Kannalle Kollaballenu Lyrics

in Bahaddur Hennu

Video:

LYRIC

-
(ಏಯ್‌ ಹೆಣ್ಣು ಹೂವಲ್ಲ ಕೆರಳಿದರೆ ಹುಲಿ)
 
ಕಣ್ಣಲ್ಲೆ ಕೊಲ್ಲಬಲ್ಲೆನು ವೈರಿ ಯಾರೊ ನಾ ಬಲ್ಲೆನು
ಕಣ್ಣಲ್ಲೆ ಕೊಲ್ಲಬಲ್ಲೆನು ವೈರಿ ಯಾರೊ ನಾ ಬಲ್ಲೆನು
ಎದುರಾಳಿ ಬಂದಾಗ ಸಿಡಿಗುಂಡು ನಾನಾಗುವೆ
ಕಣ್ಣಲ್ಲೆ ಕೊಲ್ಲಬಲ್ಲೆನು ವೈರಿ ಯಾರೊ ನಾ ಬಲ್ಲೆನು
 
ಜಿಂಕೆಯಂತ ಹೆಣ್ಣು ಎಂದು ತಿಳಿಯಬೇಡವೊ
ಕೆರಳಿದಾಗ ಕಾಳಿಯಂತೆ ಮರೆಯಬೇಡವೊ
ಕೆಣಕಿದರೆ ಉಳಿಯುವರಾರಿಲ್ಲ ಧೈರ್ಯ ನನ್ನ ಪ್ರಾಣವಾಗಿದೆ
ಉಕ್ಕಿಬರುವ ಕಡಲಿನಂತೆ ರೋಷ ತುಂಬಿದೆ
ಉಕ್ಕಿನಿಂದ ಮಾಡಿದಂತ ತೋಳು ನನಗಿದೆ
ಕೋಪಿಸಲು ನಿಲ್ಲುವರಾರಿಲ್ಲ ಬಿಡೆನು ನಾನು ಗುರಿಯ ಸೇರದೆ
ಆಕಾಶ ಏನು ಈ ಭೂಮಿ ಏನು ಮನದಶಾಂತಿ ದೂರಾಗಲು
 
||ಕಣ್ಣಲ್ಲೆ ಕೊಲ್ಲಬಲ್ಲೆನು ವೈರಿ ಯಾರೊ ನಾ ಬಲ್ಲೆನು
ಎದುರಾಳಿ ಬಂದಾಗ ಸಿಡಿಗುಂಡು ನಾನಾಗುವೆ||
||ಕಣ್ಣಲ್ಲೆ ಕೊಲ್ಲಬಲ್ಲೆನು ವೈರಿ ಯಾರೊ ನಾ ಬಲ್ಲೆನು||
 
ಯಾರೊ ನೀನು ಎಂದು ಒಮ್ಮೆ ಕೇಳಬಾರದೆ
ಏಕೆ ಬಂದೆ ಎಂದು ನನ್ನ ನೋಡಬಾರದೆ
ಬೆರೆತಿರಲು ಜೊತೆಯಲಿ ನಾನಿಂದು ಓಡಿ ಓಡಿ ಇಲ್ಲಿ ಬಂದೆನು
ಎಲ್ಲಿ ಸೇರಬೇಕೊ ಇಂದು ಅಲ್ಲಿ ಸೇರಿದೆ
ಹೇಗೆ ಹಾಡಬೇಕೊ ಹಾಗೆ ರಾಗ ಹಾಡಿದೆ
ಶೃತಿ ಬೆರೆಸು ಜೊತೆಯಲ್ಲಿ ನೀನೀಗ ಕಾಣದಂತ ಆಟ ನೋಡುವೆ
ಕ್ಷಣದಲ್ಲಿ ಇಲ್ಲಿ ನಿನ್ನನ್ನು ಬೇಗ ಕೈಲಾಸಕ್ಕೆ ನಾ ಕಳಿಸುವೆ
 
||ಕಣ್ಣಲ್ಲೆ ಕೊಲ್ಲಬಲ್ಲೆನು ವೈರಿ ಯಾರೊ ನಾ ಬಲ್ಲೆನು
ಕಣ್ಣಲ್ಲೆ ಕೊಲ್ಲಬಲ್ಲೆನು ವೈರಿ ಯಾರೊ ನಾ ಬಲ್ಲೆನು
ಎದುರಾಳಿ ಬಂದಾಗ ಸಿಡಿಗುಂಡು ನಾನಾಗುವೆ||
||ಕಣ್ಣಲ್ಲೆ ಕೊಲ್ಲಬಲ್ಲೆನು ವೈರಿ ಯಾರೊ ನಾ ಬಲ್ಲೆನು||

Kannalle Kollaballenu song lyrics from Kannada Movie Bahaddur Hennu starring Roopa Ganguli, Devaraj, Sridhar, Lyrics penned by Chi Udayashankar Sung by Chithra, Music Composed by Rajan-Nagendra, film is Directed by A V Sheshagiri Rao and film is released on 1993