-
ಯಾರಿಗೆ ಸಾಲುತ್ತೆ ಸಂಬಳ ಸಂಬಳ
ಸಾಕು ಸಾಕು ಅಂದೋನೆ ಸುಖಿ
ಬೇಕು ಬೇಕು ಅಂದೋನೆ ದುಃಖಿ
ಸಾಲದಲ್ಲಿರೊ ಈ ದೇಶದಲ್ಲಿ
ನಷ್ಟದಲ್ಲಿ ಸರ್ಕಾರದಲ್ಲಿ
ಹೆಪ್ಪುಗಟ್ಟಿರೊ ಉದ್ಯೋಗದಲ್ಲಿ
ಈ ಅಡಕಾಸಿ ಬಿಕನಾಸಿ ಪರದೇಸಿ ಸಂಬಳ
||ಯಾರಿಗೆ ಸಾಲುತ್ತೆ ಸಂಬಳ ಸಂಬಳ
ಸಾಕು ಸಾಕು ಅಂದೋನೆ ಸುಖಿ
ಬೇಕು ಬೇಕು ಅಂದೋನೆ ದುಃಖಿ||
ದಿನದ ವಾರದ ಗ್ರಹಬಲಗಳ ನಂಬಿಕೊಂಡು
ಕಾಲನೂಕೋರಿರುವಲ್ಲಿ ಬಾಳು ಭ್ರಮಿಸೋರಿರುವಲ್ಲಿ
ಅಕ್ಕ ಶಾಲೆಯಲ್ಲಿ ನಿಂತುಕೊಂಡು
ಊಟಮಾಡೊ ಶೋಕಿಯಲ್ಲಿ ದುಂದು ಮಾಡೋರಿರುವಲ್ಲಿ
ಮೂರು ಎಲೆಯ ಜೂಜಾಟದಲ್ಲಿ
ಚೆಂಡು ದಾಂಡು ನೋಡಾಟದಲ್ಲಿ
ಬಾಳ ಹುಡುಕುವ ಜೂಜಾಟದಲ್ಲಿ
ಈ ಅಡಕಾಸಿ ಬಿಕನಾಸಿ ಪರದೇಸಿ ಸಂಬಳ
||ಯಾರಿಗೆ ಸಾಲುತ್ತೆ ಸಂಬಳ ಸಂಬಳ
ಸಾಕು ಸಾಕು ಅಂದೋನೆ ಸುಖಿ
ಬೇಕು ಬೇಕು ಅಂದೋನೆ ದುಃಖಿ||
ಲಾಟರಿ ಬರುವ ಮಹಾದಾಸೆಯ ಇಟ್ಟುಕೊಂಡೆ
ಒಲೆಹೂಡೋರಿರುವಾಗ ಹಸಿದೆ ಇರೋರಿರುವಾಗ
ಬುದ್ದಿಯ ಮಾರುತ ಅಭಿಮಾನವ ಕೊಂಡುಕೊಂಡ
ಕೈನೀಡಿ ಕೇಳಲಾಗದ ತಿರುಕೇಶ್ವರ ಕುಲವಿರುವಾಗ
ವ್ಯವಸಾಯ ಮರೆತವರಿಗೆ ಅಡಿಪಾಯ ಇಲ್ಲದವರಿಗೆ
ಉಳಿತಾಯ ತಿಳಿಯದವರಿಗೆ
ಈ ಅಡಕಾಸಿ ಬಿಕನಾಸಿ ಪರದೇಸಿ ಸಂಬಳ
ಯಾರಿಗೆ ಸಾಲುತ್ತೆ ಸಂಬಳ ಸಂಬಳ
ಸಾಕು ಸಾಕು ಅಂದೋನೆ ಸುಖಿ
ಬೇಕು ಬೇಕು ಅಂದೋನೆ ದುಃಖಿ
ಸಾಲದಲ್ಲಿರೊ ಈ ದೇಶದಲ್ಲಿ
ನಷ್ಟದಲ್ಲಿ ಸರ್ಕಾರದಲ್ಲಿ
ಹೆಪ್ಪುಗಟ್ಟಿರೊ ಉದ್ಯೋಗದಲ್ಲಿ
ಈ ಅಡಕಾಸಿ ಬಿಕನಾಸಿ ಪರದೇಸಿ ಸಂಬಳ
||ಯಾರಿಗೆ ಸಾಲುತ್ತೆ ಸಂಬಳ ||
-
ಯಾರಿಗೆ ಸಾಲುತ್ತೆ ಸಂಬಳ ಸಂಬಳ
ಸಾಕು ಸಾಕು ಅಂದೋನೆ ಸುಖಿ
ಬೇಕು ಬೇಕು ಅಂದೋನೆ ದುಃಖಿ
ಸಾಲದಲ್ಲಿರೊ ಈ ದೇಶದಲ್ಲಿ
ನಷ್ಟದಲ್ಲಿ ಸರ್ಕಾರದಲ್ಲಿ
ಹೆಪ್ಪುಗಟ್ಟಿರೊ ಉದ್ಯೋಗದಲ್ಲಿ
