Doora Doora Lyrics

in Baddi Magan Lifeu

Video:

LYRIC

-
ನೀನಿಲ್ಲದ ನನ್ನದೆಯ ಬೀದೀಲಿ
ಕಾದಿರುವೆ ನಾ ಕಾಯ್ದಿರಿಸಿ ಸಮಯಾನ 
ಎದುರಿದ್ದರೂ ಇಂದೇಕೋ ನೀ ದೂರ
ಅಸಹಾಯಕ ದನಿಯಂತಾಗಿರುವೆ 
 
ಹಗಲಿರುಳಿನ ಪರಿವಿಲ್ಲ
ಹುಡುಕಿದೆ ನಾನೇ ನನ್ನ 
ನೀ ಸಾಗಿರೋ ದಾರೀಲಿ ಉಸಿರೇ ಉಸಿರೇ 
ಚೂರಾಗಿರೋ ನನ್ನ
ಮನಸಿನ ಹಾಳೆಯನ್ನ 
ನೀ ಜೋಡಿಸಿ ಓದಮ್ಮಿ ಉಸಿರೇ .. 
 
ದೂರ ದೂರ ನೀನಿದ್ದರು ಸನಿಹ
ವಿರಹ ಆವರಿಸಿ ಅಸುನೀಗಿದೆ ಹೃದಯ 
ದೂರ ದೂರ ನೀನಿದ್ದರು ಸನಿಹ
ಕಾಡೋ ನೆನಪೇಕೋ ಶೋಕದ ಪ್ರಳಯ 
 
ಹೇಳದೆ ಉಳಿದ ಮಾತು ಮೌನದಿ ಮರುಗಿ 
ಸೋತಿದೆ ಕಣ್ಣ ಕವಿತೆ ಸುಮ್ಮನೆ ಜಿನುಗಿ 
ಆಸರೆಯಾದೆಯ ಓಮ್ಮೆ ನೀ ಜೀವಕೆ 
ಏಕಾಂತದ ಸಂಜೇಲಿ 
ನಿನಗಾಗಿಯೇ ಕಾಯುವೆ
ಎಂದೆಂದಿಗೂ ಕೇಲೆ ನೀ ವೇದನೆ ಒಮ್ಮೆಲೇ 
 
||ದೂರ ದೂರ ನೀನಿದ್ದರು ಸನಿಹ
ವಿರಹ ಆವರಿಸಿ ಅಸುನೀಗಿದೆ ಹೃದಯ 
ದೂರ ದೂರ ನೀನಿದ್ದರು ಸನಿಹ
ಕಾಡೋ ನೆನಪೇಕೋ ಶೋಕದ ಪ್ರಳಯ|| 
 
ದೂರ ದೂರ ನೀ ಸಾಗಿರುವಾಗ
ದಾರಿ ತಿರುವೇಕೊ ನೆನಪಾಗಿದೆ ಈಗ 

Doora Doora song lyrics from Kannada Movie Baddi Magan Lifeu starring Bala Rajwadi, Sachin Sridhar, Aishwarya Rao, Lyrics penned by Kiran Kaverappa Sung by Vijay Prakash, Music Composed by Ashic Arun, Poornachandra Tejaswi, film is Directed by Pavan, Prasad and film is released on 2019