ಅತಿ ಚಂದದ ಹೂ ಗೊಂಚಲು
ಈ ಕಿಟಕಿಯಾಚೆ ಕಂಡ ಹಾಗಿದೆ
ಮಳೆ ನೀರಿನಲ್ಲಿ ಮಿಂದ ಹಾಗಿದೆ
ಅನುರಾಗದ ಕೋಲ್ಮಿಂಚನು
ನನ್ನೆದೆಗೆ ನಾನೇ ತಂದ ಹಾಗಿದೆ
ಬೆಳಕಲ್ಲಿ ಜೀವ ಬಂದ ಹಾಗಿದೆ
ವಿವರಿಸಲು ಬರದ
ಚಡಪಡಿಕೆಯೊಂದು
ಮೈಮನಸೆಲ್ಲ ಆವರಿಸಿದೆ
ಬೆರಳೆಣಿಕೆಯಲ್ಲಿ ಮಿಡಿತಗಳ ಎಣಿಸಿ
ತುಸು ನಗೆಯು ತುಟಿಗೆ ಆಗಮಿಸಿದೆ
||ಅತಿ ಚಂದದ ಹೂ ಗೊಂಚಲು
ಈ ಕಿಟಕಿಯಾಚೆ ಕಂಡ ಹಾಗಿದೆ
ಮಳೆ ನೀರಿನಲ್ಲಿ ಮಿಂದ ಹಾಗಿದೆ||
ಇರಬಹುದು ನನ್ನೊಳಗೊಂದು
ಪ್ರೀತಿಸುವ ಬಡಪಾಯಿ ಹೃದಯ
ಕನ್ನಡಿಯ ಮುದ್ದಾಡುತಲಿ
ಮರುಜೀವ ಪಡೆದಿಹುದೆ ಹರೆಯ
ನನಗರಿವೆ ಬಾರದೆ ಮಿನುಗಿವೆ ಕಣ್ಣುಗಳು
ಸ್ವಪ್ನದಲಿ ಕಾದಿವೆ ಕಾಣದ ಬಣ್ಣಗಳು
ಈ ರೀತಿ ಈ ಹಿಂದೆ ಆದ ಹಾಗಿದೆ
||ಅತಿ ಚೆಂದದ ಹೂ ಗೊಂಚಲು
ಬದಿ ದಾರಿಯಲ್ಲಿ ಕಂಡ ಹಾಗಿದೆ
ಮಳೆ ನೀರಿನಲ್ಲಿ ಮಿಂದ ಹಾಗಿದೆ||
ಒಮ್ಮೊಮ್ಮೆ ನನಗನಿಸುವುದು
ಈ ಬದುಕು ಬರೀ ಒಂದು ಭ್ರಮೆಯೇ
ಇನ್ನೊಮ್ಮೆ ನಾ ಯೋಚಿಸುವೆ
ಒಲವಲ್ಲಿ ಮುಳುಗೋದು ಸರಿಯೆ
ಭಾವನೆಗೆ ಹಳಿಗಳು
ಎರಡು ಇರಬಹುದೇ
ಗುರಿ ಇರದೆ ಹೃದಯ
ಪಯಣ ಹೊರಟಿಹುದೇ
ಈ ಹಾಡು ನಾ
ಎಲ್ಲೋ ಹಾಡಿದಂತಿದೆ
||ಅತಿ ಚಂದದ ಹೂ ಗೊಂಚಲು
ಈ ಕಿಟಕಿಯಾಚೆ ಕಂಡ ಹಾಗಿದೆ
ಮಳೆ ನೀರಿನಲ್ಲಿ ಮಿಂದ ಹಾಗಿದೆ||
ಅತಿ ಚಂದದ ಹೂ ಗೊಂಚಲು
ಈ ಕಿಟಕಿಯಾಚೆ ಕಂಡ ಹಾಗಿದೆ
ಮಳೆ ನೀರಿನಲ್ಲಿ ಮಿಂದ ಹಾಗಿದೆ
ಅನುರಾಗದ ಕೋಲ್ಮಿಂಚನು
ನನ್ನೆದೆಗೆ ನಾನೇ ತಂದ ಹಾಗಿದೆ
ಬೆಳಕಲ್ಲಿ ಜೀವ ಬಂದ ಹಾಗಿದೆ
ವಿವರಿಸಲು ಬರದ
ಚಡಪಡಿಕೆಯೊಂದು
ಮೈಮನಸೆಲ್ಲ ಆವರಿಸಿದೆ
ಬೆರಳೆಣಿಕೆಯಲ್ಲಿ ಮಿಡಿತಗಳ ಎಣಿಸಿ
ತುಸು ನಗೆಯು ತುಟಿಗೆ ಆಗಮಿಸಿದೆ
||ಅತಿ ಚಂದದ ಹೂ ಗೊಂಚಲು
ಈ ಕಿಟಕಿಯಾಚೆ ಕಂಡ ಹಾಗಿದೆ
ಮಳೆ ನೀರಿನಲ್ಲಿ ಮಿಂದ ಹಾಗಿದೆ||
ಇರಬಹುದು ನನ್ನೊಳಗೊಂದು
ಪ್ರೀತಿಸುವ ಬಡಪಾಯಿ ಹೃದಯ
ಕನ್ನಡಿಯ ಮುದ್ದಾಡುತಲಿ
ಮರುಜೀವ ಪಡೆದಿಹುದೆ ಹರೆಯ
ನನಗರಿವೆ ಬಾರದೆ ಮಿನುಗಿವೆ ಕಣ್ಣುಗಳು
ಸ್ವಪ್ನದಲಿ ಕಾದಿವೆ ಕಾಣದ ಬಣ್ಣಗಳು
ಈ ರೀತಿ ಈ ಹಿಂದೆ ಆದ ಹಾಗಿದೆ
||ಅತಿ ಚೆಂದದ ಹೂ ಗೊಂಚಲು
ಬದಿ ದಾರಿಯಲ್ಲಿ ಕಂಡ ಹಾಗಿದೆ
ಮಳೆ ನೀರಿನಲ್ಲಿ ಮಿಂದ ಹಾಗಿದೆ||
ಒಮ್ಮೊಮ್ಮೆ ನನಗನಿಸುವುದು
ಈ ಬದುಕು ಬರೀ ಒಂದು ಭ್ರಮೆಯೇ
ಇನ್ನೊಮ್ಮೆ ನಾ ಯೋಚಿಸುವೆ
ಒಲವಲ್ಲಿ ಮುಳುಗೋದು ಸರಿಯೆ
ಭಾವನೆಗೆ ಹಳಿಗಳು
ಎರಡು ಇರಬಹುದೇ
ಗುರಿ ಇರದೆ ಹೃದಯ
ಪಯಣ ಹೊರಟಿಹುದೇ
ಈ ಹಾಡು ನಾ
ಎಲ್ಲೋ ಹಾಡಿದಂತಿದೆ
||ಅತಿ ಚಂದದ ಹೂ ಗೊಂಚಲು
ಈ ಕಿಟಕಿಯಾಚೆ ಕಂಡ ಹಾಗಿದೆ
ಮಳೆ ನೀರಿನಲ್ಲಿ ಮಿಂದ ಹಾಗಿದೆ||
Ati Chendada song lyrics from Kannada Movie Window Seat starring Nirup Bhandari , Sanjana Anand, Amrutha Iyengar, Lyrics penned by Yogaraj Bhat Sung by Vijay Prakash, Music Composed by Arjun Janya, film is Directed by Sheetal Shettyand film is released on 2022