ಈ ಅಡಕಾಸಿ ಬಿಕನಾಸಿ ಪರದೇಸಿ ಸಂಬಳ
||ಯಾರಿಗೆ ಸಾಲುತ್ತೆ ಸಂಬಳ ಸಂಬಳ
ಸಾಕು ಸಾಕು ಅಂದೋನೆ ಸುಖಿ
ಬೇಕು ಬೇಕು ಅಂದೋನೆ ದುಃಖಿ||
ದಿನದ ವಾರದ ಗ್ರಹಬಲಗಳ ನಂಬಿಕೊಂಡು
ಕಾಲನೂಕೋರಿರುವಲ್ಲಿ ಬಾಳು ಭ್ರಮಿಸೋರಿರುವಲ್ಲಿ
ಅಕ್ಕ ಶಾಲೆಯಲ್ಲಿ ನಿಂತುಕೊಂಡು
ಊಟಮಾಡೊ ಶೋಕಿಯಲ್ಲಿ ದುಂದು ಮಾಡೋರಿರುವಲ್ಲಿ
ಮೂರು ಎಲೆಯ ಜೂಜಾಟದಲ್ಲಿ
ಚೆಂಡು ದಾಂಡು ನೋಡಾಟದಲ್ಲಿ
ಬಾಳ ಹುಡುಕುವ ಜೂಜಾಟದಲ್ಲಿ
ಈ ಅಡಕಾಸಿ ಬಿಕನಾಸಿ ಪರದೇಸಿ ಸಂಬಳ
||ಯಾರಿಗೆ ಸಾಲುತ್ತೆ ಸಂಬಳ ಸಂಬಳ
ಸಾಕು ಸಾಕು ಅಂದೋನೆ ಸುಖಿ
ಬೇಕು ಬೇಕು ಅಂದೋನೆ ದುಃಖಿ||
ಲಾಟರಿ ಬರುವ ಮಹಾದಾಸೆಯ ಇಟ್ಟುಕೊಂಡೆ
ಒಲೆಹೂಡೋರಿರುವಾಗ ಹಸಿದೆ ಇರೋರಿರುವಾಗ
ಬುದ್ದಿಯ ಮಾರುತ ಅಭಿಮಾನವ ಕೊಂಡುಕೊಂಡ
ಕೈನೀಡಿ ಕೇಳಲಾಗದ ತಿರುಕೇಶ್ವರ ಕುಲವಿರುವಾಗ
ವ್ಯವಸಾಯ ಮರೆತವರಿಗೆ ಅಡಿಪಾಯ ಇಲ್ಲದವರಿಗೆ
ಉಳಿತಾಯ ತಿಳಿಯದವರಿಗೆ
ಈ ಅಡಕಾಸಿ ಬಿಕನಾಸಿ ಪರದೇಸಿ ಸಂಬಳ
ಯಾರಿಗೆ ಸಾಲುತ್ತೆ ಸಂಬಳ ಸಂಬಳ
ಸಾಕು ಸಾಕು ಅಂದೋನೆ ಸುಖಿ
ಬೇಕು ಬೇಕು ಅಂದೋನೆ ದುಃಖಿ
ಸಾಲದಲ್ಲಿರೊ ಈ ದೇಶದಲ್ಲಿ
ನಷ್ಟದಲ್ಲಿ ಸರ್ಕಾರದಲ್ಲಿ
ಹೆಪ್ಪುಗಟ್ಟಿರೊ ಉದ್ಯೋಗದಲ್ಲಿ
ಈ ಅಡಕಾಸಿ ಬಿಕನಾಸಿ ಪರದೇಸಿ ಸಂಬಳ
||ಯಾರಿಗೆ ಸಾಲುತ್ತೆ ಸಂಬಳ ||
Yaarige Saalutthe Sambala song lyrics from Kannada Movie Yarige Salutthe Sambala starring Shashikumar, Suhasini, Ananthnag, Lyrics penned by Hamsalekha Sung by Hemanth, Rajesh, Ramesh, Music Composed by Hamsalekha, film is Directed by M S Rajashekar and film is released on 2000