Jeeva Neenu Nannolave Lyrics

in Appayya

Video:

LYRIC

ಜೀವ ನೀನು ನನ್ನೊಲವೇ ನಿನ್ನ ಹಿಂದೆ ನಾ ಬರುವೇ
ಅದು ಎಲ್ಲಿಂದ ನೀ ಬಂದೆ ಓ ನನ್ನ ದೇವತೆ
ಪೂಜಿಸಲೇ ಪ್ರೀತಿಸಲೇ ಪ್ರೀತಿಸಲೇ ಪೂಜಿಸಲೇ
ಜೀವ ನೀನು ನನ್ನೊಲವೇ ನಿನ್ನ ಹಿಂದೆ ನಾ ಬರುವೇ
 
ನನ್ನಲ್ಲು ಹೀಗೊಂದು ಮನಸ್ಸುಂಟು
ಅಂತಂದು ತಿಳಿಸಿದ್ದೆ ನೀ ಬಂದು
ನೀ ಯಾರೊ ನಂಗೆಂದು ಯಾರನ್ನ ಕೇಳೋದು
ನೀನೇನೆ ಹೇಳಿಂದು
ನಾನು ಬಡಪಾಯಿ ನೀ ನನ್ನ ಹೊಸತಾಯಿ
ನಾನು ದಿನಗೂಲಿ ನೀ ನನ್ನ ದೊರೆಸಾನಿ
ನನ್ನೆದೆಯ ಮರುಭೂಮಿಯಲಿ
ಹೊರಹೊಮ್ಮಿದ ಗಂಗೆಯು ನೀ
ನೀ ಬಂದು ಆಗಿರುವೆ ಜೀವಂತ
ನನ್ನ ಈ ಜೀವ ಇನ್ನು ಬರಿ ನಿಂಗಂತ
 
||ಜೀವ ನೀನು ನನ್ನೊಲವೇ ನಿನ್ನ ಹಿಂದೆ ನಾ ಬರುವೇ||
 
ಕಲ್ಲಂತ ಎದೆಯಲ್ಲಿ ಬೇಸಾಯ ಮಾಡಿರುವೆ
ಹೂ ನೆಟ್ಟು ಕೂತಿರುವೆ
ಸುಡುಗಾಡ ಊರಲ್ಲಿ ಸಂಗೀತ ಹಾಡಿರುವೆ
ನನ್ನನ್ನೆ ಕಾಡಿರುವೆ
ನಾನು ಅಲೆಮಾರಿ ನೀ ಬಲು ಸುಕುಮಾರಿ
ನಾನು ಬಿರುಗಾಳಿ ನೀ ತಂಪು ತಂಗಾಳಿ
ನನ್ನ ಜೊತೆ ನೀ ನಡೆಯುವುದು ಇದು ಸರಿಯೆ ನಾ ತಿಳಿಯೆ
ಇಷ್ಟೊಂದು ಸುಂದರವೆ ಈ ಲೋಕ
ಯಾಕೆ ನೀ ನಂಗೆ ತೋರಿಸಿದೆ ಈ ಸ್ವರ್ಗ
 
||ಜೀವ ನೀನು ನನ್ನೊಲವೇ ನಿನ್ನ ಹಿಂದೆ ನಾ ಬರುವೇ
ಅದು ಎಲ್ಲಿಂದ ನೀ ಬಂದೆ ಓ ನನ್ನ ದೇವತೆ
ಪೂಜಿಸಲೇ ಪ್ರೀತಿಸಲೇ ಪ್ರೀತಿಸಲೇ ಪೂಜಿಸಲೇ||
 
||ಜೀವ ನೀನು ನನ್ನೊಲವೇ ನಿನ್ನ ಹಿಂದೆ ನಾ ಬರುವೇ||

Jeeva Neenu Nannolave song lyrics from Kannada Movie Appayya starring Srinagar Kitty, Bhama, S Narayan, Lyrics penned by Kaviraj Sung by Karthik, Music Composed by S Narayan, film is Directed by S Narayan and film is released on 2013