಯ ಸುಳ್ಳು ಹೆಸರು
ನಿಜದಲಿ ಅದು ಭಗವಂತನ ಉಸಿರು
|| ಈ ಸೃಷ್ಟಿ ಎಂಥಾ ಚೆಲುವಿನಾಲಯ
ಸೌಂದರ್ಯದ ಈ ನೆಲೆ ದೇವಾಲಯ…||
ದುಡಿಯುವ ಕೈಗೆ ಕೆಲಸವೆ ಇಲ್ಲ ಆಸೆಯು ಬರಡಾಗಿ
ದುಡಿಯುವ ಕೈಗೆ ಕೆಲಸವೆ ಇಲ್ಲ ಆಸೆಯು ಬರಡಾಗಿ
ಬಾಳಿಗೆ ಬರವಸೆ ಬೆಳಕೆ ಇಲ್ಲ ಜೀವನ ಕುರುಡಾಗಿ
ಬಾಳಿಗೆ ಬರವಸೆ ಬೆಳಕೆ ಇಲ್ಲ ಜೀವನ ಕುರುಡಾಗಿ
ಬಿಸಿಲಿನ ಬೇಗೆಗೆ ಬಾಡಿದೆ ಜಗವು ಬೂದಿಯು ತಾನಾಗಿ
ಬಡವರ ಪಾಲಿಗೆ ದೇವರೆ ಇಲ್ಲ ಧನಿಕರ ವಶವಾಗಿ
ಬಡವರ ಪಾಲಿಗೆ ದೇವರೆ ಇಲ್ಲ ಧನಿಕರ ವಶವಾಗಿ..
ಈ ಸೃಷ್ಟಿ ಎಂಥಾ ಚೆಲುವಿನಾಲಯ
ಸೌಂದರ್ಯದ ಈ ನೆಲೆ ದೇವಾಲಯ
ಈ ಸೃಷ್ಟಿ ಎಂಥಾ ಚೆಲುವಿನಾಲಯ
ಸೌಂದರ್ಯದ ಈ ನೆಲೆ ದೇವಾಲಯ
ಝಳ ಝಳ ಝಳ ಹರಿವ ನೀರ ಧಾರೆ
ಫಳ ಫಳ ಫಳ ಹೊಳೆವ ಕೋಟಿ ತಾರೆ
ಝಳ ಝಳ ಝಳ ಹರಿವ ನೀರ ಧಾರೆ
ಫಳ ಫಳ ಫಳ ಹೊಳೆವ ಕೋಟಿ ತಾರೆ
ಸಂಜೆ ಮುಗಿಲ ಸಾಲು, ಸಾವಿರ ಝರಿ ಸೀರೆ
ಸಂಜೆ ಮುಗಿಲ ಸಾಲು, ಸಾವಿರ ಝರಿ ಸೀರೆ
ತೇಲುತ್ತಿದೆ ಬೆಳ್ಳಕ್ಕಿಯ ಮಾಲೆ….
|| ಈ ಸೃಷ್ಟಿ ಎಂಥಾ ಚೆಲುವಿನಾಲಯ
ಸೌಂದರ್ಯದ ಈ ನೆಲೆ ದೇವಾಲಯ…||
ಹೂಗಿಡ ಬಳ್ಳಿಗೆ ಬೆಂಕಿಯು ತಾಗಿ
ಧಗ ಧಗ ಉರಿಯುತಿದೆ
ಬೀದಿ ಬೀದಿಯಲ್ಲಿ ಬಡವರ ರಕ್ತ
ಚಿಮ್ಮುತ ಹರಿಯುತಿದೆ
ಹೂಗಿಡ ಬಳ್ಳಿಗೆ ಬೆಂಕಿಯು ತಾಗಿ
ಧಗ ಧಗ ಉರಿಯುತಿದೆ
ಬೀದಿ ಬೀದಿಯಲ್ಲಿ ಬಡವರ ರಕ್ತ
ಚಿಮ್ಮುತ ಹರಿಯುತಿದೆ
ಹಕ್ಕಿಯ ಕೊರಳಿಗೆ ಹಗ್ಗವು ಬಿಗಿದು
ಕಂಬನಿ ಸುರಿಯುತಿದೆ
ಹಸಿವಿನ ತಾಪ ತಾಳದೆ ಲೋಕ
ನಿಟ್ಟುಸಿರಾಡುತಿದೆ.. ಆಆಆ...
ಶಿಖರದಿಂದ ಭೂಮಿಗಿಳಿವ ಬಿಸಿಲು
ಬಿಸಿಲ ಕಾಸಿ ತಲೆದೂಗುವ ಹಸಿರು
ಶಿಖರದಿಂದ ಭೂಮಿಗಿಳಿವ ಬಿಸಿಲು
ಬಿಸಿಲ ಕಾಸಿ ತಲೆದೂಗುವ ಹಸಿರು
ಗಾಳಿ ಎಂಬುದೆಲ್ಲ ಬರಿಯ ಸುಳ್ಳು ಹೆಸರು
ಗಾಳಿ ಎಂಬುದೆಲ್ಲ ಬರಿಯ ಸುಳ್ಳು ಹೆಸರು
ನಿಜದಲಿ ಅದು ಭಗವಂತನ ಉಸಿರು
|| ಈ ಸೃಷ್ಟಿ ಎಂಥಾ ಚೆಲುವಿನಾಲಯ
ಸೌಂದರ್ಯದ ಈ ನೆಲೆ ದೇವಾಲಯ…||
ದುಡಿಯುವ ಕೈಗೆ ಕೆಲಸವೆ ಇಲ್ಲ ಆಸೆಯು ಬರಡಾಗಿ
ದುಡಿಯುವ ಕೈಗೆ ಕೆಲಸವೆ ಇಲ್ಲ ಆಸೆಯು ಬರಡಾಗಿ
ಬಾಳಿಗೆ ಬರವಸೆ ಬೆಳಕೆ ಇಲ್ಲ ಜೀವನ ಕುರುಡಾಗಿ
ಬಾಳಿಗೆ ಬರವಸೆ ಬೆಳಕೆ ಇಲ್ಲ ಜೀವನ ಕುರುಡಾಗಿ
ಬಿಸಿಲಿನ ಬೇಗೆಗೆ ಬಾಡಿದೆ ಜಗವು ಬೂದಿಯು ತಾನಾಗಿ
ಬಡವರ ಪಾಲಿಗೆ ದೇವರೆ ಇಲ್ಲ ಧನಿಕರ ವಶವಾಗಿ
ಬಡವರ ಪಾಲಿಗೆ ದೇವರೆ ಇಲ್ಲ ಧನಿಕರ ವಶವಾಗಿ..
Ee Srushti Entha Cheluvinaalaya song lyrics from Kannada Movie Elu Sutthina Kote starring Ambarish, Gowthami, Kavya, Lyrics penned by Lakshminarayana Bhat Sung by S P Balasubrahmanyam, Vani Jairam, Music Composed by L Vaidyanathan, film is Directed by B C Gowrishankar and film is released on 1988