ನಿನ್ನ ನುಡಿಯು ಹೊನ್ನ ನುಡಿಯು, 
ಜೇನ ಹನಿಯು ಹೃದಯಕೆ
ನನ್ನ ಎದೆಯ ವೀಣೆ ತಂತಿಯ, 
ಮೀಟಿ ಓಡಿದೆ ಏತಕೆ
|| ನಿನ್ನ ನುಡಿಯು ಹೊನ್ನ ನುಡಿಯು, 
ಜೇನ ಹನಿಯು ಹೃದಯಕೆ…||
ನೆಡೆವ ಹಾದಿಗೆ ನಗೆಯ ಹೂವನು 
ಚೆಲ್ಲಿದಾಗಲು ಕಾಣದೆ  
ನೆಡೆವ ಹಾದಿಗೆ ನಗೆಯ ಹೂವನು 
ಚೆಲ್ಲಿದಾಗಲು ಕಾಣದೆ   
ಕಣ್ಗಳಿಂದಲೇ ಪ್ರಣಯ ಕಾವ್ಯವ 
ಹಾಡಿದಾಗಲು ಕೇಳದೆ
ನಿನ್ನನರಿಯದೆ ಹೋದೆನು, 
ಮನಸ ತಿಳಿಯದೆ ಹೋದೆನು
ಕನಸಿನಲಿ ಕಂಡ ಕಣ್ಣಿಗೆ 
ಆಸೆ ಪಡುವಂತಾದೆನು
 
|| ನಿನ್ನ ನುಡಿಯು ಹೊನ್ನ ನುಡಿಯು, 
ಜೇನ ಹನಿಯು ಹೃದಯಕೆ…||
ಕಂಡು ಕಾಣದ ಮಿಂಚಿನಂತೆ 
ಸುಳಿದು ಓಡಿದೆ  ದೂರಕೆ 
ಕಂಡು ಕಾಣದ ಮಿಂಚಿನಂತೆ 
ಸುಳಿದು ಓಡಿದೆ  ದೂರಕೆ    
ತಂದು ಬಯಕೆಯ ತುಂಬಿ ನನ್ನಲಿ 
ಇಂದು ಕೆಣಕಿದೆ ಏತಕೆ
ನೀನು ಗಗನದ ಕುಸುಮವು 
ನಾನು ಭೂಮಿಯ ಭ್ರಮರವು
ಮಧುವಿನಾಸೆಯು ಸಹಜವಾಗಲು 
ಸೇರಲೆಲ್ಲಿದೆ ಹಾದಿಯು
|| ನಿನ್ನ ನುಡಿಯು ಹೊನ್ನ ನುಡಿಯು, 
ಜೇನ ಹನಿಯು ಹೃದಯಕೆ
ನನ್ನ ಎದೆಯ ವೀಣೆ ತಂತಿಯ, 
ಮೀಟಿ ಓಡಿದೆ ಏತಕೆ
ನಿನ್ನ ನುಡಿಯು ಹೊನ್ನ ನುಡಿಯು,
ಜೇನ ಹನಿಯು ಹೃದಯಕೆ…||
                                                
          
                                             
                                                                                                                                    
                                                                                                                                                                        
                                                            
ನಿನ್ನ ನುಡಿಯು ಹೊನ್ನ ನುಡಿಯು, 
ಜೇನ ಹನಿಯು ಹೃದಯಕೆ
ನನ್ನ ಎದೆಯ ವೀಣೆ ತಂತಿಯ, 
ಮೀಟಿ ಓಡಿದೆ ಏತಕೆ
|| ನಿನ್ನ ನುಡಿಯು ಹೊನ್ನ ನುಡಿಯು, 
ಜೇನ ಹನಿಯು ಹೃದಯಕೆ…||
ನೆಡೆವ ಹಾದಿಗೆ ನಗೆಯ ಹೂವನು 
ಚೆಲ್ಲಿದಾಗಲು ಕಾಣದೆ  
ನೆಡೆವ ಹಾದಿಗೆ ನಗೆಯ ಹೂವನು 
ಚೆಲ್ಲಿದಾಗಲು ಕಾಣದೆ   
ಕಣ್ಗಳಿಂದಲೇ ಪ್ರಣಯ ಕಾವ್ಯವ 
ಹಾಡಿದಾಗಲು ಕೇಳದೆ
ನಿನ್ನನರಿಯದೆ ಹೋದೆನು, 
ಮನಸ ತಿಳಿಯದೆ ಹೋದೆನು
ಕನಸಿನಲಿ ಕಂಡ ಕಣ್ಣಿಗೆ 
ಆಸೆ ಪಡುವಂತಾದೆನು
 
|| ನಿನ್ನ ನುಡಿಯು ಹೊನ್ನ ನುಡಿಯು, 
ಜೇನ ಹನಿಯು ಹೃದಯಕೆ…||
ಕಂಡು ಕಾಣದ ಮಿಂಚಿನಂತೆ 
ಸುಳಿದು ಓಡಿದೆ  ದೂರಕೆ 
ಕಂಡು ಕಾಣದ ಮಿಂಚಿನಂತೆ 
ಸುಳಿದು ಓಡಿದೆ  ದೂರಕೆ    
ತಂದು ಬಯಕೆಯ ತುಂಬಿ ನನ್ನಲಿ 
ಇಂದು ಕೆಣಕಿದೆ ಏತಕೆ
ನೀನು ಗಗನದ ಕುಸುಮವು 
ನಾನು ಭೂಮಿಯ ಭ್ರಮರವು
ಮಧುವಿನಾಸೆಯು ಸಹಜವಾಗಲು 
ಸೇರಲೆಲ್ಲಿದೆ ಹಾದಿಯು
|| ನಿನ್ನ ನುಡಿಯು ಹೊನ್ನ ನುಡಿಯು, 
ಜೇನ ಹನಿಯು ಹೃದಯಕೆ
ನನ್ನ ಎದೆಯ ವೀಣೆ ತಂತಿಯ, 
ಮೀಟಿ ಓಡಿದೆ ಏತಕೆ
ನಿನ್ನ ನುಡಿಯು ಹೊನ್ನ ನುಡಿಯು,
ಜೇನ ಹನಿಯು ಹೃದಯಕೆ…||
                                                        
                                                     
                                                                                                                                                            
                                                        Ninna Nudiyu Honna Nudiyu song lyrics from Kannada Movie Badavara Bandhu starring Dr Rajkumar, Jayamala, K S Ashwath, Lyrics penned by Chi Udayashankar Sung by Dr Rajkumar, Music Composed by M Ranga Rao, film is Directed by Vijay and film is released on 1976