ಮಾವಿನ ಮರವೇ ಮಾವಿನ ಮರವೇ
ನನ್ನ ಮರೆತೆಯಾ..
ನಿನ್ನ ಮಡಿಲಿನ ಗೂಡಿನಲಿ
ನೆಲೆ ನೀಡೆಯಾ
ಕೋಗಿಲೆ ಮರಿಯೆ ಕೋಗಿಲೆ ಮರಿಯೆ
ಹೇಗೆ ಮರೆಯಲಿ
ನಿನ್ನ ತಬ್ಬಲಿ ಮಾಡಿ
ನೊಂದೆ ಈ ಬಾಳಿನಲಿ
ಅಮ್ಮ ಮುದ್ದು ಅಮ್ಮ
ಬಲಿಸೋ ಬಗಲ ರಕ್ಕೆ
ಅಮ್ಮ ನನ್ನ ಅಮ್ಮ
ತೊಡಿಸು ಪ್ರೀತಿ ರಕ್ಷೆ
ತಾಯಿಯಾಗಿ ಪ್ರೀತಿ ಮಮತೆ
ನಿನಗೆ ನೀಡಲಿಲ್ಲ
ಯಾವ ಗೂಡಿನಲ್ಲೋ
ನಿನ್ನ ಬಿಟ್ಟು ಬಂದೇನಲ್ಲ
ಮರವಾಗಿ ನೆರಳಾಗಿ ಇರುವಾಸೆ ಹೀಗೆ
ಒಲವಿಂದು ಕವಲಾಗಿ
ಹೊಯ್ದಾಡುತಿದೇ ಇದೆ ಇದೆ..
|| ಮಾವಿನ ಮರವೇ ಮಾವಿನ ಮರವೇ
ನನ್ನ ಮರೆತೆಯಾ..
ನಿನ್ನ ಮಡಿಲಿನ ಗೂಡಿನಲಿ
ನೆಲೆ ನೀಡೆಯಾ…||
ಗುಮ್ಮಾ ಬಂದನಮ್ಮಾ
ಇರುಳ ಭಯವ ನೀಗೆ
ಅಮ್ಮ ನನ್ನ ಅಮ್ಮ
ನನಗು ಕಥೆಯ ಹೇಳೆ
ಎದೆಗೆ ಗಾಯ ಮಾಡಿದಂತ
ಕಥೆಯ ಹೇಳಲೇನು
ಎರಡು ದೋಣಿಯಲ್ಲಿ ನಿಂತ
ಬದುಕ ತಿಳಿಸಲೇನು
ನೀ ನಿಂದು ನೆನಪಾಗಿ
ನಾ ಬೆಂದೆ ಮಗು
ಬಾಳೆಲ್ಲ ಉರಿದಾಗ ಇನ್ನೆಲ್ಲಿ
ನಗು ನಗು ಮಗು
|| ಮಾವಿನ ಮರವೇ ಮಾವಿನ ಮರವೇ
ನನ್ನ ಮರೆತೆಯಾ..
ನಿನ್ನ ಮಡಿಲಿನ ಗೂಡಿನಲಿ
ನೆಲೆ ನೀಡೆಯಾ||
||ಕೋಗಿಲೆ ಮರಿಯೆ ಕೋಗಿಲೆ ಮರಿಯೆ
ಹೇಗೆ ಮರೆಯಲಿ
ನಿನ್ನ ತಬ್ಬಲಿ ಮಾಡಿ
ನೊಂದೆ ಈ ಬಾಳಿನಲಿ…||
ಮಾವಿನ ಮರವೇ ಮಾವಿನ ಮರವೇ
ನನ್ನ ಮರೆತೆಯಾ..
ನಿನ್ನ ಮಡಿಲಿನ ಗೂಡಿನಲಿ
ನೆಲೆ ನೀಡೆಯಾ
ಕೋಗಿಲೆ ಮರಿಯೆ ಕೋಗಿಲೆ ಮರಿಯೆ
ಹೇಗೆ ಮರೆಯಲಿ
ನಿನ್ನ ತಬ್ಬಲಿ ಮಾಡಿ
ನೊಂದೆ ಈ ಬಾಳಿನಲಿ
ಅಮ್ಮ ಮುದ್ದು ಅಮ್ಮ
ಬಲಿಸೋ ಬಗಲ ರಕ್ಕೆ
ಅಮ್ಮ ನನ್ನ ಅಮ್ಮ
ತೊಡಿಸು ಪ್ರೀತಿ ರಕ್ಷೆ
ತಾಯಿಯಾಗಿ ಪ್ರೀತಿ ಮಮತೆ
ನಿನಗೆ ನೀಡಲಿಲ್ಲ
ಯಾವ ಗೂಡಿನಲ್ಲೋ
ನಿನ್ನ ಬಿಟ್ಟು ಬಂದೇನಲ್ಲ
ಮರವಾಗಿ ನೆರಳಾಗಿ ಇರುವಾಸೆ ಹೀಗೆ
ಒಲವಿಂದು ಕವಲಾಗಿ
ಹೊಯ್ದಾಡುತಿದೇ ಇದೆ ಇದೆ..
|| ಮಾವಿನ ಮರವೇ ಮಾವಿನ ಮರವೇ
ನನ್ನ ಮರೆತೆಯಾ..
ನಿನ್ನ ಮಡಿಲಿನ ಗೂಡಿನಲಿ
ನೆಲೆ ನೀಡೆಯಾ…||
ಗುಮ್ಮಾ ಬಂದನಮ್ಮಾ
ಇರುಳ ಭಯವ ನೀಗೆ
ಅಮ್ಮ ನನ್ನ ಅಮ್ಮ
ನನಗು ಕಥೆಯ ಹೇಳೆ
ಎದೆಗೆ ಗಾಯ ಮಾಡಿದಂತ
ಕಥೆಯ ಹೇಳಲೇನು
ಎರಡು ದೋಣಿಯಲ್ಲಿ ನಿಂತ
ಬದುಕ ತಿಳಿಸಲೇನು
ನೀ ನಿಂದು ನೆನಪಾಗಿ
ನಾ ಬೆಂದೆ ಮಗು
ಬಾಳೆಲ್ಲ ಉರಿದಾಗ ಇನ್ನೆಲ್ಲಿ
ನಗು ನಗು ಮಗು
|| ಮಾವಿನ ಮರವೇ ಮಾವಿನ ಮರವೇ
ನನ್ನ ಮರೆತೆಯಾ..
ನಿನ್ನ ಮಡಿಲಿನ ಗೂಡಿನಲಿ
ನೆಲೆ ನೀಡೆಯಾ||
||ಕೋಗಿಲೆ ಮರಿಯೆ ಕೋಗಿಲೆ ಮರಿಯೆ
ಹೇಗೆ ಮರೆಯಲಿ
ನಿನ್ನ ತಬ್ಬಲಿ ಮಾಡಿ
ನೊಂದೆ ಈ ಬಾಳಿನಲಿ…||
Maavina Marave song lyrics from Kannada Movie Balondu Bhavageethe starring Srinath, Ananthnag, Saritha, Lyrics penned by M N Vyasa Rao Sung by Latha Hamsalekha, B R Chaya, Music Composed by Hamsalekha, film is Directed by Geethapriya and film is released on 1988