Mamatheya Totada Malligeye Lyrics

in Chaduranga

Video:

LYRIC

ಮಮತೆಯ ತೋಟದ ಮಲ್ಲಿಗೆಯೇ
ಮರುಗುವೆ ಏತಕೆ ನೀ ನುಡಿಯೇ
ಮಮತೆಯ ತೋಟದ ಮಲ್ಲಿಗೆಯೇ
ಮರುಗುವೆ ಏತಕೆ ನೀ ನುಡಿಯೇ
ದೇವರ ಹೂವಿದು ಬಾಡಿಹುದು
ಪೂಜೆಗೆ ಹೊಸ ಹೂ ಬೇಕಿಹುದು
ದೇವರ ಹೂವಿದು ಬಾಡಿಹುದು
ಪೂಜೆಗೆ ಹೊಸ ಹೂ ಬೇಕಿಹುದು
 
|| ಮಮತೆಯ ತೋಟದ ಮಲ್ಲಿಗೆಯೇ…||
 
ವೀಣೆ ಹಳತು ಆದರೇನು
ಹೊಮ್ಮುವ ನಾದ ಹಳತೇನು
ಆ….ತಂತಿ ಕಡಿದ ವೀಣೆಯೊಳಗೆ
ಮಂಜುಳ ನಾದ ಬಹುದೇನು
ತಂತಿ ಕಡಿದ ವೀಣೆಯೊಳಗೆ
ಮಂಜುಳ ನಾದ ಬಹುದೇನು
 
|| ಮಮತೆಯ ತೋಟದ ಮಲ್ಲಿಗೆಯೇ…||
 
ಮಲ್ಲನೆ ಗಾಳಿ ಬೀಸಿದರೇನು
ತೇಲುವ ನೌಕೆ ಮುಳುಗುವುದೇ
ಸಾವಿರ ಹರಕೆ ಹೊತ್ತರೇನು
ಸಾವಿರ ಹರಕೆ ಹೊತ್ತರೇನು
ಮುಳುಗಿದ ನೌಕೆ ತೇಲುವುದೇ
 
|| ಮಮತೆಯ ತೋಟದ ಮಲ್ಲಿಗೆಯೇ…||
 
ದೇವನು ಒಲಿದು ನೆಲಸಲು ಬಂದ…
ಮಂದಿರವಲ್ಲವೇ ನೀ ಮುನ್ನ
ದೇವನ ಗುಡಿಯ ಮಂಗಳ ಬೆಳಕೇ
ಆರಲು ಬಿಡಲು ನಾ ನಿನ್ನ
ದೇವನ ಗುಡಿಯ ಮಂಗಳ ಬೆಳಕೇ
ಆರಲು ಬಿಡಲು ನಾ ನಿನ್ನ
 
|| ಮಮತೆಯ ತೋಟದ ಮಲ್ಲಿಗೆಯೇ
ಮರುಗುವೆ ಏತಕೆ ನೀ ನುಡಿಯೇ
ದೇವರ ಹೂವಿದು ಬಾಡಿಹುದು
ಪೂಜೆಗೆ ಹೊಸ ಹೂ ಬೇಕಿಹುದು
ಮಮತೆಯ ತೋಟದ ಮಲ್ಲಿಗೆಯೇ…||

Mamatheya Totada Malligeye song lyrics from Kannada Movie Chaduranga starring Rajashankar, Udayakumar,, Lyrics penned by R N Jayagopal Sung by S P Balasubrahmanyam, Vani Jairam, Music Composed by R Rathna, film is Directed by N C Rajan and film is released on 1969