Ilidu Baa Thaayi Ilidu Baa Lyrics

ಇಳಿದು ಬಾ ತಾಯಿ ಇಳಿದು ಬಾ Lyrics

in Arishina Kumkuma

in ಅರಿಶಿನ ಕುಂಕುಮ

LYRIC

Song Details Page after Lyrice

ಆಆ..ಆಆ.. ಆಆ..ಆಆ..
ಓಂ..ಓಂ..ಓಂ..
ಇಳಿದು ಬಾ ತಾಯಿ ಇಳಿದು ಬಾ

ಇಳಿದು ಬಾ ತಾಯಿ ಇಳಿದು ಬಾ
ಹರನ ಜಡೆಯಿಂದ ಹರಿಯ ಅಡಿಯಿಂದ
ಋಷಿಯ ತೊಡೆಯಿಂದ ನುಸುಳಿ ಬಾ
ದೇವ ದೇವರನು ತಣಿಸಿ ಬಾ
ದಿಗ್ ದಿಗಂತದಲಿ ಘಣಿಸಿ ಬಾ
ಚರಾಚರಗಳಿಗೆ ಉಣಿಸಿ ಬಾ

ನಿನಗೆ ಪೊಡಮಡುವೆ ನಿನ್ನ ನುಡುತೊಡುವೆ
ಏಕೆ ಎಡೆತಡೆವೆ ಸುರಿದು ಬಾ
ಸ್ವರ್ಗ ತೊರೆದು ಬಾ… ಬಯಲ ಜರೆದು ಬಾ
ನೆಲೆದೆ ಹರಿದು ಬಾ…
ಬಾರೆ ಬಾ ತಾಯಿ ಇಳಿದು ಬಾ

ದಯೆಯಿರದ ದೀನ ಹರೆಯಳಿದ ಹೀನ
ನೀರಿರದ ಮೀನ ಕರೆಕರೆವ ಬಾ
ಕರು ಕಂಡ ಕರುಳೆ ಮನವುಂಡ ಮರುಳೆ
ಉದ್ದಂಡ ಅರುಳೆ ಸುಳಿಸುಳಿದು ಬಾ
ಶಿವ ಶುದ್ದ ಕರುಣೆ ಅತಿಗಿಂಚದರುಣೆ
ವಾತ್ಸಲ್ಯವರುಣೆ ಇಳಿ ಇಳಿದು ಬಾ
ಸುರಸ್ವಪ್ನವಿದ್ದ ಪ್ರತಿಬಿಂಬವಿದ್ದ
ಉದ್ದುದ್ದ ಶುದ್ದ ನೀರೇ..ನೀರೇ..
ಎಚ್ಚೆತ್ತು  ಎದ್ದ ಆಕಾಶದುದ್ದ
ಧರೆಗಿಳಿಯಲಿದ್ದ ಧೀರೆ
ಸಿರಿಪಾರಿಜಾತ ವರಪಾರಿಜಾತ
ತಾರಾ ಕುಸುಮದಿಂದೇ
ಬೃಂದಾರವಂದೆ ಮಂದಾರಗಂದೆ
ನೀನೇ ತಾಯಿ ತಂದೆ
ರಸಪೂರ್ಣಜನ್ಯೆ ನೀನಲ್ಲ ಅನ್ಯೆ
ಸಚ್ಚಿದಾನಂದ ಕನ್ಯೆ....ಕನ್ಯೆ…
 
|| ಇಳಿದು ಬಾ ತಾಯಿ ಇಳಿದು ಬಾ…||

ಬಂದಾರೆ ಬಾರೆ ಒಂದಾರೆ ಸಾರೆ
ಕಣ್ ಧಾರೆ ತಡೆವರೇನೆ
ಅವತಾರವೆಂದೆ ಎಂದಾರೆ ತಾಯಿ
ಈ ಅಧ:ಪಾತವನ್ನೇ
ಹರಕೆ ತಂದಂತೆ ಮಮತೆ ಮಿಂದಂತೆ
ತುಂಬಿ ಬಂದಂತೆ….
ಬಂದಾರೆ ಬಾರೆ ಒಂದಾರೆ ಸಾರೆ
ಕಣ್ ಧಾರೆ ತಡೆವರೇನೆ
ಅವತಾರವೆಂದೆ ಎಂದಾರೆ ತಾಯಿ
ಈ ಅಧ:ಪಾತವನ್ನೇ
ಹರಕೆ ತಂದಂತೆ ಮಮತೆ ಮಿಂದಂತೆ
ತುಂಬಿ ಬಂದಂತೆ….
 
ದುಂ ದುಂ ಎಂದಂತೆ ದುಡುಕಿ ಬಾ
ನಿನ್ನ ಕಂದನ್ನ ಹುಡುಕಿ ಬಾ
ಹುಡುಕಿ ಬಾ ತಾಯಿ ದುಡುಕಿ ಬಾ
ಹರಣ ಹೊಸತಾಗೆ ಹೊಳೆದು ಬಾ
ಬಾಳು ಬೆಳಕಾಗಿ ಬೆಳೆದು ಬಾ
ಶಂಭು ಶಿವಹರನ ಚಿತ್ತೆ ಬಾ
ದತ್ತ ನರಹರಿಯ ಮುತ್ತೆ ಬಾ
ಅಂಬಿಕಾತನಯನತ್ತೆ ಬಾ

|| ಇಳಿದು ಬಾ ತಾಯಿ ಇಳಿದು ಬಾ
ಇಳಿದು ಬಾ ತಾಯಿ ಇಳಿದು ಬಾ…||

 

