Harushada Hoobana Lyrics

ಹರುಷದ ಹೂಬನ Lyrics

in Dharma Peeta

in ಧರ್ಮ ಪೀಠ

LYRIC

Song Details Page after Lyrice

-
ಹರುಷದ ಹೂಬನ ಕನ್ನಡ ತಾಯಿಯ ಆಲಯವು
ಹೃದಯವ ಸೇರಿಸೊ ಕನ್ನಡ ರಾಜ್ಯದ ಉತ್ಸವವು
ಬನ್ನಿ ಎಲ್ಲ ಸೇರೋಣ ತಾಯಿ ಪೂಜೆ ಮಾಡೋಣ
ಮಕ್ಕಳೆಲ್ಲ ಒಂದಾಗಿ ತಾಯಿ ಕೀರ್ತಿ ಹಾಡೋಣ
ತೆರೆದಾಡಲಿ ಮಾತೆಯ ವೈಭವವು
ಹರುಷದ ಹೂಬನ ಕನ್ನಡ ತಾಯಿಯ ಆಲಯವು
ಹೃದಯವ ಸೇರಿಸೊ ಕನ್ನಡ ರಾಜ್ಯದ ಉತ್ಸವವು
 
ರನ್ನ ಪಂಪರ ಕಾವ್ಯಮಾಲೆಯೆ ಮಾತೆಯ ಕೊರಳಿಗೆ ಹಾರ
ಕುವೆಂಪು ಬೇಂದ್ರೆ ಕವನ ಪುಷ್ಪದೆ ಮಾತೆಯ ಅಲಂಕಾರ
ಸಂಗೊಳ್ಳಿರಾಯ ಕಿತ್ತೂರು ರಾಣಿ ವೀರಚರಿತೆಯೆ ಜ್ಯೋತಿ
ಸರ್ವಜ್ಞ ಬಸವರ ವಚನಾಮೃತದೆ  ಪಂಚಾಮೃತ ಅಭಿಷೇಕ
ಪೂಜೆ ಮಾಡೋಣ ಹಾಡು ಹಾಡೋಣ
ಪೂಜೆ ಮಾಡೋಣ ಹಾಡು ಹಾಡೋಣ
ಈ ಒಲವಿಂದ ಕೈ ನೀಡುವ ದುಡಿಯೋಕೆ ಸೈ ಎನ್ನುವ
ಮನಬಿಚ್ಚಿ ಒಂದಾಗುವ ಸ್ನೇಹಕ್ಕೆ ಜೈ ಎನ್ನವು
ಮರೆಯದು ಎಂದಿಗು ಈ ಶುಭವೇಳೆಯ ಸಂತಸವು
ಮರೆಯದು ಎಂದಿಗು ಈ ಶುಭವೇಳೆಯ ಸಂತಸವು
 
||ಹರುಷದ ಹೂಬನ ಕನ್ನಡ ತಾಯಿಯ ಆಲಯವು||
 
ದೀನ ದಲಿತರ ಸೇವೆ ಮಾಡುತ ದೂಡುವ ಸ್ವಾರ್ಥವ ದೂರ
ದ್ವೇಷ ರೋಷದ ಬೆಂಕಿ ಆರಿಸಿ ಅಟ್ಟುವ ಪ್ರೇಮದ ಹಾರ
ನಮ್ಮ ಮಣ್ಣಿದು ನಮ್ಮ ನೀರಿದು ಮಾಡುವ ಧೈರ್ಯದೆ ಘೋಷ
ಹೆಮ್ಮೆಯಿಂದಲಿ ಅಣ್ಣ ತಮ್ಮರು ಹಂಚಿಕೊಳ್ಳುವ ಸಂತೋಷ
ಬನ್ನಿ ಸೇರೋಣ ನಲಿದಾಡೋಣ
ಈ ತಾಳಕ್ಕೆ ಕೈ ತಟ್ಟಿರಿ ರಾಗಕ್ಕೆ ಮೈ ತೂಗಿರಿ
ಚಿಕ್ಕೋರು ಭೇಷ್ ದೊಡ್ಡೋರು ಮುಂದಾಗಿರಿ
ನೆನೆಯುವ ನಿತ್ಯವು ಈ ಸವಿಹಬ್ಬದ ಔತಣ
ನೆನೆಯುವ ನಿತ್ಯವು ಈ ಸವಿಹಬ್ಬದ ಔತಣವ
ಬನ್ನಿ ಎಲ್ಲ ಸೇರೋಣ ತಾಯಿ ಪೂಜೆ ಮಾಡೋಣ
ಮಕ್ಕಳೆಲ್ಲ ಒಂದಾಗಿ ತಾಯಿ ಕೀರ್ತಿ ಹಾಡೋಣ
ಮೆರೆದಾಡಲಿ ಮಾತೆಯ ವೈಭವವು
 
||ಹರುಷದ ಹೂಬನ ಕನ್ನಡ ತಾಯಿಯ ಆಲಯವು||
||ಹರುಷದ ಹೂಬನ ಕನ್ನಡ ತಾಯಿಯ ಆಲಯವು||
||ಹರುಷದ ಹೂಬನ ಕನ್ನಡ ತಾಯಿಯ ಆಲಯವು||

