ಮನದ ಹವಮಾನ
ಇಂದೇತಕೋ ಅನುಮಾನ
ನಿನಗಾಗಿಯೆ ತಂದಂತ ವಚನ
ನೀಡುವ ಮೊದಲೇ ಈ ದಿನ
ಬದಲಾಯಿತೆ ಋತುಮಾನ
||ಮನದ ಹವಮಾನ
ಇಂದೇತಕೊ ಅನುಮಾನ
ಮರೆಮಾಚಿಯೆ ಬರೆದಂತ ಕವನ
ಹಾಡುವ ಮೊದಲೇ ಈ ದಿನ
ಬದಲಾಯಿತೆ ಋತುಮಾನ||
ಎದೆಯ ಕಿಟಕಿಯಲಿ ನಿಂತು
ದಿನ ರಾತ್ರಿ ಕರೆವ ರೂಪವೆ
ಮರೆಯಾಗಿ ಹೇಗೆ ನೀ ಇರುವೆ
ಎರಡು ಕನಸುಗಳು ಬೆರೆತ
ಸವಿ ಸೇತುವೆಯೊಂದನ್ನು ಜೊತೆಗೆ
ದಾಟುವ ಮೊದಲೇ ಈ ದಿನ
ಬದಲಾಯಿತೆ ಋತುಮಾನ
||ಮನದ ಹವಮಾನ
ಇಂದೇತಕೊ ಅನುಮಾನ
ಮರೆಮಾಚಿಯೆ ಬರೆದಂತ ಕವನ
ಹಾಡುವ ಮೊದಲೇ ಈ ದಿನ
ಬದಲಾಯಿತೆ ಋತುಮಾನ||
ಸರಿವ ಅಲೆಗಳಲಿ ಮಿಂಚಿ
ಅತಿ ದೂರ ಹೋದ ದೋಣಿಯೆ
ನೆನಪಾಗಿ ಏತಕೆ ಸೆಳೆವೆ
ಎದೆಯ ಕುಲುಮೆಯಲಿ ಬೆಂದು
ತುದಿ ಬಾಯಿಗೆ ಬಂದಂತ ನುಡಿಯ
ಆಡುವ ಮೊದಲೇ ಈ ದಿನ
ಬದಲಾಯಿತೆ ಋತುಮಾನ
||ಮನದ ಹವಮಾನ
ಇಂದೇತಕೊ ಅನುಮಾನ
ನಿನಗಾಗಿಯೆ ತಂದಂತ ವಚನ
ನೀಡುವ ಮೊದಲೇ ಈ ದಿನ
ಬದಲಾಯಿತೆ ಋತುಮಾನ||