ಹೂವೊಂದು ದಾರವನು ಬಿಡೊ ಈ ಸಮಯ
ಹನಿಯೊಂದು ತಲುಪಲಿದೆ ಹೊಸದೇ ನದಿಯ
ಆ ಹೂ ಮುಡಿದು ನದಿಗೆ ಇಳಿದಿದೆ ನನ್ನಯ ಹೃದಯ
ನಾ ಹಸಿವೆಂದು ಕರೆದಾಗ ಒಡನೆ ಬರುವೆಯ
ನೀ ಹೊರಟರೆ ಮನೆಯಿಂದ ರಂಗೋಲಿಗೆ ಕೊರಗು
ಆಕಾಶವ ಸುತ್ತೊಡೆದಿದೆ ಸದ್ದಿಲ್ಲದ ಗುಡುಗು
ನನ ಮೇಲೆ ನನಗೆ ಕೋಪನೀನು ಅಯ್ಯೋ ಪಾಪ
ಈ ಮಗುವನು ಬಿಡೊವಾಗ ತಾಯಿಗಾಗೊ ನೋವು
ನೀ ಹೆಗಲಲ್ಲಿ ಇರುವಾಗ ಬೇಕ ಬೇರೆ ಜಗವು
ತೂಕಡಿಸು ತೂಕಡಿಸು ಲಾಲಿಸುವೆನು ಕಂದ
ನನ ಲಾಲಿ ಇರುವುದಿಲ್ಲ ನಿನಗೆ ನಾಳೆಯಿಂದ
ಈ ಮಗುವನ್ನು ಬಿಡೊವಾಗ ತಾಯಿಗಾಗೊ ನೋವು
ನೀ ಚೆನ್ನಾಗಿರು ನನಗಂತ ಬೇಡ ಯಾವ ವರವು
ಕಣ್ಣೀರು ಸುರಿಸುವುದು ಇಷ್ಟ ನಿನಗೆ ದೈವ
ಕಳೆದುಕೊಂಡು ನೋಡು ನಿನ್ನ ಪ್ರೀತಿಸುವ ಜೀವ
ಈ ಮಗುವನು ಬಿಡೊವಾಗ ತಾಯಿಗಾಗೊ ನೋವು
ಕೈ ಒರೆಸಿದರು ನಿಲ್ಲಲ್ಲ ಭಾರವಾದ ಅಳುವು
ಹೂವೊಂದು ದಾರವನು ಬಿಡೊ ಈ ಸಮಯ
ಹನಿಯೊಂದು ತಲುಪಲಿದೆ ಹೊಸದೇ ನದಿಯ
ಆ ಹೂ ಮುಡಿದು ನದಿಗೆ ಇಳಿದಿದೆ ನನ್ನಯ ಹೃದಯ
ನಾ ಹಸಿವೆಂದು ಕರೆದಾಗ ಒಡನೆ ಬರುವೆಯ
ನೀ ಹೊರಟರೆ ಮನೆಯಿಂದ ರಂಗೋಲಿಗೆ ಕೊರಗು
ಆಕಾಶವ ಸುತ್ತೊಡೆದಿದೆ ಸದ್ದಿಲ್ಲದ ಗುಡುಗು
ನನ ಮೇಲೆ ನನಗೆ ಕೋಪನೀನು ಅಯ್ಯೋ ಪಾಪ
ಈ ಮಗುವನು ಬಿಡೊವಾಗ ತಾಯಿಗಾಗೊ ನೋವು
ನೀ ಹೆಗಲಲ್ಲಿ ಇರುವಾಗ ಬೇಕ ಬೇರೆ ಜಗವು
ತೂಕಡಿಸು ತೂಕಡಿಸು ಲಾಲಿಸುವೆನು ಕಂದ
ನನ ಲಾಲಿ ಇರುವುದಿಲ್ಲ ನಿನಗೆ ನಾಳೆಯಿಂದ
ಈ ಮಗುವನ್ನು ಬಿಡೊವಾಗ ತಾಯಿಗಾಗೊ ನೋವು
ನೀ ಚೆನ್ನಾಗಿರು ನನಗಂತ ಬೇಡ ಯಾವ ವರವು
ಕಣ್ಣೀರು ಸುರಿಸುವುದು ಇಷ್ಟ ನಿನಗೆ ದೈವ
ಕಳೆದುಕೊಂಡು ನೋಡು ನಿನ್ನ ಪ್ರೀತಿಸುವ ಜೀವ
ಈ ಮಗುವನು ಬಿಡೊವಾಗ ತಾಯಿಗಾಗೊ ನೋವು
ಕೈ ಒರೆಸಿದರು ನಿಲ್ಲಲ್ಲ ಭಾರವಾದ ಅಳುವು