Hrudayave Lyrics

in Balondu Bhavageethe

LYRIC

ಆಆಆ...  ಆಆಆ...
 
ಹೃದಯವೇ.. .. ನೀನು
ವಿಧಿಯ ಕೈಯಲ್ಲಿರುವ ಜಾಗಟೆ
ಸಾವು ಬರುವ ಮುನ್ನ ನುಡಿವೆ ಜಾಗೃತೆ
ನಿದ್ದೆ ಮಾಡದೆ ಮಾತೆಲ್ಲ ಕೇಳುವೆ
ಸದ್ದು ಮಾಡುತ ನೀ ಮೋಜು ನೋಡುವೆ
ಗಾಳವ ಹಾಕದೇನೆ ಜೀವ ತೆಗೆಯುವೇ...
 
|| ಹೃದಯವೇ.. .. ನೀನು
ವಿಧಿಯ ಕೈಯಲ್ಲಿರುವ ಜಾಗಟೆ
ಸಾವು ಬರುವ ಮುನ್ನ ನುಡಿವೆ ಜಾಗೃತೆ…||
 
ಕಣ್ಣಿಂದಲೇ ಎಲ್ಲಾರನು ಮಾತಾಡಿಸುವೆ
ಹೆಣ್ಣಾಗಲಿ ಗಂಡಾಗಲಿ ಜೊತೆಗೂಡಿಸುವೇ
ಮನಮಿಡಿವ ಕಥೆ ಇದ್ದರೆ ಕಣ್ಣೀರಿಡುವೆ
ಸಂತೋಷದ ಭರದಲ್ಲಿ ಎಲ್ಲಾ ಮರೆವೇ 
ನೋವೇ ... ನಿನ್ನಾ ಮುಖದ ನಗೆಯೋ..
ಅಹ್ಹ ಸಾವೇ.. .. ನಿನ್ನಾ ಸುಖದಾ ಕೊನೆಯೋ
 
|| ನಿದ್ದೆ ಮಾಡದೆ ಮಾತೆಲ್ಲ ಕೇಳುವೆ
ಸದ್ದು ಮಾಡುತ ನೀ ಮೋಜು ನೋಡುವೆ
ಗಾಳವ ಹಾಕದೇನೆ ಜೀವ ತೆಗೆಯುವೇ...||
 
ಕೋಟ್ಯಾಂತರ ನರನಾಡಿಯ ಕೋಟೆಯಲಿರುವೆ
ಹರಿದಾಡುವ ಬಿಸಿ ರಕ್ತದ ಮಡುವಲ್ಲಿರುವೆ
ಮೂಳೆಗಳ ಕಾವಲಲಿ ಮಿಡಿಯುತಲಿರುವೆ
ನಾಳೆಗಳ ಎಣಿಸುತಲಿ ನಡುಗತಲಿರುವೆ
ನಿನ್ನಾ... ... ಹಾಡಿದ ಕೊನೆಯ ತಾಳ
ನನ್ನಾ.. ಆಆಆ ಬಾಳಿನ ಕೊನೆಯ ಕಾಲ
 
|| ನಿದ್ದೆ ಮಾಡದೆ ಮಾತೆಲ್ಲ ಕೇಳುವೆ
ಸದ್ದು ಮಾಡುತ ನೀ ಮೋಜು ನೋಡುವೆ
ಗಾಳವ ಹಾಕದೇನೆ ಜೀವ ತೆಗೆಯುವೇ... ಆಹ್ಹಹ
 
ಹೃದಯವೇ.. .. ನೀನು
ವಿಧಿಯ ಕೈಯಲ್ಲಿರುವ ಜಾಗಟೆ
ಸಾವು ಬರುವ ಮುನ್ನ ನುಡಿವೆ ಜಾಗೃತೆ….||

Hrudayave song lyrics from Kannada Movie Balondu Bhavageethe starring Srinath, Ananthnag, Saritha, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by Geethapriya and film is released on 1988