-
ಹೂವಂತೆ ಮೊಗವು ಇಲ್ಲ ಲತೆಯಂತೆ ನಡುವು ಇಲ್ಲ
ಕವಿ ಹಾಡೊ ಸೌಂದರ್ಯ ನಾ ಕಾಣೆನು
ನಿನಗಾಗಿ ನಾನೇಕೊ ಸೋತೆನು ಆದರು
ನಿನಗಾಗಿ ನಾನೇಕೊ ಸೋತೆನು
ಸವಿಯಾದ ಮಾತು ಇಲ್ಲ ಸಿಹಿಯಾದ ಮುತ್ತು ಇಲ್ಲ
ಒಲವಿಂದ ಆನಂದ ನೀ ತಾರದೆ
ಮನಸ್ಸಿಂದು ಹೀಗೇಕೆ ಸೋತಿದೆ ಆದರು
ಮನಸ್ಸಿಂದು ಹೀಗೇಕೆ ಸೋತಿದೆ
ಈ ಕಣ್ಣು ಕಮಲ ಅಲ್ಲ ಹುಬ್ಬಂತು ಬಿಲ್ಲಲ್ಲ
ಈ ಕಣ್ಣು ಕಮಲ ಅಲ್ಲ ಹುಬ್ಬಂತು ಬಿಲ್ಲಲ್ಲ
ಆ ದೇವಲೋಕದಿಂದ ನೀ ಜಾರಲಿಒಲ್ಲ
ಕ್ಷಣಕಾಲ ನಿನ್ನ ಬಿಟ್ಟು ಬಾಳಲು ಆಗಲ್ಲ
ನೀ ಕೃಷ್ಣನಂತೆ ಇಲ್ಲ ಆ ರಾಮನಂತಿಲ್ಲ
ಹೂಬಾಣ ತಂದ ಕಾಮ ನೀನಂತು ಅಲ್ಲ
ಕ್ಷಣಕಾಲ ನಿನ್ನನ್ನು ಮರೆತಾಗ ಈ ಜೀವ ನಿಲ್ಲಲ್ಲ
||ಹೂವಂತೆ ಮೊಗವು ಇಲ್ಲ ಲತೆಯಂತೆ ನಡುವು ಇಲ್ಲ
ಕವಿ ಹಾಡೊ ಸೌಂದರ್ಯ ನಾ ಕಾಣೆನು
ನಿನಗಾಗಿ ನಾನೇಕೊ ಸೋತೆನು ಆದರು
ನಿನಗಾಗಿ ನಾನೇಕೊ ಸೋತೆನು||
ಎದೆಯಲ್ಲಿ ನೀನೆ ತುಂಬಿ ಏನೇನೊ ಆಸೆಗಳು
ಎದೆಯಲ್ಲಿ ನೀನೆ ತುಂಬಿ ಏನೇನೊ ಆಸೆಗಳು
ಕನಸ್ಸಲ್ಲಿ ಕಾಡುವಾಗ ಹಣ್ಣಾದೆ ನಾನು
ಹೆಣ್ಣಾದೆ ಬಳಿ ಬಂದು ಅಪ್ಪಲು ನನ್ನನು
ಕಣ್ತುಂಬ ನಿನ್ನ ಬಿಂಬ ಸುಳ್ಳಲ್ಲ ನನ್ನಾಣೆ
ಮನಸ್ಸಲ್ಲಿ ನಿನ್ನ ಚಿಂತೆ ಬೇರೇನು ಕಾಣೆ
ಓ ನಲ್ಲೆ ಬದುಕೆಲ್ಲ ಬಳಿಯಲ್ಲೆ ಹೀಗಿರುವಾಸೆ
||ಸವಿಯಾದ ಮಾತು ಇಲ್ಲ ಸಿಹಿಯಾದ ಮುತ್ತು ಇಲ್ಲ
ಒಲವಿಂದ ಆನಂದ ನೀ ತಾರದೆ
ಮನಸ್ಸಿಂದು ಹೀಗೇಕೆ ಸೋತಿದೆ ಆದರು
ಮನಸ್ಸಿಂದು ಹೀಗೇಕೆ ಸೋತಿದೆ||
