Baa Maleye Baa (Club Mix) Lyrics

in Accident

Video:

LYRIC

-
ಬಾ ಮಳೆಯೇ ಬಾ
ಅಷ್ಟು ಬಿರುಸಾಗಿ ಬಾರದಿರು
ನನ್ನ ನಲ್ಲೆ ಬರಲಾಗದಂತೆ
ಅವಳಿಲ್ಲಿ ಬಂದೊಡನೆ
ಬಿಡದೆ ಬಿರುಸಾಗಿ ಸುರಿ
ಹಿಂತಿರುಗಿ ಹೋಗದಂತೆ
ಹಿಂತಿರುಗಿ ಹೋಗದಂತೆ
ಬಿಡದೆ ಬಿರುಸಾಗಿ ಸುರಿ
 
||ಬಾ ಮಳೆಯೇ ಬಾ||
||ಬಾ ಮಳೆಯೇ ಬಾ||
 
ಓಡು ಕಾಲವೇ ಓಡು
ಬೇಗ ಕವಿಯಲಿ ಇರುಳು
ಓಡು ಕಾಲವೇ ಓಡು
ಬೇಗ ಕವಿಯಲಿ ಇರುಳು
ಕಾದಿಹಳು ಅಭಿಸಾರಿಕೆ
ಅವಳಿಲ್ಲಿ ಬಂದೊಡನೆ
ನಿಲ್ಲು ಕಾಲವೇ ನಿಲ್ಲು
ನನ್ನ ತೆಕ್ಕೆ ಸಡಿಲಾಗದಂತೆ
 
||ಬಾ ಮಳೆಯೇ ಬಾ
ಅಷ್ಟು ಬಿರುಸಾಗಿ ಬಾರದಿರು
ನನ್ನ ನಲ್ಲೆ ಬರಲಾಗದಂತೆ||

ಬೀರು ದೀಪವೇ ಬೀರು
ನಿನ್ನ ಹೊಂಬೆಳಕಲ್ಲಿ
ಬೀರು ದೀಪವೇ ಬೀರು
ನಿನ್ನ ಹೊಂಬೆಳಕಲ್ಲಿ
ನೋಡುವೆನು ನಲ್ಲೆ ರೂಪ
ಹಾರು ಬೇಗನೆ ಹಾರು
ಶೃಂಗಾರ ಛಾಯೆಯಲ್ಲಿ
ನಾಚಿ ನೀರಾಗದಂತೆ
 
||ಬಾ ಮಳೆಯೇ ಬಾ||
 
|| ಬಾ ಮಳೆಯೇ ಬಾ
ಅಷ್ಟು ಬಿರುಸಾಗಿ ಬಾರದಿರು
ನನ್ನ ನಲ್ಲೆ ಬರಲಾಗದಂತೆ
ಅವಳಿಲ್ಲಿ ಬಂದೊಡನೆ
ಬಿಡದೆ ಬಿರುಸಾಗಿ ಸುರಿ
ಹಿಂತಿರುಗಿ ಹೋಗದಂತೆ
ಹಿಂತಿರುಗಿ ಹೋಗದಂತೆ
ಬಿಡದೆ ಬಿರುಸಾಗಿ ಸುರಿ||

Baa Maleye Baa (Club Mix) song lyrics from Kannada Movie Accident starring Ramesh Aravind, Rekha, Pooja Gandhi, Lyrics penned by B R Lakshman Rao Sung by Sonu Nigam, Music Composed by Ricky Kej, film is Directed by Ramesh Aravind and film is released on 2008