ಸುಯ್....
ಸುಯ್.. ಅನ್ನೋ ಗಾಳಿ ಸದ್ದು
ವಾಲಗದಂಗೈತೆ…
ಗುಯ್... ಗುಯ್ ಗುಟ್ಟೋ
ದುಂಬಿ ನಾದ ಮಂತಿರದಂಗೈತೆ..
ಸುಯ್.. ಅನ್ನೋ ಗಾಳಿ ಸದ್ದು
ವಾಲಗದಂಗೈತೆ…
ಗುಯ್... ಗುಯ್ ಗುಟ್ಟೋ
ದುಂಬಿ ನಾದ ಮಂತಿರದಂಗೈತೆ..
ಧುಮಕೋ ನೀರು ಧಾರೆ ಎರೆಯೋ ಹಾಲಿನಂಗೈತೆ
ನಿನ್ನ ಕಂಡು ಎಂದು ಬರದ ನಾಚಿಕೆ ಬಂದೈತೆ..
ಅದೇನೊ ಹೊಸ ಆಸೆ ನನ್ನೆದೆಯ ತುಂಬೈತೆ
ಅದೇನೊ ಹೊಸ ಆಸೆ ನನ್ನೆದೆಯ ತುಂಬೈತೆ
|| ಸುಯ್.. ಅನ್ನೋ ಗಾಳಿ ಸದ್ದು
ವಾಲಗದಂಗೈತೆ…
ಗುಯ್... ಗುಯ್ ಗುಟ್ಟೋ
ದುಂಬಿ ನಾದ ಮಂತಿರದಂಗೈತೆ....||
ಯಾಕೆ ಯಾಕೆ ಯಾಕೆ ಯಾಕೆ ಹೇಳ್ತೀಯ ಮಲ್ಲಿ
ಕಿವಿಯಾಗ ಹೇಳಿತೀಯಾ ಮಲ್ಲಿ
ಹೇಳಲೇಬೇಕು ಅಂದ್ರೆ ಇನ್ನು ಹತ್ತಿರ ಬಾ ಇಲ್ಲಿ
ಒಸಿ ಹತ್ತಿರ ಬಾ ಇಲ್ಲಿ
ಈ .. ಪೀ ಪೀ ಪೀ ಪಿಪ್ಪಿ
ಊದು ಊದು ಪೀಪಿ
ಡುಂ ಡುಂ ಡುಂ ಡುಂಡುಂಡುಂಡುಂ
ಬಡಿ ಬಡಿ ಡೋಲು
ಪೀ ಪೀ ಪೀ ಪಿಪ್ಪಿ
ಊದು ಊದು ಪೀಪಿ
ಡುಂ ಡುಂ ಡುಂ ಡುಂಡುಂಡುಂಡುಂ
ಬಡಿ ಬಡಿ ಡೋಲು
ಹೊನ್ನಮ್ಮ... ಚಿನ್ನಮ್ಮ....
ಹೊನ್ನಮ್ಮ... ಚಿನ್ನಮ್ಮ....
ಯಲ್ಲಮ್ಮ.. ಮಲ್ಲಮ್ಮ.. ನಾಚಿಕೆ ಏಕಮ್ಮ
ನಿನ್ನೆ ತನಕ ಇಲ್ಲದ ಕೊಂಕು ಬಿಂಕ ವಯ್ಯಾರ ಏನಮ್ಮ
ಬೀಸೊ ಗಾಳಿಗೆ ಬಳುಕೊ ಚೆಲುವೆಗೆ
ಬೀಸೋ ಗಾಳಿಗೆ ಬಳುಕೊ ಚೆಲುವೆಗೆ
ಸೋತು ಸೋತು ಬಡವಾದೆ
ಚೆಂದದ ಕೆಂಪು ಮೀಸೆ
ಉರಿಮಾಡೋ ನನ ಜಾಣ
ದಾರಿ ಮ್ಯಾಗೆ ಚಪ್ಪರ ಕಂಡೆ
ಚಪ್ಪರದಲ್ಲೆ ಜೋಡಿಯ ಕಂಡೆ
ಜೋಡಿ ಕೈಗಳ ಹಿಡಿದಿದ್ದ ಕಂಡೆ
ಓಡೋಡಿ ಬಂದಾಗ ನಿನ್ನನ್ನೆ ಕಂಡೆ
ನಿನ್ನಲ್ಲೇ ಪ್ರಾಣ ಇಟ್ಟೇ
ನನ್ನ ನಿಂಗೆ ಕೊಟ್ಟೇ.. ಅದಕೆ...
