ಬೆಟ್ಟದ ತುದಿಯಲ್ಲಿ ಬೆಳಕಿನ ಮುಡಿಚೆಲ್ಲಿ
ಬಾನಿನ ಅಂಚಲ್ಲಿ ಬರೆದಿದೆ ರಂಗವಲ್ಲಿ
ಕಾಡಿನ ಸೊಬಗು ಮನಸನು ಸೆಳೆದು
ಪುಳಕವು ಮೈಯಲ್ಲಿ
ಕಣಿವೆಯ ಮಡಿಲಲ್ಲಿ ಹಸಿರಿನ ರತ್ನಗಂಬಳಿ
ಬಗೆ ಬಗೆ ಹೂವರಳಿ ಬನಸಿರಿ ಬುವಿಯಲ್ಲಿ
ಪ್ರಕೃತಿ ಬೆಡಗು ಹೃದಯವ ಕದ್ದು
ಸಂತಸ ಕಣ್ಣಲ್ಲಿ
ಕುಣಿಯುತ ಹಾಡೋಣ... ನಲಿಯುತ ಸಾಗೋಣ
ಕುಣಿಯುತ ಹಾಡೋಣ... ನಲಿಯುತ ಸಾಗೋಣ
ಬೆಳ್ಳಕ್ಕಿ ಮುಗಿಲಲ್ಲಿ ಸಾಲಾಗಿ
ಪಲ್ಲಕ್ಕಿ ಆದಾಗ ಏನೆಂಥ ಸೋಜಿಗ !
ಹೊಂಬಾಳೆ ಬಳುಕುತ್ತ ಚೆಲುವಾಗಿ
ಹೂ ಬಿರಿದು ನಗುವಾಗ ರಂಗೇರಿ ಹೊಸರಾಗ!
ಸಂಪಿಗೆ ಸೊಂಪು ಮಲ್ಲಿಗೆ ಕಂಪು
ಹೊಂಗೆಯ ತಂಪು ಕೋಗಿಲೆ ಇಂಪು
ಕರೆದಿವೆ ಕೈಬೀಸಿ
ಕುಣಿಯುತ ಹಾಡೋಣ... ನಲಿಯುತ ಸಾಗೋಣ
ಕುಣಿಯುತ ಹಾಡೋಣ... ನಲಿಯುತ ಸಾಗೋಣ
ಜೀರುಂಡೆ ಗುಂಯ್‌ಗುಟ್ಟಿ ಬರುವಾಗ
ನಾದಸಿರಿ ತರುವಾಗ ಇಂಪಾದ ಸಂಗೀತ
ಓಡೋಡಿ ಹೊಳೆಯೊಂದು ತುಳುಕಾಡಿ
ಹಾವಂತೆ ಹರಿವಾಗ ಕಂಡಷ್ಟೂ ಆನಂದ!
ತೆಂಗಿನ ತೂಗು ಅಡಿಕೆಯ ಬಾಗು
ಬಾಳೆಯ ಬೀಗು ವೀಳೆಯ ರಂಗು
ಕರೆದಿದೆ ಕೈಬೀಸಿ
ಕುಣಿಯುತ ಹಾಡೋಣ... ನಲಿಯುತ ಸಾಗೋಣ
ಕುಣಿಯುತ ಹಾಡೋಣ... ನಲಿಯುತ ಸಾಗೋಣ
|| ಬೆಟ್ಟದ ತುದಿಯಲ್ಲಿ ಬೆಳಕಿನ ಮುಡಿಚೆಲ್ಲಿ
ಕಣಿವೆಯ ಮಡಿಲಲ್ಲಿ ಹಸಿರಿನ ರತ್ನಗಂಬಳಿ
ಕಾಡಿನ ಸೊಬಗು ಮನಸನು ಸೆಳೆದು
ಪುಳಕವು ಮೈಯಲ್ಲಿ
ಪ್ರಕೃತಿ ಬೆಡಗು ಹೃದಯವ ಕದ್ದು
ಸಂತಸ ಕಣ್ಣಲ್ಲಿ
ಕುಣಿಯುತ ಹಾಡೋಣ... ನಲಿಯುತ ಸಾಗೋಣ
ಕುಣಿಯುತ ಹಾಡೋಣ... ನಲಿಯುತ ಸಾಗೋಣ ||
