Brahmasthra Brahmasthra Lyrics

in Brahmasthra

Video:

LYRIC

ಬ್ರಹ್ಮಾಸ್ತ್ರ.... ಬ್ರಹ್ಮಾಸ್ತ್ರ
ಅನುಮಾನವೇ ಕಲಿಯುಗದ ಬ್ರಹ್ಮಾಸ್ತ್ರ
ಅನುಮಾನವೇ ಕಲಿಯುಗದ ಬ್ರಹ್ಮಾಸ್ತ್ರ
ಆತ್ಮೀಯರೇ ಅನುಮಾನಿಸಿ
ಅನುಬಂಧವೇ ಅವಮಾನಿಸಿ 
ಆತ್ಮೀಯರೇ ಅನುಮಾನಿಸಿ
ಅನುಬಂಧವೇ ಅವಮಾನಿಸಿ 
ನಿನ್ನ ಅಣುಅಣುವಾಗಿ ಕೊಲ್ಲುವ ಅಸ್ತ್ರ 
 
|| ಬ್ರಹ್ಮಾಸ್ತ್ರ....  ಬ್ರಹ್ಮಾಸ್ತ್ರ
ಅನುಮಾನವೇ ಕಲಿಯುಗದ ಬ್ರಹ್ಮಾಸ್ತ್ರ..|| 
 
ಸಂಸಾರದ ಸಂಗೀತದೆ
ಅಪಸ್ವರವೂ ಬಂದಿತು 
ಸಹಚಾರಿಣಿ ಎಂದವಳ
ದೂರಕೆ ಕೊಂಡೊಯ್ದಿತು 
ಸಂಸಾರದ ಸಂಗೀತದೆ
ಅಪಸ್ವರವೂ ಬಂದಿತು 
ಸಹಚಾರಿಣಿ ಎಂದವಳ
ದೂರಕೆ ಕೊಂಡೊಯ್ಯಿದಿತೋ 
ದೇವನ ಚದುರಂಗದೇ...  ಜೀವನ ತರಂಗದೇ..  
ದೇವನ ಚದುರಂಗದೇ  ಜೀವನ ತರಂಗದೇ  
ಆಟ ಮುಗಿಸಿ ಹೋದವರೇ ಗೆದ್ದವರೂ.. ಹ್ಹೂಂ.. 
ಹಿಂದೆ ಉಳಿದು ಅಳುವವರೇ ಸೋತವರೂ 
ಕಣ್ಣೀರಿನ ಕಥೆ ನೂರನು ನಿತ್ಯವೂ ಬರೆಯುವ ಅಸ್ತ್ರ   
 
|| ಬ್ರಹ್ಮಾಸ್ತ್ರ....(ಆಆಆ)..  ಬ್ರಹ್ಮಾಸ್ತ್ರ
ಅನುಮಾನವೇ ಕಲಿಯುಗದ ಬ್ರಹ್ಮಾಸ್ತ್ರ..|| 
 
ತನ್ನ ಕರುಳಬಳ್ಳಿ ಕಂಡು ಹೆಮ್ಮೆಪಡುವ ತಂದೆ 
ತನಗೆ ಕೊನೆಯ ಬೆಂಕಿ ಇಡುವನೆಂಬ ಆಸೆ ಹಿಂದೆ 
ತನ್ನ ಕರುಳಬಳ್ಳಿ ಕಂಡು ಹೆಮ್ಮೆಪಡುವ ತಂದೆ 
ತನಗೆ ಕೊನೆಯ ಬೆಂಕಿ ಇಡುವನೆಂಬ ಆಸೆ ಹಿಂದೆ 
ಸಾವಿನ ಕ್ಷಣದಲ್ಲಿಯೇ…ಬಂಧದ ಕೊನೆ ಅಲ್ಲವೇ
ಸಾವಿನ ಕ್ಷಣದಲ್ಲಿಯೇ ಬಂಧದ ಕೊನೆ ಅಲ್ಲವೇ
ಇವ ನನ್ನವ ಇದು ನನ್ನದು ಎನುವ ಮಮತೆ ಏಕೇ 
ಅವರಾಡುವ ಬಿರುಮಾತಿಗೆ ನೊಂದು ಮರುಗಲೇಕೆ 
ಸತ್ತಹೃದಯ ಕೊಲ್ಲುವಂಥ ವೀರರು ಬಳುಸುವ ಅಸ್ತ್ರ
 
|| ಬ್ರಹ್ಮಾಸ್ತ್ರ....  ಬ್ರಹ್ಮಾಸ್ತ್ರ
ಅನುಮಾನವೇ ಕಲಿಯುಗದ ಬ್ರಹ್ಮಾಸ್ತ್ರ
ಅನುಮಾನವೇ ಕಲಿಯುಗದ ಬ್ರಹ್ಮಾಸ್ತ್ರ
ಆತ್ಮೀಯರೇ ಅನುಮಾನಿಸಿ
ಅನುಬಂಧವೇ ಅವಮಾನಿಸಿ 
ಆತ್ಮೀಯರೇ ಅನುಮಾನಿಸಿ
ಅನುಬಂಧವೇ ಅವಮಾನಿಸಿ 
ನಿನ್ನ ಅಣುಅಣುವಾಗಿ ಕೊಲ್ಲುವ ಅಸ್ತ್ರ ||
||ಬ್ರಹ್ಮಾಸ್ತ್ರ....  ಬ್ರಹ್ಮಾಸ್ತ್ರ
ಅನುಮಾನವೇ ಕಲಿಯುಗದ ಬ್ರಹ್ಮಾಸ್ತ್ರ…|| 

Brahmasthra Brahmasthra song lyrics from Kannada Movie Brahmasthra starring Ambarish, Lakshmi, Balakrishna, Lyrics penned by R N Jayagopal Sung by S P Balasubrahmanyam, Music Composed by Sathyam, film is Directed by Perala and film is released on 1986