Yaaru Nanna Kelorilla Lyrics

in Aapadbandhava

Video:

LYRIC

ಯಾರು ನನ್ನ ಕೇಳೋರಿಲ್ಲ
ನನ್ನೋರಿಲ್ಲ ಅನ್ನೋರಿಲ್ಲ
ಯಾರು ನನಗೆ ಹೇಳೋರಿಲ್ಲ
ಕೇಳೋರಿಲ್ಲ ಹೇಳೋರಿಲ್ಲ
ಯಾರಿಗೂ ನಾನು ಹೆದರೋನಲ್ಲ
ಸ್ನೇಹವನ್ನು ಮರೆಯೋನಲ್ಲ
ನನ್ನ ಮನಸ್ಸುಅರಿತವರಿಲ್ಲ
||ಯಾರು ನನ್ನ ಕೇಳೋರಿಲ್ಲ
ನನ್ನೋರಿಲ್ಲ ಅನ್ನೋರಿಲ್ಲ||

ರಸ್ತೆಯಲ್ಲಿ ಅವಸರ ಬಾಳಿನಲ್ಲು ಅವಸರ
ತಾಳ್ಮೆಯಿಲ್ಲ ನೋಡಿ ಯಾರಿಗೂ..
ಅಡ್ಡದಾರಿ ಹಿಡಿದರೆ  ಆಕ್ಸಿಡೆಂಟ್ ಥರಥರ
ಮರೆಯದಿರಿ ನೀವೆಂದಿಗೂ.. ಹಾಂ..
ಪಾಪವನ್ನು ತೊಳೆಯಲು ಮನುಜ ಗುಡಿಯ ಕಟ್ಟಿದ
ಗುಡಿಯ ಎದುರೆ ಪಾಪ ಮಾಡಿದ
ದಾಹವನ್ನು ತಣಿಸಲು ಕೆರೆಗಳನ್ನು ಕಟ್ಟಿದ
ಮಧುವಿನಿಂದ ದಾಹ ತಣಿಸಿದ
ಮನಸ್ಸಾಕ್ಷಿಗೆ ಹೆದರಿ ನಡೆಯಬೇಕು ಎಲ್ಲ
ಆದರಿಲ್ಲಿ ತಲೆಕೆಳಗೆಲ್ಲ ಆಹ ಹ್ಮ್‌ ಹ್ಮ್‌ ಹೇ ಹೇ

|||ಯಾರು ನನ್ನ ಕೇಳೋರಿಲ್ಲ ...
ನನ್ನೋರಿಲ್ಲ ಅನ್ನೋರಿಲ್ಲ..||
 
ನೀತಿ ಇದೆ ಬಲಗಡೆ ನ್ಯಾಯ ಇದೆ ಎಡಗಡೆ
ಮದ್ಯದಲ್ಲಿ ಲಂಚ ಮೆರೆದಿದೆ
ಅನ್ನ ಇಲ್ಲಿ ಚೆಲ್ಲದೆ ಹಸಿವು ಅಲ್ಲಿ ಅಳುತಿದೆ
ಇದಕ್ಕೆ ಎಂದೊ ಕೊನೆಯ ಕಾಣದೆ
ಪದವಿಯಿಂದ ಮೆರೆಯುವ
ಸ್ವಾರ್ಥದಿಂದ ನಡೆಯುವ
ದ್ರೋಹಿಗಳಿಗೆ ನಾ ದಾನವ.. ಹಾಂ
ಬಡವ ಸುರಿಸೊ ಕಂಬನಿ  ಒರೆಸುವಾಸೆ ಮನದಲಿ
ಹೃದಯದಲ್ಲಿ ನಾ ಮಾನವ
ನ್ಯಾಯ ನೀತಿಗಾಗಿಯೇ ನಿಲ್ಲ ಬಲ್ಲೆ ನಿತ್ಯ
ಕಷ್ಟದಲ್ಲಿ ಆಪಧ್ಬಾಂಧವ ..
ಬಾಂಧವ.. ಬಾಂಧವ.. ಬಾಂಧವ..

||ಯಾರು ನನ್ನ ಕೇಳೋರಿಲ್ಲ
ನನ್ನೋರಿಲ್ಲ ಅನ್ನೋರಿಲ್ಲ
ಯಾರು ನನಗೆ ಹೇಳೋರಿಲ್ಲ
ಕೇಳೋರಿಲ್ಲ ಹೇಳೋರಿಲ್ಲ
ಯಾರಿಗೂ ನಾನು ಹೆದರೋನಲ್ಲ
ಸ್ನೇಹವನ್ನು ಮರೆಯೋನಲ್ಲ
ನನ್ನ ಮನಸ್ಸುಅರಿತವರಿಲ್ಲ||
ಯಾರು ನನ್ನ ಕೇಳೋರಿಲ್ಲ
 

Yaaru Nanna Kelorilla song lyrics from Kannada Movie Aapadbandhava starring Ambarish, Ambika, Parijatha, Lyrics penned by R N Jayagopal Sung by S P Balasubrahmanyam, Music Composed by Rajan-Nagendra, film is Directed by A T Raghu and film is released on 1987