-
ಹೂವಂತೆ ಮೊಗವು ಇಲ್ಲ ಲತೆಯಂತೆ ನಡುವು ಇಲ್ಲ
ಕವಿ ಹಾಡೊ ಸೌಂದರ್ಯ ನಾ ಕಾಣೆನು
ನಿನಗಾಗಿ ನಾನೇಕೊ ಸೋತೆನು ಆದರು
ನಿನಗಾಗಿ ನಾನೇಕೊ ಸೋತೆನು
ಸವಿಯಾದ ಮಾತು ಇಲ್ಲ ಸಿಹಿಯಾದ ಮುತ್ತು ಇಲ್ಲ
ಒಲವಿಂದ ಆನಂದ ನೀ ತಾರದೆ
ಮನಸ್ಸಿಂದು ಹೀಗೇಕೆ ಸೋತಿದೆ ಆದರು
ಮನಸ್ಸಿಂದು ಹೀಗೇಕೆ ಸೋತಿದೆ
ಈ ಕಣ್ಣು ಕಮಲ ಅಲ್ಲ ಹುಬ್ಬಂತು ಬಿಲ್ಲಲ್ಲ
ಈ ಕಣ್ಣು ಕಮಲ ಅಲ್ಲ ಹುಬ್ಬಂತು ಬಿಲ್ಲಲ್ಲ
ಆ ದೇವಲೋಕದಿಂದ ನೀ ಜಾರಲಿಒಲ್ಲ
ಕ್ಷಣಕಾಲ ನಿನ್ನ ಬಿಟ್ಟು ಬಾಳಲು ಆಗಲ್ಲ
ನೀ ಕೃಷ್ಣನಂತೆ ಇಲ್ಲ ಆ ರಾಮನಂತಿಲ್ಲ
ಹೂಬಾಣ ತಂದ ಕಾಮ ನೀನಂತು ಅಲ್ಲ
ಕ್ಷಣಕಾಲ ನಿನ್ನನ್ನು ಮರೆತಾಗ ಈ ಜೀವ ನಿಲ್ಲಲ್ಲ
||ಹೂವಂತೆ ಮೊಗವು ಇಲ್ಲ ಲತೆಯಂತೆ ನಡುವು ಇಲ್ಲ
ಕವಿ ಹಾಡೊ ಸೌಂದರ್ಯ ನಾ ಕಾಣೆನು
ನಿನಗಾಗಿ ನಾನೇಕೊ ಸೋತೆನು ಆದರು
ನಿನಗಾಗಿ ನಾನೇಕೊ ಸೋತೆನು||
ಎದೆಯಲ್ಲಿ ನೀನೆ ತುಂಬಿ ಏನೇನೊ ಆಸೆಗಳು
ಎದೆಯಲ್ಲಿ ನೀನೆ ತುಂಬಿ ಏನೇನೊ ಆಸೆಗಳು
ಕನಸ್ಸಲ್ಲಿ ಕಾಡುವಾಗ ಹಣ್ಣಾದೆ ನಾನು
ಹೆಣ್ಣಾದೆ ಬಳಿ ಬಂದು ಅಪ್ಪಲು ನನ್ನನು
ಕಣ್ತುಂಬ ನಿನ್ನ ಬಿಂಬ ಸುಳ್ಳಲ್ಲ ನನ್ನಾಣೆ
ಮನಸ್ಸಲ್ಲಿ ನಿನ್ನ ಚಿಂತೆ ಬೇರೇನು ಕಾಣೆ
ಓ ನಲ್ಲೆ ಬದುಕೆಲ್ಲ ಬಳಿಯಲ್ಲೆ ಹೀಗಿರುವಾಸೆ
||ಸವಿಯಾದ ಮಾತು ಇಲ್ಲ ಸಿಹಿಯಾದ ಮುತ್ತು ಇಲ್ಲ
ಒಲವಿಂದ ಆನಂದ ನೀ ತಾರದೆ
ಮನಸ್ಸಿಂದು ಹೀಗೇಕೆ ಸೋತಿದೆ ಆದರು
ಮನಸ್ಸಿಂದು ಹೀಗೇಕೆ ಸೋತಿದೆ||