ಬೆಟ್ಟದ ತುದಿಯಲ್ಲಿ ಬೆಳಕಿನ ಮುಡಿಚೆಲ್ಲಿ
ಬಾನಿನ ಅಂಚಲ್ಲಿ ಬರೆದಿದೆ ರಂಗವಲ್ಲಿ
ಕಾಡಿನ ಸೊಬಗು ಮನಸನು ಸೆಳೆದು
ಪುಳಕವು ಮೈಯಲ್ಲಿ
ಕಣಿವೆಯ ಮಡಿಲಲ್ಲಿ ಹಸಿರಿನ ರತ್ನಗಂಬಳಿ
ಬಗೆ ಬಗೆ ಹೂವರಳಿ ಬನಸಿರಿ ಬುವಿಯಲ್ಲಿ
ಪ್ರಕೃತಿ ಬೆಡಗು ಹೃದಯವ ಕದ್ದು
ಸಂತಸ ಕಣ್ಣಲ್ಲಿ
ಕುಣಿಯುತ ಹಾಡೋಣ... ನಲಿಯುತ ಸಾಗೋಣ
ಕುಣಿಯುತ ಹಾಡೋಣ... ನಲಿಯುತ ಸಾಗೋಣ
ಬೆಳ್ಳಕ್ಕಿ ಮುಗಿಲಲ್ಲಿ ಸಾಲಾಗಿ
ಪಲ್ಲಕ್ಕಿ ಆದಾಗ ಏನೆಂಥ ಸೋಜಿಗ !
ಹೊಂಬಾಳೆ ಬಳುಕುತ್ತ ಚೆಲುವಾಗಿ
ಹೂ ಬಿರಿದು ನಗುವಾಗ ರಂಗೇರಿ ಹೊಸರಾಗ!
ಸಂಪಿಗೆ ಸೊಂಪು ಮಲ್ಲಿಗೆ ಕಂಪು
ಹೊಂಗೆಯ ತಂಪು ಕೋಗಿಲೆ ಇಂಪು
ಕರೆದಿವೆ ಕೈಬೀಸಿ
ಕುಣಿಯುತ ಹಾಡೋಣ... ನಲಿಯುತ ಸಾಗೋಣ
ಕುಣಿಯುತ ಹಾಡೋಣ... ನಲಿಯುತ ಸಾಗೋಣ
ಜೀರುಂಡೆ ಗುಂಯ್‌ಗುಟ್ಟಿ ಬರುವಾಗ
ನಾದಸಿರಿ ತರುವಾಗ ಇಂಪಾದ ಸಂಗೀತ
ಓಡೋಡಿ ಹೊಳೆಯೊಂದು ತುಳುಕಾಡಿ
ಹಾವಂತೆ ಹರಿವಾಗ ಕಂಡಷ್ಟೂ ಆನಂದ!
ತೆಂಗಿನ ತೂಗು ಅಡಿಕೆಯ ಬಾಗು
ಬಾಳೆಯ ಬೀಗು ವೀಳೆಯ ರಂಗು
ಕರೆದಿದೆ ಕೈಬೀಸಿ
ಕುಣಿಯುತ ಹಾಡೋಣ... ನಲಿಯುತ ಸಾಗೋಣ
ಕುಣಿಯುತ ಹಾಡೋಣ... ನಲಿಯುತ ಸಾಗೋಣ
|| ಬೆಟ್ಟದ ತುದಿಯಲ್ಲಿ ಬೆಳಕಿನ ಮುಡಿಚೆಲ್ಲಿ
ಕಣಿವೆಯ ಮಡಿಲಲ್ಲಿ ಹಸಿರಿನ ರತ್ನಗಂಬಳಿ
ಕಾಡಿನ ಸೊಬಗು ಮನಸನು ಸೆಳೆದು
ಪುಳಕವು ಮೈಯಲ್ಲಿ
ಪ್ರಕೃತಿ ಬೆಡಗು ಹೃದಯವ ಕದ್ದು
ಸಂತಸ ಕಣ್ಣಲ್ಲಿ
ಕುಣಿಯುತ ಹಾಡೋಣ... ನಲಿಯುತ ಸಾಗೋಣ
ಕುಣಿಯುತ ಹಾಡೋಣ... ನಲಿಯುತ ಸಾಗೋಣ ||