Hosadaagi Aralida Hoovu Lyrics

in Balu Aparoopa Nam Jodi

Video:

LYRIC

ಹೊಸದಾಗಿ ಅರಳಿದ ಹೂವು....
ಇದು ಸಿಂಗಾರಿಯ ಮೊಗವು....
ಹೊಸದಾಗಿ ಅರಳಿದ ಹೂವು...
ಇದು ಸಿಂಗಾರಿಯ ಮೊಗವು...
ನನ್ನೆಲ್ಲ ಆಸೆಯ ಪೂರೈಸೆ ಬಂದ
ದೇವ ಕನ್ನಿಕೆಯೋ
ಮನವನ್ನು ಸೆಳೆಯುವ ನಗುವು
ಇದು ಬಂಗಾರದ ಹೂವು
 
|| ಹೊಸದಾಗಿ ಅರಳಿದ ಹೂವು...
ಇದು ಸಿಂಗಾರಿಯ ಮೊಗವು…||
 
ಹುಣ್ಣಿಮೆ ಬೆಳಕೆ ಹೆಣ್ಣಾಯ್ತೇನೋ....
ಹೆಣ್ಣಾಯ್ತೇನೋ……
ಹುಣ್ಣಿಮೆ ಬೆಳಕೆ ಹೆಣ್ಣಾಯ್ತೇನೋ
ನೈದಿಲೆ ನಿನ್ನ ಕಣ್ಣಾಯ್ತೇನೋ
ಕಣ್ಣಾಯ್ತೇನೋ…..
ನನಗಾಗಿ ನನಗಾಗೆಂದೆ
 
|| ಹೊಸದಾಗಿ ಅರಳಿದ ಹೂವು...
ಇದು ಸಿಂಗಾರಿಯ ಮೊಗವು...
ಹೊಸದಾಗಿ ಅರಳಿದ ಹೂವು...
ಇದು ಸಿಂಗಾರಿಯ ಮೊಗವು….||
 
ಹವಳವೆ ನಿನ್ನ ತುಟಿಯಾಯ್ತೇನೋ
ಮಲ್ಲಿಗೆ ನಗೆಯೆ ನಗುವಾಯ್ತೇನೋ, 
ನಗುವಾಯ್ತೇನೋ….
ಹವಳವೆ ನಿನ್ನ ತುಟಿಯಾಯ್ತೇನೋ
ಮಲ್ಲಿಗೆ ನಗೆಯೆ ನಗುವಾಯ್ತೇನೋ,
ನಗುವಾಯ್ತೇನೋ….
ನನಗಾಗಿ ನನಗಾಗೆಂದೆ…..
 
|| ಹೊಸದಾಗಿ ಅರಳಿದ ಹೂವು...
ಇದು ಸಿಂಗಾರಿಯ ಮೊಗವು...
ಹೊಸದಾಗಿ ಅರಳಿದ ಹೂವು...
ಇದು ಸಿಂಗಾರಿಯ ಮೊಗವು….||
 
ಬಳುಕುವ ಲತೆಯೆ ನಡುವಾಯ್ತೇನೋ...
ನಡುವಾಯ್ತೇನೋ….
ಬಳುಕುವ ಲತೆಯೆ ನಡುವಾಯ್ತೇನೋ
ನವಿಲಿನ ನಾಟ್ಯ ನಡೆಯಾಯ್ತೇನೋ,
ನಡೆಯಾಯ್ತೇನೋ…..
ನನಗಾಗಿ ನನಗಾಗೆಂದೆ
 
|| ಹೊಸದಾಗಿ ಅರಳಿದ ಹೂವು..
ಇದು ಸಿಂಗಾರಿಯ ಮೊಗವು...
ಹೊಸದಾಗಿ ಅರಳಿದ ಹೂವು...
ಇದು ಸಿಂಗಾರಿಯ ಮೊಗವು….||

Hosadaagi Aralida Hoovu song lyrics from Kannada Movie Balu Aparoopa Nam Jodi starring Srinath, Aarathi, Dwarakish, Lyrics penned by Chi Udayashankar Sung by S P Balasubrahmanyam, Music Composed by Ramlal Sehra, film is Directed by K Janakiram and film is released on 1978