ನುಸುಳುತ ನುಗ್ಗಿಹುದು ವೈರಿಯ ಪಡೆಯು
ಅದನೋಡಿ ಕೆರಳಿಹಳು ಒನಕೆ ಓಬವ್ವಳು
ತಾನೊಂದು ಹೆಣ್ಣೆಂಬ ಅಂಜಿಕೆಯ ತೊರೆದು
ವೀರಕಚ್ಚೆಯ ಹಾಕಿ ಒನಕೆಯ ಹಿಡಿದು
ಚಂಡಿ ಇವಳಾಗಿ ದುರ್ಗಿ ತಾನಾಗಿ
ಸಾವಿರ ಗಜಬಲವು ತೋಳಲ್ಲಿ ತುಂಬಿ
ವೈರಿಗಳ ಶಿರದ ಮೇಲೆ ಬೀಸಿದಳು ಒನಕೆ
ರುಂಡವನು ಚೆಂಡಾಡಿ ಎಳೆದೆಳೆದು ಬದಿಗೆ
ಏನಾಗುತ್ತಿದೆ ಎಂದು ತಿಳಿಯದು ಸೈನ್ಯಕ್ಕೆ
ವನಿತೆ ಓಬವ್ವ ವೀರ ವನಿತೆ ಓಬವ್ವ
ಕೆಂಗಣ್ಣು ಬೀರುತಲಿ ನಿಂತಿಹಳು ನಾರಿ
ಶತ್ರುಗಳ ಬಡಿದೆಳೆದು ಶೌರ್ಯವನು ತೋರಿ
ಮಹಾದುರ್ಗಿ ಮಹಾಕಾಳಿ ಇವಳ ಮೈದೋರಿ
ವೈರಿಗಳು ನುಗ್ಗಿಹರು ಕಿಂಡಿಯನು ತೂರಿ
ರಾಶಿಯು ಬಿದ್ದಿಹುದು ನೆತ್ತರನು ದಾರಿ
ರಣಚಂಡಿ ಆಗಿಹಳು ಒನಕೆಯನ್ನು ಬೀರಿ
ಅಳುತಲಿ ಬಂದಿಹುದು ಶಿಶು ತಾಯ ಬಳಿಗೆ
ಗಮನವು ಇಲ್ಲವು ಮಗುವಿನ ಕಡೆಗೆ
ಪತಿ ಹನುಮ ಬಂದಿಹನು ಕಿಂಡಿಯ ಬಳಿಗೆ
ಹೆಣಗಳ ರಾಶಿಯ ಕಣ್ಣಿಡುತ ಬಳಿಗೆ
ವನಿತೆ ಓಬವ್ವ ವೀರ ವನಿತೆ ಓಬವ್ವ
ಹೈದರನ ಸೈನ್ಯವು ಸೋಲು ಕಂಡಿರಲು
ಮದಕರಿಯ ಸೈನ್ಯವು ಜಯವ ಗಳಿಸಿರಲು
ಸೈನ್ಯವು ಜಯಭೇರಿ ಕಹಳೆಯ ಊದಿರಲು
ಎಲ್ಲರ ಮನದಲ್ಲಿ ಹರುಷದ ಹೊನಲು
ನುಸುಳುತ ನುಗ್ಗಿಹುದು ವೈರಿಯ ಪಡೆಯು
ಅದನೋಡಿ ಕೆರಳಿಹಳು ಒನಕೆ ಓಬವ್ವಳು
ತಾನೊಂದು ಹೆಣ್ಣೆಂಬ ಅಂಜಿಕೆಯ ತೊರೆದು
ವೀರಕಚ್ಚೆಯ ಹಾಕಿ ಒನಕೆಯ ಹಿಡಿದು
ಚಂಡಿ ಇವಳಾಗಿ ದುರ್ಗಿ ತಾನಾಗಿ
ಸಾವಿರ ಗಜಬಲವು ತೋಳಲ್ಲಿ ತುಂಬಿ
ವೈರಿಗಳ ಶಿರದ ಮೇಲೆ ಬೀಸಿದಳು ಒನಕೆ
ರುಂಡವನು ಚೆಂಡಾಡಿ ಎಳೆದೆಳೆದು ಬದಿಗೆ
ಏನಾಗುತ್ತಿದೆ ಎಂದು ತಿಳಿಯದು ಸೈನ್ಯಕ್ಕೆ
ವನಿತೆ ಓಬವ್ವ ವೀರ ವನಿತೆ ಓಬವ್ವ
ಕೆಂಗಣ್ಣು ಬೀರುತಲಿ ನಿಂತಿಹಳು ನಾರಿ
ಶತ್ರುಗಳ ಬಡಿದೆಳೆದು ಶೌರ್ಯವನು ತೋರಿ
ಮಹಾದುರ್ಗಿ ಮಹಾಕಾಳಿ ಇವಳ ಮೈದೋರಿ
ವೈರಿಗಳು ನುಗ್ಗಿಹರು ಕಿಂಡಿಯನು ತೂರಿ
ರಾಶಿಯು ಬಿದ್ದಿಹುದು ನೆತ್ತರನು ದಾರಿ
ರಣಚಂಡಿ ಆಗಿಹಳು ಒನಕೆಯನ್ನು ಬೀರಿ
ಅಳುತಲಿ ಬಂದಿಹುದು ಶಿಶು ತಾಯ ಬಳಿಗೆ
ಗಮನವು ಇಲ್ಲವು ಮಗುವಿನ ಕಡೆಗೆ
ಪತಿ ಹನುಮ ಬಂದಿಹನು ಕಿಂಡಿಯ ಬಳಿಗೆ
ಹೆಣಗಳ ರಾಶಿಯ ಕಣ್ಣಿಡುತ ಬಳಿಗೆ
ವನಿತೆ ಓಬವ್ವ ವೀರ ವನಿತೆ ಓಬವ್ವ
ಹೈದರನ ಸೈನ್ಯವು ಸೋಲು ಕಂಡಿರಲು
ಮದಕರಿಯ ಸೈನ್ಯವು ಜಯವ ಗಳಿಸಿರಲು
ಸೈನ್ಯವು ಜಯಭೇರಿ ಕಹಳೆಯ ಊದಿರಲು
ಎಲ್ಲರ ಮನದಲ್ಲಿ ಹರುಷದ ಹೊನಲು
Nusulutha Nuggihudu song lyrics from Kannada Movie Chithradurgada Onake Obavva starring Thara, Akshay, Balakrishna, Lyrics penned by B A Purushotham (Omkar) Sung by Ajay Warrier, Music Composed by S Nagu, film is Directed by B A Purushottham (Omkar) and film is released on 2019