ಆಆ..ಆಆ.. ಆಆ..ಆಆ..
ಓಂ..ಓಂ..ಓಂ..
ಇಳಿದು ಬಾ ತಾಯಿ ಇಳಿದು ಬಾ

ಇಳಿದು ಬಾ ತಾಯಿ ಇಳಿದು ಬಾ
ಹರನ ಜಡೆಯಿಂದ ಹರಿಯ ಅಡಿಯಿಂದ
ಋಷಿಯ ತೊಡೆಯಿಂದ ನುಸುಳಿ ಬಾ
ದೇವ ದೇವರನು ತಣಿಸಿ ಬಾ
ದಿಗ್ ದಿಗಂತದಲಿ ಘಣಿಸಿ ಬಾ
ಚರಾಚರಗಳಿಗೆ ಉಣಿಸಿ ಬಾ

ನಿನಗೆ ಪೊಡಮಡುವೆ ನಿನ್ನ ನುಡುತೊಡುವೆ
ಏಕೆ ಎಡೆತಡೆವೆ ಸುರಿದು ಬಾ
ಸ್ವರ್ಗ ತೊರೆದು ಬಾ… ಬಯಲ ಜರೆದು ಬಾ
ನೆಲೆದೆ ಹರಿದು ಬಾ…
ಬಾರೆ ಬಾ ತಾಯಿ ಇಳಿದು ಬಾ

ದಯೆಯಿರದ ದೀನ ಹರೆಯಳಿದ ಹೀನ
ನೀರಿರದ ಮೀನ ಕರೆಕರೆವ ಬಾ
ಕರು ಕಂಡ ಕರುಳೆ ಮನವುಂಡ ಮರುಳೆ
ಉದ್ದಂಡ ಅರುಳೆ ಸುಳಿಸುಳಿದು ಬಾ
ಶಿವ ಶುದ್ದ ಕರುಣೆ ಅತಿಗಿಂಚದರುಣೆ
ವಾತ್ಸಲ್ಯವರುಣೆ ಇಳಿ ಇಳಿದು ಬಾ
ಸುರಸ್ವಪ್ನವಿದ್ದ ಪ್ರತಿಬಿಂಬವಿದ್ದ
ಉದ್ದುದ್ದ ಶುದ್ದ ನೀರೇ..ನೀರೇ..
ಎಚ್ಚೆತ್ತು  ಎದ್ದ ಆಕಾಶದುದ್ದ
ಧರೆಗಿಳಿಯಲಿದ್ದ ಧೀರೆ
ಸಿರಿಪಾರಿಜಾತ ವರಪಾರಿಜಾತ
ತಾರಾ ಕುಸುಮದಿಂದೇ
ಬೃಂದಾರವಂದೆ ಮಂದಾರಗಂದೆ
ನೀನೇ ತಾಯಿ ತಂದೆ
ರಸಪೂರ್ಣಜನ್ಯೆ ನೀನಲ್ಲ ಅನ್ಯೆ
ಸಚ್ಚಿದಾನಂದ ಕನ್ಯೆ....ಕನ್ಯೆ…
 
|| ಇಳಿದು ಬಾ ತಾಯಿ ಇಳಿದು ಬಾ…||

ಬಂದಾರೆ ಬಾರೆ ಒಂದಾರೆ ಸಾರೆ
ಕಣ್ ಧಾರೆ ತಡೆವರೇನೆ
ಅವತಾರವೆಂದೆ ಎಂದಾರೆ ತಾಯಿ
ಈ ಅಧ:ಪಾತವನ್ನೇ
ಹರಕೆ ತಂದಂತೆ ಮಮತೆ ಮಿಂದಂತೆ
ತುಂಬಿ ಬಂದಂತೆ….
ಬಂದಾರೆ ಬಾರೆ ಒಂದಾರೆ ಸಾರೆ
ಕಣ್ ಧಾರೆ ತಡೆವರೇನೆ
ಅವತಾರವೆಂದೆ ಎಂದಾರೆ ತಾಯಿ
ಈ ಅಧ:ಪಾತವನ್ನೇ
ಹರಕೆ ತಂದಂತೆ ಮಮತೆ ಮಿಂದಂತೆ
ತುಂಬಿ ಬಂದಂತೆ….
 
ದುಂ ದುಂ ಎಂದಂತೆ ದುಡುಕಿ ಬಾ
ನಿನ್ನ ಕಂದನ್ನ ಹುಡುಕಿ ಬಾ
ಹುಡುಕಿ ಬಾ ತಾಯಿ ದುಡುಕಿ ಬಾ
ಹರಣ ಹೊಸತಾಗೆ ಹೊಳೆದು ಬಾ
ಬಾಳು ಬೆಳಕಾಗಿ ಬೆಳೆದು ಬಾ
ಶಂಭು ಶಿವಹರನ ಚಿತ್ತೆ ಬಾ
ದತ್ತ ನರಹರಿಯ ಮುತ್ತೆ ಬಾ
ಅಂಬಿಕಾತನಯನತ್ತೆ ಬಾ

|| ಇಳಿದು ಬಾ ತಾಯಿ ಇಳಿದು ಬಾ
ಇಳಿದು ಬಾ ತಾಯಿ ಇಳಿದು ಬಾ…||

 

Ilidu Baa Thaayi Ilidu Baa song lyrics from Kannada Movie Arishina Kumkuma starring Kalpana, Kalyan Kumar, Rajesh, Lyrics penned by Da Ra Bendre Sung by P B Srinivas, Music Composed by Vijaya Bhaskar, film is Directed by Ravi (K S L Swamy) and film is released on 1970
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