-
ದೂರವಾದೆಯೆಲ್ಲೊ ಹೆತ್ತವರ ನೆನೆಯದೆ
ತಾಯಿತಂದೆ ಇಬ್ಬರ ಮಡಿಲಗುಡಿಯಿಂದಲೆ
ಕರು ಇಲ್ಲದೆ ಹಸು ಅಲ್ಲಿದೆ ಎದೆಹಾಲಿನ ಹಸಿವಿಲ್ಲದೆ
ಕರುಳಲು ಕಣ್ಣೀರಿದೆ ಅಮ್ಮಾ
ದೂರವಾದೆಯೆಲ್ಲೊ ಹೆತ್ತವರ ನೆನೆಯದೆ
ತಾಯಿತಂದೆ ಇಬ್ಬರ ಮಡಿಲಗುಡಿಯಿಂದಲೆ
ಸಾವಿರ ಜನ್ಮದ ಪುಣ್ಯವ ಹೊತ್ತು
ಅಮ್ಮನ ಗರ್ಭದ ಒಳಗೆ ಹೆಜ್ಜೆ ಇಟ್ಟವನು
ಕಾಣದ ಕೇಳದ ಪಾಪವ ಹೊತ್ತು
ಭೂಗರ್ಭದಲಿ ಜ್ಞಾನಿಯಾಗಿ ಹೋದವನು
ಇಲ್ಲಿ ಆಗಸದಷ್ಟು ಅಕ್ಕರೆಯಿದ್ದರು ಸವಿಯುವ ಭಾಗ್ಯ ನಿನಗಿಲ್ಲ
ಇಲ್ಲಿ ಕರುಣೆ ಮಮತೆ ವಾತ್ಸಲ್ಯಗಳ ಗಂಧ ಗಾಳಿಯೆ ನಿನಗಿಲ್ಲ
ಮಗುವೇ
ಮಾಯಲೋಕದ ಮರ್ಮ ಅರಿಯದೆ ಹೋದೆಯಲ್ಲೊ ಕಂದ
ಮಡಿಲಸ್ವರ್ಗವೆ ಮಸಣವಾದರೆ ಬದುಕಿ ಏನು ಚೆಂದ
ಬರಿ ಸ್ವಾರ್ಥಲೋಕದ ಸಂತೆಯಲ್ಲಿ ನನ್ನ ಲಾಲಿ ಕಳೆದುಹೋಯ್ತೆ
ಸುವ್ವಾಲಿ ಸವೆದುಹೋಯ್ತೆ
ಎದೆಹಾಲು ಇಂಗಿಹೋಯ್ತೆ
ಈ ಲೋಕವೆ ಸುಳ್ಳು ಎಲ್ಲ ಜನಗಳು ಸುಳ್ಳು
ಯಾರನು ನಂಬದಿರು ನಾನಿರುವೆ ಜೊತೆಗೆ
ಬದುಕಿರುವವರೆಗೆ ಕೊನೆವರೆಗೆ
-
ದೂರವಾದೆಯೆಲ್ಲೊ ಹೆತ್ತವರ ನೆನೆಯದೆ
ತಾಯಿತಂದೆ ಇಬ್ಬರ ಮಡಿಲಗುಡಿಯಿಂದಲೆ
ಕರು ಇಲ್ಲದೆ ಹಸು ಅಲ್ಲಿದೆ ಎದೆಹಾಲಿನ ಹಸಿವಿಲ್ಲದೆ
ಕರುಳಲು ಕಣ್ಣೀರಿದೆ ಅಮ್ಮಾ
ದೂರವಾದೆಯೆಲ್ಲೊ ಹೆತ್ತವರ ನೆನೆಯದೆ
ತಾಯಿತಂದೆ ಇಬ್ಬರ ಮಡಿಲಗುಡಿಯಿಂದಲೆ
ಸಾವಿರ ಜನ್ಮದ ಪುಣ್ಯವ ಹೊತ್ತು
ಅಮ್ಮನ ಗರ್ಭದ ಒಳಗೆ ಹೆಜ್ಜೆ ಇಟ್ಟವನು
ಕಾಣದ ಕೇಳದ ಪಾಪವ ಹೊತ್ತು
ಭೂಗರ್ಭದಲಿ ಜ್ಞಾನಿಯಾಗಿ ಹೋದವನು
ಇಲ್ಲಿ ಆಗಸದಷ್ಟು ಅಕ್ಕರೆಯಿದ್ದರು ಸವಿಯುವ ಭಾಗ್ಯ ನಿನಗಿಲ್ಲ
ಇಲ್ಲಿ ಕರುಣೆ ಮಮತೆ ವಾತ್ಸಲ್ಯಗಳ ಗಂಧ ಗಾಳಿಯೆ ನಿನಗಿಲ್ಲ
ಮಗುವೇ
ಮಾಯಲೋಕದ ಮರ್ಮ ಅರಿಯದೆ ಹೋದೆಯಲ್ಲೊ ಕಂದ
ಮಡಿಲಸ್ವರ್ಗವೆ ಮಸಣವಾದರೆ ಬದುಕಿ ಏನು ಚೆಂದ
ಬರಿ ಸ್ವಾರ್ಥಲೋಕದ ಸಂತೆಯಲ್ಲಿ ನನ್ನ ಲಾಲಿ ಕಳೆದುಹೋಯ್ತೆ
ಸುವ್ವಾಲಿ ಸವೆದುಹೋಯ್ತೆ
ಎದೆಹಾಲು ಇಂಗಿಹೋಯ್ತೆ
ಈ ಲೋಕವೆ ಸುಳ್ಳು ಎಲ್ಲ ಜನಗಳು ಸುಳ್ಳು
ಯಾರನು ನಂಬದಿರು ನಾನಿರುವೆ ಜೊತೆಗೆ
ಬದುಕಿರುವವರೆಗೆ ಕೊನೆವರೆಗೆ