ಒಲವ ಕುಲುಮೆಯನು ಊದಿ ಹೋದೆ ಏಕೆ ನೀ ದೂರ
ಮನದ ಪುಟಗಳಲಿ ಇಂದು ನಿನ್ನ ಬರಹಗಳೆ ಭಾರ
ಎದೆಯ ಮಹಲ್ಲಿಗೆ ಒಂಟಿತನವನು ಕೊಡುಗೆಯ ನೀಡಿ
ಹೋಗ ಮನಸನು ಹೇಗೆ ಮಾಗಿದೆ ಬಾರೊ ದಯಮಾಡಿ
ವಿರಹ ಉಗುಳುವ ಕಿಡಿಗೆ ಮನಸು ಆಗುತ್ತಿದೆ ಚೂರು
ಉಸಿರು ನಿಲ್ಲುವ ಮುನ್ನ ಬೇಗ ಬಂದು ನೀ ಸೇರು
ಬಂದ ದಾರಿಲಿ ಮತ್ತೆ ಹಿಂತಿರುಗಿ ಹೋಗಲು ಏಕೊ ಬೇಸರ
ದಾರಿ ಉದ್ದಕ್ಕೂ ನಿನ್ನ ಪ್ರಶ್ನೆ ಕೊಡಲು ಏನಿಲ್ಲ ಉತ್ತರ
ಕಣ್ಣಭಾಷೆಯ ನೂರು ವಿನಿಮಯ ಮನದಲೆ ಅವಿತು ಕುಳಿತಿದೆ
ಏನು ಅನ್ನದೆ ಏಕೆ ಹೋದೆಯೊ ಒಂದು ಮಾತನು ತಿಳಿಸದೆ
ಮಾಯದ ಸುಳಿಯಲಿ ಸಿಲುಕಿ ನಲುಗಿದೆ ನನ್ನಿ ಜೀವನ
ಕಣ್ಣಿನ ಹನಿಗಳು ಜಾರಲು ನೀನೆ ನೀನೆ ಕಾರಣ
||ಒಲವ ಕುಲುಮೆಯನು ಊದಿ ಹೋದೆ ಏಕೆ ನೀ ದೂರ
ಮನದ ಪುಟಗಳಲಿ ಇಂದು ನಿನ್ನ ಬರಹಗಳೆ ಭಾರ||