ಕನ್ನಡದ ಕಂದ ಇಯ್ಯ ಇಯ್ಯ ಹೋ
ಎಲ್ಲರಿಗೂ ಚೆಂದ ಇಯ್ಯ ಇಯ್ಯ ಹೋ
ಮಾತು ಕೊಟ್ಟರೆ ಮಣ್ಣಿನಾಣೆ ಇಟ್ಟರೆ
ಜೀವ ಕೊಡೊ ಕಂದ ...
ಕಸ್ತೂರಿಯ ಗಂಧ ಇಯ್ಯ ಇಯ್ಯ ಹೋ
ಲೋಕಕೆಲ್ಲ ಚೆಂದ ಇಯ್ಯ ಇಯ್ಯ ಹೋ
ಪ್ರೀತಿ ಇಟ್ಟರೆ ಬೆನ್ನು ತಟ್ಟಿ ಕೊಟ್ಟರೆ
ಹಾಡು ಹೇಳೊ ಕಂದ
ಕನ್ನಡದ ಕಂದ ಇಯ್ಯ ಇಯ್ಯ ಹೋ
ಎಲ್ಲರಿಗೂ ಚಂದ ಆ ಇಯ್ಯ ಇಯ್ಯ ಹೋ
ಕನ್ನಡದ ಅಂದ ಚಂದ ಹಾಡುತ್ತಿದ್ದರೆ
ನಿತ್ಯ ಮೂರು ಹೊತ್ತು ಸಾಲದು
ಕನ್ನಡದ ಕಾವ್ಯಗಳ ಕೇಳುತ್ತಿದ್ದರೆ
ಸತ್ಯ ಬಿಟ್ಟು ಬೇರೆ ಏನು ತೋಚದು
ಚಲುವೇ ಚಲುವೇ ಕನ್ನಡತಿ
ಅವಳೇ ದಿನ ಸ್ಫೂರ್ತಿ
ನಮಗೆ ಅವಳ ವರದಿಂದ
ಅಜರಾಮರ ಕೀರ್ತಿ
ಕನ್ನಡ ನೆಲಕ್ಕೆ ಕಾವೇರಿಯ ಜಲಕ್ಕೆ ಋಣ ಪಟ್ಟ ಕಂದ
|| ಕನ್ನಡದ ಕಂದ ಇಯ್ಯ ಇಯ್ಯ ಹೋ
ಎಲ್ಲರಿಗೂ ಚೆಂದ ಇಯ್ಯ ಇಯ್ಯ ಹೋ
ಮಾತು ಕೊಟ್ಟರೆ ಮಣ್ಣಿನಾಣೆ ಇಟ್ಟರೆ
ಜೀವ ಕೊಡೊ ಕಂದ ... ||
||ಕನ್ನಡದ ಕಂದ ಇಯ್ಯ ಇಯ್ಯ ಹೋ
ಎಲ್ಲರಿಗೂ ಚಂದ ಆ ಇಯ್ಯ ಇಯ್ಯ ಹೋ ||
(ಡೈಲಾಗ್ : ಗುರು ಅನುರಾಗ ಹಾಡು ಗುರು. .
ಹೌದು ಹೌದು ಅನುರಾಗ ಹಾಡಬೇಕು. . .
ಅನುರಾಗದಲೆಗಳ ಮೇಲೆ ಸಂಗೀತ ಸ್ವರಗಳ ಲೀಲೆ
ನಡೆದಾಗ ಜೀವನಗಾನ ರಸಪೂರ್ಣವೋ
ಓ.. ಮನಸೇ ಕಡಲಾಗಿರು... ಮುಗಿಲಾಗುವೇ. . . . . )
ಮಲ್ಲಿಗೆಯ ಸಂಪಿಗೆಯ ಕಂಪು ಬೀರುವ
ಚಂದನದ ಹಾಡು ಕಟ್ಟುವೇ
ಉತ್ತರದ ದಕ್ಷಿಣದ ಇಂಪು ಸೂಸುವ
ಪಶ್ಚಿಮದ ರಾಗ ಹಾಕುವೇ
ಪೂರ್ವಾಪರದದ ಹಿತ ನೋಡಿ ಹಾಡಿ ನಲಿವೆ
ನಡುವೆ ನಡುವೇ ನಗು ಬೆರೆಸಿ ನಿಮ್ಮ ಮನ ಗೆಲುವೇ
ನೀವೆ ಇಲ್ಲದೇ ಜೀವನ ಎಲ್ಲಿದೆ ನಾನು ನಿಮ್ಮ ಕಂದ. . .
|| ಕನ್ನಡದ ಕಂದ ಇಯ್ಯ ಇಯ್ಯ ಹೋ
ಎಲ್ಲರಿಗೂ ಚೆಂದ ಇಯ್ಯ ಇಯ್ಯ ಹೋ
ಮಾತು ಕೊಟ್ಟರೆ ಮಣ್ಣಿನಾಣೆ ಇಟ್ಟರೆ
ಜೀವ ಕೊಡೊ ಕಂದ ... ||
||ಕನ್ನಡದ ಕಂದ ಇಯ್ಯ ಇಯ್ಯ ಹೋ
ಎಲ್ಲರಿಗೂ ಚಂದ ಆ ಇಯ್ಯ ಇಯ್ಯ ಹೋ ||