Ullasada Hoomale Lyrics

in Cheluvina Chitthara

Video:

LYRIC

ಉಲ್ಲಾಸದ ಹೂಮಳೆ
ಜಿನುಗುತಿದೆ ನನ್ನಲಿ
ಸಂಕೋಚದ ಹೊನ್ನೊಳೆ
ಹರಿಯುತಿದೆ ಕಣ್ಣಲಿ
ಮುಂಜಾನೆಯು ನೀ
ಮುಸ್ಸಂಜೆಯು ನೀ
ನನ್ನೆದೆಯ ಬಡಿತವು ನೀ
ಹೃದಯದಲ್ಲಿ ಬೆರೆತವ ನೀ
ಮೊದಮೊದಲು ನನ್ನೊಳಗೆ
ಉದಯಿಸಿದ ಆಸೆಯು ನೀ
ನನ್ನವನೇ ಎಂದಿಗೂ ನೀ
 
||ಉಲ್ಲಾಸದ ಹೂಮಳೆ
ಜಿನುಗುತಿದೆ ನನ್ನಲಿ||
 
ಮಾತಿಲ್ಲದೆ ಕಥೆಯಿಲ್ಲದೆ
ದಿನವೆಲ್ಲ ಮೌನವಾದೆ
ನಾ ಕಳೆದು ಹೋದೆನು
ಹುಡುಕಾಡಿ ಸೋತೆನು
ಹಸಿವಿಲ್ಲದೆ ನಿದಿರಿಲ್ಲದೆ
ದಣಿವಾಗಲೂ ಇಲ್ಲ
ನನ್ನೊಳಗೆ ನೀನಿರೆ
ನನಗೇನು ಬೇಡವೊ
ನನ್ ಪಾಠವು ನೀ
ನನ್‌ ಊಟವು ನೀ
ನಾ ಬರೆವ ಲೇಖನಿ ನೀ
ನಾ ಉಡುವ ಉಡುಗೆಯು ನೀ
 
||ಉಲ್ಲಾಸದ ಹೂಮಳೆ
ಜಿನುಗುತಿದೆ ನನ್ನಲಿ||
 
ನನ್ನ ಸ್ನಾನದ ನೀರಲ್ಲಿಯು
ಬೆರೆತಿದ್ದ ಚೆಲುವ ನೀನು
ಕನ್ನಡಿಯ ನೋಡಿದೆ
ನನ್ನೊಡನೆ ಕಾಡಿದೆ
ನಾ ಹಚ್ಚುವ ಕಾಡಿಗೆಯಲಿ
ಅವಿತಿದ್ದ ಚೋರ ನೀನು
ನಾನಿಟ್ಟ ಕುಂಕುಮದೀ
ಪಳಪಳನೆ ಹೊಳೆಯುವೆ ನೀ
ನಾ ಮುಡಿದ ಮಲ್ಲಿಗೆಗೆ
ಪರಿಮಳ ನೀ ಒಡೆಯನು ನೀ
ನಾ ಮಲಗೋ ಹಾಸಿಗೆ ನೀ
 
||ಉಲ್ಲಾಸದ ಹೂಮಳೆ
ಜಿನುಗುತಿದೆ ನನ್ನಲಿ
ಸಂಕೋಚದ ಹೊನ್ನೊಳೆ
ಹರಿಯುತಿದೆ ಕಣ್ಣಲಿ
ಮುಂಜಾನೆಯು ನೀ
ಮುಸ್ಸಂಜೆಯು ನೀ
ನನ್ನೆದೆಯ ಬಡಿತವು ನೀ
ಹೃದಯದಲ್ಲಿ ಬೆರೆತವ ನೀ
ಮೊದಮೊದಲು ನನ್ನೊಳಗೆ
ಉದಯಿಸಿದ ಆಸೆಯು ನೀ
ನನ್ನವನೇ ಎಂದಿಗೂ ನೀ||
 
||ಉಲ್ಲಾಸದ ಹೂಮಳೆ
ಜಿನುಗುತಿದೆ ನನ್ನಲಿ||

Ullasada Hoomale song lyrics from Kannada Movie Cheluvina Chitthara starring Ganesh, Amoolya, Komal, Lyrics penned by S Narayan Sung by Shreya Ghoshal, Music Composed by Mano Murthy, film is Directed by S Narayan and film is released on 2007