Gari Bicchi Mari Hakki Lyrics

in Yaana

LYRIC

ಗರಿ ಬಿಚ್ಚಿ ಮರಿ ಹಕ್ಕಿ
ಅದೆಲ್ಲೋ ಹಾರಿ ಹೊಂಟಿವೆ
ಮನ ಬಿಚ್ಚಿ ಖುಷಿ ಹೆಚ್ಚಿ
ನಿಧಾನ ಯಾನ ಹೊರಟಾವೆ
 
ಗರಿ ಬಿಚ್ಚಿ ಮರಿ ಹಕ್ಕಿ
ಅದೆಲ್ಲೋ ಹಾರಿ ಹೊಂಟಿವೆ
ಮನ ಬಿಚ್ಚಿ ಖುಷಿ ಹೆಚ್ಚಿ
ನಿಧಾನ ಯಾನ ಹೊರಟಾವೆ
 
ಗೂಡಿಂದ ಹೊರಬಂದು
ಇಡೀ ಭೂಮಿನೆ ತಮದೆಂದು
ಆಹ ಸ್ವಾತಂತ್ರ್ಯ ಸವಿಯೋಕೆ
ಜೊತೆಯಾಗಿ ಸಾಗಿವೆ
 
ಅರೆ ಮುಂದೊಂದು ಗುರಿ ಇಲ್ಲ
ಇವರ್‌ ಹಿಂದೊಬ್ಬ ಗುರು ಇಲ್ಲ
ಅದು ಎಲ್ಲಿಗೆ ಸೇರುವವೊ
ತಿಳಿಸೋದು ಕಾಲವೇ
 
ಈ ಅನುಭವ ಕಲಿಸುವ
ವಿಷಯವೆ ಪಾಠ ನಿಂಗೆ
ಕನಸಿನ ಕುದುರೆಯ ಬೆನ್ನೇರಿ
ಹಾರು ಬಾನಿನೆಡೆಗೆ
 
ಪ್ರತಿಕ್ಷಣ ಹೊಸತನ
ಹುಡುಕುತ ಸಾಗು ಸಾಗು
ಜನರನು ಜಗವನು
ದಾಟುತ ಮುಂದೆ ಹೋಗು
 
ಮನಸಾರೆ ಆದರು ಅಲೆಮಾರಿ
ಕೈಯ ಬೀಸುತಿದೆ ಹೊಸ ದಾರಿ
ನಿಮಗೆಲ್ಲೋ ಸಿಕ್ಕರೆ ದಯತೋರಿ
ಕಿಡಿನೋಟ ಬೀರದಿರಿ
 
ಗೋಡೆಗಳ ದಾಟಿದರೆ
ದಕ್ಕುವುದು ಜೀವನ ಪಾಠ
ಬಿಟ್ಟುಬಿಡಿ ರೆಕ್ಕೆಗಳ
ಕಟ್ಟದಿರಿ ಹೋ
 
||ಗರಿ ಬಿಚ್ಚಿ ಮರಿ ಹಕ್ಕಿ
ಅದೆಲ್ಲೋ ಹಾರಿ ಹೊಂಟಿವೆ
ಮನ ಬಿಚ್ಚಿ ಖುಷಿ ಹೆಚ್ಚಿ
ನಿಧಾನ ಯಾನ ಹೊರಟಾವೆ||
 
||ಗರಿ ಬಿಚ್ಚಿ ಮರಿ ಹಕ್ಕಿ
ಅದೆಲ್ಲೋ ಹಾರಿ ಹೊಂಟಿವೆ
ಮನ ಬಿಚ್ಚಿ ಖುಷಿ ಹೆಚ್ಚಿ
ನಿಧಾನ ಯಾನ ಹೊರಟಾವೆ||
 
ಗೂಡಿಂದ ಹೊರಬಂದು
ಇಡೀ ಭೂಮಿನೆ ತಮದೆಂದು
ಆಹ ಸ್ವಾತಂತ್ರ್ಯ ಸವಿಯೋಕೆ
ಜೊತೆಯಾಗಿ ಸಾಗಿವೆ
 
ಅರೆ ಮುಂದೊಂದು ಗುರಿ ಇಲ್ಲ
ಇವರ್‌ ಹಿಂದೊಬ್ಬ ಗುರು ಇಲ್ಲ
ಅದು ಎಲ್ಲಿಗೆ ಸೇರುವವೊ
ತಿಳಿಸೋದು ಕಾಲವೇ

Gari Bicchi Mari Hakki song lyrics from Kannada Movie Yaana starring Vaibhavi, Vainidhi, Vaisiri, Lyrics penned by Kaviraj Sung by Raghu Dixit, Music Composed by Joshua Sridhar, film is Directed by Vijayalakshmi Singh and film is released on 2019