-
ಹಗಲು ಇರುಳು ನಿನ್ನ ನೆನಪು ನನ್ನ ಹೃದಯ ಕಾಡಿದೆ
ನಿನ್ನ ರೂಪು ಕಣ್ಣ ತುಂಬಿ ಸ್ವಪ್ನ ಸುಮವೆ ಅರಳಿದೆ
ಸ್ನೇಹ ಕಂಡ ಜೀವ ಭಾವ ಮೋಹ ದಾಹ ಮೆರೆದಿದೆ
ಮನಸ್ಸು ಹಿಗ್ಗಿ ಆಸೆ ಹೊನಲು ಬಾಳ ತುಂಬ ಹರಿದಿದೆ
ಹಗಲು ಇರುಳು ನಿನ್ನ ನೆನಪು ನನ್ನ ಹೃದಯ ಕಾಡಿದೆ
ನಿನ್ನ ಒಂದು ಮುಗುಳುನಗೆಗೆ ಚಂದ್ರಕಾಂತಿ ಹೊಳಪು
ನಿನ್ನ ನಡೆಗೆ ಲಾಸ್ಯ ಒನಪು ಉಲಿವ ಕೊರಳು ಇಂಪು
ನಿನ್ನ ನೋಟ ಎದೆಯ ತಾಕಿ ಪ್ರಣಯ ಪುಳಕ ಸೊಂಪು
ನಿನ್ನ ಮೆಚ್ಚಿ ನಿನ್ನ ನೆಚ್ಚಿ ಒಲಿದ ಬದುಕು ತಂಪು
||ಹಗಲು ಇರುಳು ನಿನ್ನ ನೆನಪು ನನ್ನ ಹೃದಯ ಕಾಡಿದೆ||
ನಿನ್ನ ಕಂಡ ಕ್ಷಣವ ಒಲಿದು ರಮ್ಯರಾಗ ಸೆಳೆದು
ಪ್ರೀತಿ ಬಳ್ಳಿ ಚಿಗುರಿ ಚಿಗುರಿ ವೃಕ್ಷವಾಯ್ತು ಬೆಳೆದು
ನಲ್ಮೆ ತೋಟ ಕೈಯ್ಯ ಬೀಸಿ ಪ್ರೇಮಗಾಳಿ ಸುಳಿದು
ಎಲ್ಲಿ ನೀನೊ ಅಲ್ಲಿ ನಾನು ಒಲುಮೆ ತೂಗಿ ತೊನೆದು
||ಹಗಲು ಇರುಳು ನಿನ್ನ ನೆನಪು ನನ್ನ ಹೃದಯ ಕಾಡಿದೆ
ನಿನ್ನ ರೂಪು ಕಣ್ಣ ತುಂಬಿ ಸ್ವಪ್ನ ಸುಮವೆ ಅರಳಿದೆ
ಸ್ನೇಹ ಕಂಡ ಜೀವ ಭಾವ ಮೋಹ ದಾಹ ಮೆರೆದಿದೆ
ಮನಸ್ಸು ಹಿಗ್ಗಿ ಆಸೆ ಹೊನಲು ಬಾಳ ತುಂಬ ಹರಿದಿದೆ||