Jeevanada Kanasella Lyrics

in Chaithrada Chiguru

Video:

LYRIC

-
ಜೀವನದ ಕನಸ್ಸೆಲ್ಲ ಚೈತ್ರದ ಚಿಗುರಂಗೆ
ಕನಸ್ಸೆಲ್ಲಾ ನನಸಾಗಿ ಹೂವೆಲ್ಲ ಹಣ್ಣಂಗೆ
ಮನುಷ್ಯನ ಬಾಳುವೆ ಎಂದ ಮ್ಯಾಗೆ
ಹಸಿರಾದ ಎಲೆ ಹಣ್ಣಾದಂಗೆ
ಹಣ್ಣಾದ ಎಲೆಯು ಬಿತ್ತಮ್ಯಾಗೆ
ಹೊಸದಾಗಿ ಮತ್ತೆ ಮೂಡಿದಂಗೆ
 
ಹೆಣ್ಣಿಂದ ಸಂಸಾರ ಹೆಣ್ಣಿಂದ ಸಂತಾನ
ಹೆಣ್ಣಿರದ ಮನೆಯಿಲ್ಲ ಹೆಣ್ಣಿರದ ಜಗವಿಲ್ಲ
ಹೆಣ್ಣೇನೆ ಬಾಳ ಬಂಗಾರ ಆ ಬಂಗಾರ ಸಕಲ ಸಿಂಗಾರ
ಹೆಣ್ಣಿದ್ರೆ ಗಂಡು ಸರದಾರ
ಆ ಸರದಾರ್ಗೆ ಹೆಣ್ಣೆ ಸುಖಸಾರ
 
ಮದುವೆಯೆಂಬುದೇನೆ ಬರಿಯ ತಾಳಿಗಂಟಲ್ಲ
ಹಸಿರಿನ ಚಪ್ಪರದಾಗೆ ಸುವ್ವಾಲಿ ಹೇಳೊದಲ್ಲ
ಗಂಡು ಹೆಣ್ಣೆಂದು ಬಗೆಯದೆ
ನಾವೊಂದೆ  ಬಾಳಿದರೆ ಮದುವೇನೆ
ಮನಸ್ಸು ಮನಸ್ನಾಗೆ ಒಂದಾದ್ರೆ
ಆ ಒಂದಾದ ಬಾಳುವೆ ಮದುವೇನೆ
 
ಯಾವತ್ತು ತವರುಮನೆ ಹೆಣ್ಣಿಗೆ ಸ್ಥಿರವಲ್ಲ
ಬಾಳೋಕೆ ಅಂದೋನೆ ಗಂಡನೆ ಬದುಕೆಲ್ಲ
ಚೆಂದಾನೆ ಚೆಂದ ಗಂಡನ ಮನೆ
ಪ್ರೀತಿಯ ಮುಂದೆ ಬೇರಿಲ್ಲ
ಅತ್ತೆ ಮಾವಂದಿರು ಹೊಂದ್ಕೊಂಡ್ರೆ
ಆ ಸ್ವರ್ಗದ ಮುಂದೆ ಇನ್ನಿಲ್ಲ
 
ಬಾನಚಂದಿರನಂಗೆ ಬಾಳಿನಲಿ ಹೊಳೆಯೋಳು
ಬಾಳೆ ಆ ಸುಳಿಯಂಗೆ ಅತ್ತಿತ್ತ ಬಳಕೋಳು
ಹೂವಂತ ಮನಸ್ಸ ನಿಜ ಹೆಣ್ಣು
ಆ ಹೆಣ್ಣೇನೆ ಸಂಸಾರದ ಕಣ್ಣು
ಲೋಕನೆ ಸಲಹೋಳು ನಮ್‌ ಸಂಸಾರ ಸುಖದ ಸಿರಿ ಕಣ್ಣು
 
ನಾರೀರು ನಲಿದಾಡೊ ಮನೆಯೇನೆ ಕೈಲಾಸ
ನಾರೀರು ನಡೆದಾಡೊ ಜಾಗಾನೆ ವೈಕುಂಠ
ಹಾಲ್ನಂತ ಮಾತ್ನಾಡೊ ಸಿರಿಗೌರಿ
ನಮ್ಮ ಬಾಳನ್ನ ಬೆಳಗೊ ಬಂಗಾರಿ
ಜೇನಂತ ಮನಸ್ಸಿನ ಶ್ರೀ ಗೌರಿ
ಅವಳು ಹೊಂದ್ಕೊಂಡು ಹೋದ್ರೆ ಹೊಸ ಲಹರಿ
 
ಕಂಡೋರು ಯಾರಯ್ಯ ನಾಳಿನ ಬಾಳುವೆಯ
ಎಲ್ಲೈತೊ ಸಂಬಂಧ ಮದುವೆಯ ಸಿರಿಗಂಧ
ಯಾರಿಗೆ ಗೊತ್ತೊ ಹಣೆಬರಹ ಆ ದ್ಯಾವ್ರೇನೆ ಬರೆದ ಶ್ರೀಕಾರ
ಮದುವೆಯೆಂಬೋದು ಬ್ರಹ್ಮಗಂಟು ಜನುಮಜನುಮದ ಅಂಟುನಂಟು
 

Jeevanada Kanasella song lyrics from Kannada Movie Chaithrada Chiguru starring Kumar Bangarappa, Kaveri,, Lyrics penned by Doddarange Gowda Sung by Rajesh Krishnan,Pallavi, Music Composed by V Manohar, film is Directed by K Shivarudraiah