Haarale Bellimodaveri Lyrics

in Angaili Apsare

Video:

LYRIC

-
ಹಾರಲೆ ಬೆಳ್ಳಿಮೋಡವೇರಿ ಈಗ ನಾನು
ಜಾರಲೆ ಮೇಲಿನಿಂದ ಸ್ವರ್ಗ ಕಂಡೆ ಎಂದು ಕೂಗಲೆ
ನನ್ನ ಸಂಗಾತಿ ನೀ ಬೇಗ ಹೇಳೆ
 
ಹಾರಲೆ ಬೆಳ್ಳಿಮೋಡವೇರಿ ಈಗ ನಾನು
ಜಾರಲೆ ಮೇಲಿನಿಂದ ಸ್ವರ್ಗ ಕಂಡೆ ಎಂದು ಕೂಗಲೆ
ನನ್ನ ಸಂಗಾತಿ ನೀ ಬೇಗ ಹೇಳೆ
 
ನೆನ್ನೆಗಿಂತ ಮೊನ್ನೆಗಿಂತ ಅಂದಿಗಿಂತ ಎಂದಿಗಿಂತ
ಏನೇನೊ ಬೇಕೆಂಬ ಆಸೆ
ಏಕೆ ಹೀಗೆಂದು ನಾ ಕಾಣೆ ಹೇಳೆ ನೀ ಬಲ್ಲೆಯ
 
ನಿನ್ನ ಸೇರಿ ಬಾನಿನಲ್ಲಿ ತಾರೆಯಂತೆ ಚಂದ್ರನಂತೆ
ಇರಬೇಕು ನಾನೆಂಬ ಆಸೆ
ಹೇಗೆ ಬಂತೆಂದು ನಾ ಕಾಣೆ ಹೇಳೆ ನೀ ಬಲ್ಲೆಯ
ಕಬ್ಬಿನಿಂದ ಬಿಲ್ಲು ಮಾಡಿ ತಂದಾತ
ಗಾಳಿಯಲ್ಲಿ ತೇಲಿ ತೇಲಿ ಬಂದಾತ
ನನ್ನ ನಿನ್ನ ಜೋಡಿಯನ್ನುಕಂಡಾತ
ಹೂವಿನಿಂದ ಬಾಣ ಮಾಡಿ ಬಿಟ್ಟಾತ
ಕಾಣದಂತೆ ಏನೊ ಮೋಡಿ ಮಾಡಿ ಓಡಿ ಇಂದೀಗ ಹೀಗಾಯಿತೆ
 
||ಹಾರಲೆ ಬೆಳ್ಳಿಮೋಡವೇರಿ ಈಗ ನಾನು
ಜಾರಲೆ ಮೇಲಿನಿಂದ ಸ್ವರ್ಗ ಕಂಡೆ ಎಂದು ಕೂಗಲೆ
ನನ್ನ ಸಂಗಾತಿ ನೀ ಬೇಗ ಹೇಳೆ||
 
ಸಂಜೆಗೆಂಪು ಕೆನ್ನೆಯಲ್ಲಿ ಸೂರ್ಯಕಾಂತಿ ಕಣ್ಣಿನಲ್ಲಿ
ನನ್ನಾಣೆ ನಿನ್ನಲ್ಲಿ ಕಂಡೆ
ಏನೊ ಈ ಮಾಯೆ ನಾ ಕಾಣೆ ಹೇಳೆ ನೀ ಅಪ್ಸರೆ
 
ತಂಪು ಗಾಳಿಬೀಸಿದಂತೆ ಹೂವ ಕಂಪು ಚೆಲ್ಲಿದಂತೆ
ಸಂತೋಷ ನಾನಿಂದು ಕಂಡೆ
ಏಕೊ ಹೀಗಾಯ್ತು ನಾ ಕಾಣೆ ಹೇಳು ಓ ಅಪ್ಸರೆ
ನನ್ನ ಮೈಯ್ಯಲ್ಲೊಂದು ಮಿಂಚು ಬಂತೀಗ
ನಿನ್ನ ಅಪ್ಪುವಾಸೆ ಬಂತು ಯಾಕೀಗ
ಯಾರು ಇದ್ದರೇನು ಚಿನ್ನ ಹೇಳೀಗ
ಇನ್ನು ನಾನು ತಾಳಲಾರೆ ಆ ವೇಗ
ಪ್ರೀತಿಯಲ್ಲ ಪ್ರೇಮವಲ್ಲ ಏನು ಅಲ್ಲ
ಇನ್ನೇನೊ ನನಗಾಗಿದೆ
 
||ಹಾರಲೆ ಬೆಳ್ಳಿಮೋಡವೇರಿ ಈಗ ನಾನು
ಜಾರಲೆ ಮೇಲಿನಿಂದ ಸ್ವರ್ಗ ಕಂಡೆ ಎಂದು ಕೂಗಲೆ
ನನ್ನ ಸಂಗಾತಿ ನೀ ಬೇಗ ಹೇಳೆ||

Haarale Bellimodaveri song lyrics from Kannada Movie Angaili Apsare starring Kumar Bangarappa, Supriya, Srinath, Lyrics penned by Chi Udayashankar Sung by S P Balasubrahmanyam, Music Composed by S P Balasubramanyam, film is Directed by C R Simha and film is released on 1993