-
ಹರುಷದ ಹೂಬನ ಕನ್ನಡ ತಾಯಿಯ ಆಲಯವು
ಹೃದಯವ ಸೇರಿಸೊ ಕನ್ನಡ ರಾಜ್ಯದ ಉತ್ಸವವು
ಬನ್ನಿ ಎಲ್ಲ ಸೇರೋಣ ತಾಯಿ ಪೂಜೆ ಮಾಡೋಣ
ಮಕ್ಕಳೆಲ್ಲ ಒಂದಾಗಿ ತಾಯಿ ಕೀರ್ತಿ ಹಾಡೋಣ
ತೆರೆದಾಡಲಿ ಮಾತೆಯ ವೈಭವವು
ಹರುಷದ ಹೂಬನ ಕನ್ನಡ ತಾಯಿಯ ಆಲಯವು
ಹೃದಯವ ಸೇರಿಸೊ ಕನ್ನಡ ರಾಜ್ಯದ ಉತ್ಸವವು
 
ರನ್ನ ಪಂಪರ ಕಾವ್ಯಮಾಲೆಯೆ ಮಾತೆಯ ಕೊರಳಿಗೆ ಹಾರ
ಕುವೆಂಪು ಬೇಂದ್ರೆ ಕವನ ಪುಷ್ಪದೆ ಮಾತೆಯ ಅಲಂಕಾರ
ಸಂಗೊಳ್ಳಿರಾಯ ಕಿತ್ತೂರು ರಾಣಿ ವೀರಚರಿತೆಯೆ ಜ್ಯೋತಿ
ಸರ್ವಜ್ಞ ಬಸವರ ವಚನಾಮೃತದೆ  ಪಂಚಾಮೃತ ಅಭಿಷೇಕ
ಪೂಜೆ ಮಾಡೋಣ ಹಾಡು ಹಾಡೋಣ
ಪೂಜೆ ಮಾಡೋಣ ಹಾಡು ಹಾಡೋಣ
ಈ ಒಲವಿಂದ ಕೈ ನೀಡುವ ದುಡಿಯೋಕೆ ಸೈ ಎನ್ನುವ
ಮನಬಿಚ್ಚಿ ಒಂದಾಗುವ ಸ್ನೇಹಕ್ಕೆ ಜೈ ಎನ್ನವು
ಮರೆಯದು ಎಂದಿಗು ಈ ಶುಭವೇಳೆಯ ಸಂತಸವು
ಮರೆಯದು ಎಂದಿಗು ಈ ಶುಭವೇಳೆಯ ಸಂತಸವು
 
||ಹರುಷದ ಹೂಬನ ಕನ್ನಡ ತಾಯಿಯ ಆಲಯವು||
 
ದೀನ ದಲಿತರ ಸೇವೆ ಮಾಡುತ ದೂಡುವ ಸ್ವಾರ್ಥವ ದೂರ
ದ್ವೇಷ ರೋಷದ ಬೆಂಕಿ ಆರಿಸಿ ಅಟ್ಟುವ ಪ್ರೇಮದ ಹಾರ
ನಮ್ಮ ಮಣ್ಣಿದು ನಮ್ಮ ನೀರಿದು ಮಾಡುವ ಧೈರ್ಯದೆ ಘೋಷ
ಹೆಮ್ಮೆಯಿಂದಲಿ ಅಣ್ಣ ತಮ್ಮರು ಹಂಚಿಕೊಳ್ಳುವ ಸಂತೋಷ
ಬನ್ನಿ ಸೇರೋಣ ನಲಿದಾಡೋಣ
ಈ ತಾಳಕ್ಕೆ ಕೈ ತಟ್ಟಿರಿ ರಾಗಕ್ಕೆ ಮೈ ತೂಗಿರಿ
ಚಿಕ್ಕೋರು ಭೇಷ್ ದೊಡ್ಡೋರು ಮುಂದಾಗಿರಿ
ನೆನೆಯುವ ನಿತ್ಯವು ಈ ಸವಿಹಬ್ಬದ ಔತಣ
ನೆನೆಯುವ ನಿತ್ಯವು ಈ ಸವಿಹಬ್ಬದ ಔತಣವ
ಬನ್ನಿ ಎಲ್ಲ ಸೇರೋಣ ತಾಯಿ ಪೂಜೆ ಮಾಡೋಣ
ಮಕ್ಕಳೆಲ್ಲ ಒಂದಾಗಿ ತಾಯಿ ಕೀರ್ತಿ ಹಾಡೋಣ
ಮೆರೆದಾಡಲಿ ಮಾತೆಯ ವೈಭವವು
 
||ಹರುಷದ ಹೂಬನ ಕನ್ನಡ ತಾಯಿಯ ಆಲಯವು||
||ಹರುಷದ ಹೂಬನ ಕನ್ನಡ ತಾಯಿಯ ಆಲಯವು||
||ಹರುಷದ ಹೂಬನ ಕನ್ನಡ ತಾಯಿಯ ಆಲಯವು||

Harushada Hoobana song lyrics from Kannada Movie Dharma Peeta starring Shashikumar, Pooja, Srinath, Lyrics penned by R N Jayagopal Sung by S P Balasubrahmanyam, Chorus, Music Composed by Upendra Kumar, film is Directed by Om Saiprakash and film is released on 1993
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