-
ಮಳೆರಾಯ ನೀ ಬಾರಯ್ಯ ನಮ್ಮೂರಿಗೆ ನಮ್ ಕೇರಿಗೆ
ಮಳೆನೀರ ನೀ ತಾರಯ್ಯ ನಮ್ ಹಟ್ಟಿಗೆ ಕೆರೆಕಟ್ಟೆಗೆ
ಬೆಟ್ಟ ಬಯಲೆಲ್ಲ ನೆನೆದು ಕೆಸರಾಗಿ ಕಾಡು ನಾಡೆಲ್ಲ ಚಿಗುರಿ ಹಸಿರಾಗಿ
ಮಿಂಚುತ್ತ ಗುಡುಗುತ್ತ ಸಿಡಿಲಾಗಿ ಕಡಲಾಗಿ
ಮಳೆರಾಯ ನೀ ಬಾರಯ್ಯ ನಮ್ಮೂರಿಗೆ ನಮ್ ಕೇರಿಗೆ
ಮಳೆನೀರ ನೀ ತಾರೆಯ ನಮ್ ಹಟ್ಟಿಗೆ ಕೆರೆಕಟ್ಟೆಗೆ
ಬೆಟ್ಟ ಬಯಲೆಲ್ಲ ನೆನೆದು ಕೆಸರಾಗಿ ಕಾಡು ನಾಡೆಲ್ಲ
ನಿನ್ನ ಒಕ್ಕಲ ಈ ಮಕ್ಕಳ ನೀ ಕೈಬಿಡದೆ
ಕಾರುಣ್ಯದಿ ನೀ ತಾರಯ್ಯ
ಒಳ್ಳೆ ಮುಂಗಾರು ಹಿಂಗಾರು ಸಾಗಿ
ನಾವು ಬಂಗಾರವ ಬೆಳೆದವಯ್ಯ
ಓಯ್ ಹಸ್ತದ ಮಳೆ ಚಿತ್ತದ ಮಳೆ ಹೊತ್ತಿಗೆ ಬಂದು
ಮಣ್ಣೆಲ್ಲವು ಹೊನ್ನಾದಾಗ
ರಾಗಿ ಭತ್ತದ ಜೋಳದ ಪೈರು ತೂಗಿ ಮುತ್ತಿನ ತೆನೆಯಾದವು
ಸುರಿಯುತ್ತ ಹರಿಯುತ್ತ ನೊರೆಯಾಗಿ ನದಿಯಾಗಿ
||ಮಳೆರಾಯ ನೀ ಬಾರಯ್ಯ ಬಾರಯ್ಯ
ನಮ್ಮೂರಿಗೆ ನಮ್ ಕೇರಿಗೆ
ಮಳೆನೀರ ನೀ ತಾರಯ್ಯ ತಾರಯ್ಯ
ನಮ್ ಹಟ್ಟಿಗೆ ಕೆರೆಕಟ್ಟೆಗೆ||
ಅಶ್ವಿನಿ ಆರಿದ್ರ ಹನಿ ಹನಿ ಬಿದ್ದು ನಾವೆಲ್ಲ ನಲಿದಾಡುತ್ತ
ಸುಗ್ಗಿ ಸಂಕ್ರಾಂತಿ ಸಂತೋಷ ತಂದು ನಮ್ ಗೋಡ್ ದಿಮ್ಮಿ ಹೈನಾದವೊ
ಹೋಯ್ ಹುತ್ತಿದ್ದವು ಬಿತ್ತಿದ್ದವು ಹೊಲಗದ್ದೆಗಳುನೀರಿಲ್ಲದೆ ಬತ್ತಿದವು
ಬೇಗ ಬಂದುಯ್ಯೊ ಮಳೆರಾಯ ನಿನ್ನ ನಾವು ಹಾಡುತ್ತ ಕೊಂಡಾಡೆವು
ಬಾವಿಲಿ ಜಲವಿಲ್ಲ ಬರಡಾಯ್ತು ನೆಲವೆಲ್ಲ