|| ಸುಯ್.. ಅನ್ನೋ ಗಾಳಿ ಸದ್ದು
ವಾಲಗದಂಗೈತೆ…
ಗುಯ್... ಗುಯ್ ಗುಟ್ಟೋ
ದುಂಬಿ ನಾದ ಮಂತಿರದಂಗೈತೆ....||
ಈಯ್ಯ... ಡಿಡಿಡಿ
ಡಿಡಿಡಿ ಹೊಡಿ ಹೊಡಿ ಡಿಕ್ಕಿ
ಜಿಮ್ ಜಿಮ್ ಜಿಮ್ ಜಿಮ್ ಜಿಮ್ ಜಿಮ್ ಜಿಮ್ ಜಿಮ್
ತಲೆಯಲ್ಲ ದಿಮ್ ದಿಮ್
ಹೊನ್ನಪ್ಪ... ಚೆನ್ನಪ್ಪ..
ಹೊನ್ನಪ್ಪ... ಚೆನ್ನಪ್ಪ..
ಯಲ್ಲಪ್ಪ.. ಬೀರಪ್ಪ..
ತುಂಟಾಟ ಏನಪ್ಪ..
ನಿನ್ನೆ ತನಕ ಇಲ್ಲದ ಧೈರ್ಯ
ರೋಷ ಎಲ್ಲಿಂದ ಬಂತಪ್ಪ
ಹಾರೊ ಸೆರಗಿಗೆ ಹೆದರೊ ಗಂಡಿಗೆ
ಹಾರೊ ಸೆರಗಿಗೆ ಹೆದರೊ ಗಂಡಿಗೆ
ಇಂಥ ಜೋರು ಏನಪ್ಪ..
ಕಾಮನ ಬಿಲ್ಲಂಗೇ.......
ಹುಬ್ಬಿರೋ ನನ ಜಾಣೆ
ಅಪ್ಪಯ್ಯ ನೊಪ್ಪಿದ ಮೇಲಿನ್ನೇನು...
ಅಪ್ಪನ ಅಕ್ಕರೆ ಸೊಸೆಯಲ್ವೇನು
ನನ್ನ ಕೈ ಹಿಡಿಯೊ ಗಯ್ಯಾಳಿ ಹೆಣ್ಣು
ಹತ್ತಿರ ಇರುವಾಗ ಚಿಂತೆ ಇನ್ನೇನು
ಎಂದು ನಿನ್ನ ಬಿಡೆನು ಇನ್ನು
ಬಾಳೆಲ್ಲ ಹಾಲ್ಜೇನು .. ಅದಕೆ...
|| ಸುಯ್.. ಅನ್ನೋ ಗಾಳಿ ಸದ್ದು
ವಾಲಗದಂಗೈತೆ…
ಗುಯ್... ಗುಯ್ ಗುಟ್ಟೋ
ದುಂಬಿ ನಾದ ಮಂತಿರದಂಗೈತೆ..
ಧುಮಕೋ ನೀರು ಧಾರೆ ಎರೆಯೋ ಹಾಲಿನಂಗೈತೆ
ನಿನ್ನ ಕಂಡು ಎಂದು ಬರದ ನಾಚಿಕೆ ಬಂದೈತೆ..
ಅದೇನೊ ಹೊಸ ಆಸೆ ನನ್ನೆದೆಯ ತುಂಬೈತೆ
ಅದೇನೊ ಹೊಸ ಆಸೆ ನನ್ನೆದೆಯ ತುಂಬೈತೆ||
Suy Anno Gaali song lyrics from Kannada Movie Bangarada Panjara starring Dr Rajkumar, Balakrishna, K S Ashwath, Lyrics penned by Chi Udayashankar Sung by P B Srinivas, S Janaki, Music Composed by G K Raghu, film is Directed by V Somashekar and film is released on 1974