Preethi Swapna Lyrics

in Aathanka

Video:

LYRIC

ತ ರಾ ರ. . ತ ರಾ ರ. .
 
ಪ್ರೀತಿ ಸ್ವಪ್ನ ಸುಂದರ (ತ ರಾ ರ. .)
ಆಸೆ ಹಸಿರ ಹಂದರ (ತ ರಾ ರ. .)
ಮನಸು ಮನಸು ಕೂಡಿ ಸ್ನೇಹ ಸಾಗರ
ಹದಯ ಹೃದಯ ಸೇರಿ ಒಲವಿನಾಗರ
ಬಾಳಿನಂಬರಾ.. ತುಂಬ ಚಂದಿರ
ಹೊಳೆದು ಬೆಳಗುತಾ..ಪ್ರೇಮದಂಕುರ
 
ಪ್ರೀತಿ ಸ್ವಪ್ನ ಸುಂದರ (ತ ರಾ ರ. .)
ಆಸೆ ಹಸಿರ ಹಂದರ (ತ ರಾ ರ. .)
ಮನಸು ಮನಸು ಕೂಡಿ ಸ್ನೇಹ ಸಾಗರ
ಹದಯ ಹೃದಯ ಸೇರಿ ಒಲವಿನಾಗರ
ಬಾಳಿನಂಬರಾ.. ತುಂಬ ಚಂದಿರ
ಹೊಳೆದು ಬೆಳಗುತಾ..ಪ್ರೇಮದಂಕುರ
 
ರಾಗ ನಿನ್ನದು... ತಾನ ನಿನ್ನದು....
ನನ್ನ ಹಾಡಿಗೆ ಭಾವ ನಿನ್ನದು... ಜೀವ ನಿನ್ನದು...
ಮಾತು ನಿನ್ನದೇ... ಮೌನ ನಿನ್ನದೇ.....
ನಿನ್ನ ಬಿಟ್ಟರೆ ಬೇರೆ ಏನಿದೆ... ಎಲ್ಲಾ ನಿನ್ನದೇ...
ಸಂಗಾತಿಯೇ ನೀ ಚಂದಿರ ಈ ಬಾಳಿಗೆ!
 
|| ಪ್ರೀತಿ ಸ್ವಪ್ನ ಸುಂದರ (ತ ರಾ ರ. .)
ಆಸೆ ಹಸಿರ ಹಂದರ (ತ ರಾ ರ. .)
ಮನಸು ಮನಸು ಕೂಡಿ ಸ್ನೇಹ ಸಾಗರ
ಹದಯ ಹೃದಯ ಸೇರಿ ಒಲವಿನಾಗರ
ಕೋಟಿ ತೊಂದರೆ. . ದಾಟಿ ಬಂದರೆ
ಒಲುಮೆ ತೋರಿದ ಸ್ವರ್ಗ ಈ ಧರೆ ||
 
ಆಸೆ ನಿನ್ನದು ಕನಸು ನಿನ್ನದು
ನನ್ನ ಬಾಳಿನ ಹಾದಿ ನಿನ್ನದು ಸ್ಪೂರ್ತಿ ನಿನ್ನದು
ಭಾವ ನಿನ್ನದೇ ಬಂಧ ನಿನ್ನದೇ
ನನ್ನ ನಲಿವಿನ ಲಾಸ್ಯ ನಿನ್ನದು...ಭಾಷ್ಯ ನಿನ್ನದು
ಸಂಗಾತಿಯೇ ನೀ ಚಂದಿರ ನನ್ನ ಬಾಳಿಗೆ!
 
|| ಪ್ರೀತಿ ಸ್ವಪ್ನ ಸುಂದರ (ತ ರಾ ರ. .)
ಆಸೆ ಹಸಿರ ಹಂದರ (ತ ರಾ ರ. .)
ಮನಸು ಮನಸು ಕೂಡಿ ಸ್ನೇಹ ಸಾಗರ
ಹದಯ ಹೃದಯ ಸೇರಿ ಒಲವಿನಾಗರ
ಅಂತರಾಳದ ಒಸಗೆ ನಡೆದರೆ
ಅಂಕೆ ಮೀರಿದ ಒಲವಿನಾತೊರೆ ||

Preethi Swapna song lyrics from Kannada Movie Aathanka starring Ananthnag, Vinaya Prasad, Anjana, Lyrics penned by Doddarange Gowda Sung by S Janaki, Music Composed by Hamsalekha, film is Directed by Om Saiprakash and film is released on 1993