Nenapina Dariyalee Amma Song Lyrics

in Angaili Akshara

Video:

LYRIC

ಅಮ್ಮಾ ಅಮ್ಮಾ
ನೆನಪಿನ ದಾರಿಯಲ್ಲಿ
ಹುಡುಕುತ ನಾ ಬರುವೆ
ಎಲ್ಲಿರುವೆ ನೀ ಅಮ್ಮಾ
 
ನೆಲೆಯ ಅಲೆಯ ನಾ ಹುಡುಕುತ
ನಿನ್ನ ಗುರಿಯ ನಾ ತಲುಪುವೆ
 
ಕಣ್ತೆರೆವ ಮುನ್ನವೆ ಅರಿತೆನು
ಅಮ್ಮನ ಸ್ಪರ್ಶವನು
ಬಾಯ್ತೆರೆವ ಮೊದಲೆ ಕಲಿತೆನು
ಅಮ್ಮಾ ಎನ್ನಲೂ
ನಿನ್ನಯ ಕೈತುತ್ತು
ಎದೆಹಾಲನು ಎರವಲು ಪಡೆದು
 
ಉಸಿರಾಡುತಿಹ ಈ ಜೀವ
ನೀ ಕೊಟ್ಟ ಭಿಕ್ಷೆಯಮ್ಮಾ
ನೀ ಕೊಟ್ಟ ಭಿಕ್ಷೆಯಮ್ಮಾ
 
||ಕಣ್ತೆರೆವ ಮುನ್ನವೆ ಅರಿತೆನು
ಅಮ್ಮನ ಸ್ಪರ್ಶವನು
ಬಾಯ್ತೆರೆವ ಮೊದಲೆ ಕಲಿತೆನು
ಅಮ್ಮಾ ಎನ್ನಲೂ||
 
ನನ್ನುಸಿರಿನ ವಾರಸುದಾರಿ ನೀನು
ಈ ಜಗವ ತೋರಿದ
ಮೊದಲ ಗುರು ನೀನು
 
ಪ್ರತಿ ಪದ ಬಯಸದ
ಕರುಣಾಮಯಿ ನೀನು
ನಿನ್ನ ತ್ಯಾಗಕ್ಕೆ
ಸರಿಸಾಟಿಯಾರು ಇನ್ನು..
 
ಕಣ್ಣೆದುರು ಕಾಣುವ
ಆ ದೇವರ ಪ್ರತಿರೂಪ ನೀ ಅಮ್ಮ
ನೀ ಅಮ್ಮ
ನೀ ಅಮ್ಮ
ನೀ ಅಮ್ಮ
ನೀ ಅಮ್ಮ
ಆಆಆ….ಆಆಆ….ಆಆ.
 
ತಾಳಲಾರೆನೀ  ಬಿರುಬಿಸಿಲಿನ ತಾಪ
ನಿನ್ನಿಂದ ದೂರ ಮಾಡಿದ
ದೇವರಿಗು ಇರಲಿ ಒಂದು ಶಾಪ
ನಡೆದು ನಡೆದು ದಣಿವಾಗಿದೆ
ತುಂಬಾ ಹಸಿವಾಗಿದೆ
ಅದೇಕೋ ಭಯ ಆವರಿಸಿದೆ
ಅದೇಕೋ ಭಯ ಆವರಿಸಿದೆ
 
ಈ ಕರುಳಿನ ಕರೆ ಕೇಳದೆ ಅಮ್ಮಾ
ಅಮ್ಮಾ
ಅಮ್ಮಾ
ಅಮ್ಮಾ
ಅಮ್ಮಾ

Nenapina Dariyalee Amma song lyrics from Kannada Movie Angaili Akshara starring Govinde Gowda, Chandraprabha, Tanush Raj, Lyrics penned by Jnanesha MB Sung by Sarigamapa Sunil Gujagonda, Music Composed by AT Ravish. , film is Directed by Siddaraju H Kalenahalli and film is released on 2022