ಬೆಂಕಿಯನು ಹಣ್ಣೆಂದು ಭ್ರಮಿಸಿ
ಬಂದಾ ಪತಂಗದಂತೆ
ಸಿರಿಯನ್ನು ಸುಖವೆಂದು
ನಂಬಿ ಬಂದೆಯಾ ವನಿತೆ..
ಕಲ್ಲಿಂದ ಹೂವು ಮೂಡುವುದು ಉಂಟೆ..
ಮುಳ್ಳಿಂದ ನೋವು ಕಾಣಿಸದೆ..ಉಂಟೆ..
ಬೆಂಕಿಯಲಿ ತಂಪಿದೆ ಎಂಬ
ಮರುಳಾಟವೇಕೆ..ಮರುಳಾಟವೇಕೆ..
|| ಕಲ್ಲಿಂದ ಹೂವು ಮೂಡುವುದು ಉಂಟೆ..||
ನೀನಂದು ಬಯಸಿದ ಭಾಗ್ಯ ಬೇಕಿಲ್ಲವೇನು
ದೂರಕ್ಕೆ ಬೆಟ್ಟ ನುಣುಪು ನೀ ಬಲ್ಲೆಯೇನು
ನೂರೆಂಟು ಆಸೆಯ ಬಲೆಯ ಮೀನಾದೆ ನೀನು
ಸುಖಶಾಂತಿ ಎಂಬ ಮಾತು
ಕನಸಾಯಿತೇನು...ಕನಸಾಯಿತೇನು...
|| ಕಲ್ಲಿಂದ ಹೂವು ಮೂಡುವುದು ಉಂಟೆ..
ಮುಳ್ಳಿಂದ ನೋವು ಕಾಣಿಸದೆ..ಉಂಟೆ…..||
ಇರುಳಲ್ಲಿ ಕಾಣುವನೆಂಬ ಹುಚ್ಚಾಟವೇನು
ನೆರಳನ್ನು ಹಿಡಿಯುವನೆಂಬ ಹುಡುಗಾಟವೇನು
ಮನದಲ್ಲಿ ಮೂಡದ ಶಾಂತಿ ಸಿರಿ ತರುವುದೇನು
ಹಣದಿಂದ ನೆಮ್ಮದಿ ಸುಖವ
ಕೊಳ್ಳುವೆಯಾ ನೀನು...ಕೊಳ್ಳುವೆಯಾ ನೀನು
|| ಕಲ್ಲಿಂದ ಹೂವು ಮೂಡುವುದು ಉಂಟೆ..
ಮುಳ್ಳಿಂದ ನೋವು ಕಾಣಿಸದೆ..ಉಂಟೆ..
ಬೆಂಕಿಯಲಿ ತಂಪಿದೆ ಎಂಬ
ಮರುಳಾಟವೇಕೆ..ಮರುಳಾಟವೇಕೆ..
ಕಲ್ಲಿಂದ ಹೂವು ಮೂಡುವುದು ಉಂಟೆ…..||
ಬೆಂಕಿಯನು ಹಣ್ಣೆಂದು ಭ್ರಮಿಸಿ
ಬಂದಾ ಪತಂಗದಂತೆ
ಸಿರಿಯನ್ನು ಸುಖವೆಂದು
ನಂಬಿ ಬಂದೆಯಾ ವನಿತೆ..
ಕಲ್ಲಿಂದ ಹೂವು ಮೂಡುವುದು ಉಂಟೆ..
ಮುಳ್ಳಿಂದ ನೋವು ಕಾಣಿಸದೆ..ಉಂಟೆ..
ಬೆಂಕಿಯಲಿ ತಂಪಿದೆ ಎಂಬ
ಮರುಳಾಟವೇಕೆ..ಮರುಳಾಟವೇಕೆ..
|| ಕಲ್ಲಿಂದ ಹೂವು ಮೂಡುವುದು ಉಂಟೆ..||
ನೀನಂದು ಬಯಸಿದ ಭಾಗ್ಯ ಬೇಕಿಲ್ಲವೇನು
ದೂರಕ್ಕೆ ಬೆಟ್ಟ ನುಣುಪು ನೀ ಬಲ್ಲೆಯೇನು
ನೂರೆಂಟು ಆಸೆಯ ಬಲೆಯ ಮೀನಾದೆ ನೀನು
ಸುಖಶಾಂತಿ ಎಂಬ ಮಾತು
ಕನಸಾಯಿತೇನು...ಕನಸಾಯಿತೇನು...
|| ಕಲ್ಲಿಂದ ಹೂವು ಮೂಡುವುದು ಉಂಟೆ..
ಮುಳ್ಳಿಂದ ನೋವು ಕಾಣಿಸದೆ..ಉಂಟೆ…..||
ಇರುಳಲ್ಲಿ ಕಾಣುವನೆಂಬ ಹುಚ್ಚಾಟವೇನು
ನೆರಳನ್ನು ಹಿಡಿಯುವನೆಂಬ ಹುಡುಗಾಟವೇನು
ಮನದಲ್ಲಿ ಮೂಡದ ಶಾಂತಿ ಸಿರಿ ತರುವುದೇನು
ಹಣದಿಂದ ನೆಮ್ಮದಿ ಸುಖವ
ಕೊಳ್ಳುವೆಯಾ ನೀನು...ಕೊಳ್ಳುವೆಯಾ ನೀನು
|| ಕಲ್ಲಿಂದ ಹೂವು ಮೂಡುವುದು ಉಂಟೆ..
ಮುಳ್ಳಿಂದ ನೋವು ಕಾಣಿಸದೆ..ಉಂಟೆ..
ಬೆಂಕಿಯಲಿ ತಂಪಿದೆ ಎಂಬ
ಮರುಳಾಟವೇಕೆ..ಮರುಳಾಟವೇಕೆ..
ಕಲ್ಲಿಂದ ಹೂವು ಮೂಡುವುದು ಉಂಟೆ…..||
Kallinda Hoovu song lyrics from Kannada Movie Vijaya Vani starring Srinath, Kalpana, Ashok, Lyrics penned by Chi Udayashankar Sung by S P Balasubrahmanyam, Music Composed by Rajan-Nagendra, film is Directed by N Venkatesh and film is released on 1976