Odi Baa Ododi Baa Lyrics

in Chakra Theertha

LYRIC

ಝೂಟ್.......ಹಾಹಾಹಾ ಹಹ ಹಾಹಾ
ಲಲಲ ಲಲ ಲಾಲಾ

ಓಡಿ ಬಾ ಓಡೋಡಿ ಬಾ
ಚಿನ್ನ ನನ್ನ ಬೆನ್ನ ಹಿಂದೆ ಓಡಿ ಬಾ
ಓಡುವೇ ನಾ ಓಡುವೇ
ಜಿಂಕೆ ಹಾಗೆ ಓಡಿ ನಿನ್ನ ಕೂಡುವೇ

|| ಓಡಿ ಬಾ..ಝೂಟ್...||

ಮಣ್ಣಿನಿಂದ ಕಪ್ಪೆಗೂಡು ಕಟ್ಟಬಲ್ಲೆಯಾ
ಅಲ್ಲಿ ನೀನು ಕಪ್ಪೆಯೊಂದ ಸಾಕಬಲ್ಲೆಯಾ
ಕಣ್ಣ ಮುಚ್ಚಿ ನನ್ನಾ ಹಿಡಿಯಬಲ್ಲೆಯಾ
ನಾ ಹಾರೆದಂತೆ ದೂರ ನೀನು
ಹಾರಬಲ್ಲೆಯಾ...ಝೂಟ್...
 
|| ಓಡಿ ಬಾ..ನಾ ಓಡುವೇ…
ಓಡಿ ಬಾ ಝೂಟ್….||

ನನ್ನ ರೀತಿ ರೆಂಬೆ ಹತ್ತಿ ನೀನು ನೋಡುವಾ
ನನ್ನ ಸಾಟಿ ಕುಂಟೊಬಿಲ್ಲೇ ಆಡು ನೋಡುವಾ
ಸುತ್ತಿ ಸುತ್ತಿ ಲಾಗಾ ಹಾಕು ಅಮ್ಮಯ್ಯಾ
ಸುತ್ತಿ ಸುತ್ತಿ ಲಾಗಾ ಹಾಕು ಅಮ್ಮಯ್ಯಾ
ಕೋತಿಯಾಟ ದೊಂಬರಾಟ
ಬೇಡ ದಮ್ಮಯ್ಯಾ...ಝೂಟ್...
 
|| ಓಡಿ ಬಾ..ನಾ ಓಡುವೇ…
ಓಡಿ ಬಾ ಝೂಟ್….||

ಕಾಗದದ ದೋಣಿಯೊಂದ ನಾವು ಮಾಡುವಾ
ನೀರಿನಲ್ಲೀ ದೋಣಿಯನ್ನು ತೇಲಿ ಬಿಡುವಾ
ಅಂಚಿನಲ್ಲಿ ನಿಂತು ನಾವು ನೋಡುವಾ
ಹಾಯಾಗಿ ಒಂದಾಗಿ ಇನ್ನೆಂದೂ
ಬಾಳುವಾ...ಝೂಟ್...

|| ಓಡಿಬಾ ....ನಾ ಓಡುವೇ...ಓಡಿಬಾ...
ಲಲ ಲಲ ಲಾಲ ಲಾಲ…..
ಲ ಲ ಲ ಲಾ ಲ ಲಾ ಲ…
ಲಲ ಲಲ ಲಾಲ ಲಾಲ….. ||

Odi Baa Ododi Baa song lyrics from Kannada Movie Chakra Theertha starring Dr Rajkumar, Udayakumar, Jayanthi, Lyrics penned by R N Jayagopal Sung by B K Sumitra, Bangalore Latha, Music Composed by T G Lingappa, film is Directed by Peketi Sivaram and film is released on 1967