ನನ್ನ ಮಣ್ಣಿದು
ನನ್ನ ಮಣ್ಣಿದು
ನನ್ನ ಮಣ್ಣಿದು
ಕನ್ನಡ ಮಣ್ಣು
ನನ್ನುಸಿರಲ್ಲಿ ಕಂಪಿಸೋ ಮಣ್ಣು
ಧಮನಿ ಧಮನಿಯಲ್ಲಿ
ನರ್ತಿಸೋ ಮಣ್ಣು
ವಿಶ್ವಮಾನವತೆ ಸಾರಿದ ಮಣ್ಣು
ಕನ್ನಡತಿ.. ಈ ಪುಣ್ಯವತಿ..
ನನ್ನಡೆದ ಸೌಭಾಗ್ಯವತಿ…
ನನ್ನ ಮಣ್ಣಿದು
ನನ್ನ ಮಣ್ಣಿದು
ನನ್ನ ಮಣ್ಣಿದು
ಕನ್ನಡ ಮಣ್ಣು
ನನ್ನುಸಿರಲ್ಲಿ ಕಂಪಿಸೋ ಮಣ್ಣು
ಧಮನಿ ಧಮನಿಯಲ್ಲಿ
ನರ್ತಿಸೋ ಮಣ್ಣು
ವಿಶ್ವಮಾನವತೆ ಸಾರಿದ ಮಣ್ಣು
ಕನ್ನಡತಿ.. ಈ ಪುಣ್ಯವತಿ..
ನನ್ನಡೆದ ಸೌಭಾಗ್ಯವತಿ…
ಕನ್ನಡ ಕವಿಗಳ ಸಾಲುಗಳು
ನಿನ್ನ ಕಣ್ಣಿಗೆ ಕಾಡಿಗೆಯು
ಜ್ಞಾನ ಪೀಠದ ಗೌರವವೂ
ತಾಯೆ ನಿನಗೆ ಸಿಂಧೂರವು
ಜನಪದ ಕಲೆಗಳ ಸಿಂಚನವೇ
ಕನ್ನಡಾಂಬೆಯ ಕೈಬಳೆಯು
ಮನುಕುಲ ಮೆಚ್ಚುವ ನಾಟ್ಯಕಲೆ
ಅವಳ ಕಾಲ್ಗಳಿಗೆ ಅರ್ಪುಗೆಯು
ಮಲೆನಾಡ ಹಸಿರಸಿರಿ
ನಿನ್ನ ಒಡಲಿಗೆ ಉಡುಗೆಗಳು
ಶಿಲ್ಪಿಗಳ ಶಿಲ್ಪಕಲೆ
ಮಾತೇ ನಿನಗೆ ಒಡವೆಗಳು
ಕ್ಷಮಿಸುವಾ ಮನುಜನೆ
ಕನ್ನಡ ಮಣ್ಣಲಿ
ಸ್ವರ್ಗವಾ ಕಾಣುವೆ
ನನ್ನಈ ಮಣ್ಣಲಿ
ಪುಣ್ಯದ ಮಣ್ಣಲಿ
ನನ್ನ ಮಣ್ಣಿದು
ನನ್ನ ಮಣ್ಣಿದು
ಹೋ ಸುಂದರ ಅರಣ್ಯಧಾಮಗಳು
ಕನ್ನಡಾಂಬೆಯ ಕೇಶಗಳು
ನೇಗಿಲ ಯೋಗಿಯ ಬೆಳೆಯೆಲ್ಲಾ
ಅವಳ ಮುಡಿಗೆ ಕುಸುಮಗಳು
ಹರಿಯುವ ನದಿಯ ನೀರೆಲ್ಲಾ
ಅವಳ ಎದೆಯ ಅಮೃತವೂ
ಧುಮುಕುವ ಜೋಗದ ಸಿರಿಯೆಲ್ಲಿ
ತುಂಬಿದೆ ನಗೆಯ ನರ್ತನವು
ಈ ನಾಡ ಶ್ರೀಗಂಧ
ಕನ್ನಡಾಂಬೆಯ ಮಾಂಗಲ್ಯ
ಕೋಲಾರ ಕೈವಾರ
ಓಲೆ ಜುಮುಕಿ ಮೂಗುತಿಯು
ಇದ್ದರೆ ಬದುಕು ನೀ
ನನ್ನ ಈ ಮಣ್ಣಲಿ
ಮಡಿದರೆ ಹೆಮ್ಮೆಯೇ
ಕನ್ನಡ ಮಣ್ಣಲಿ
ಧರ್ಮದ ತೌರಲಿ
ಕನ್ನಡ ಮಣ್ಣನ್ನು ರಕ್ಷಿಸಲು
ನೆತ್ತರವನ್ನೇ ಹರಿಸಿದರು
ಈ ಕನ್ನಡ ತಾಯಿಯ ಮಡಿಲಲ್ಲಿ
ವೀರ ಮರಣವ ಹೊಂದಿದರು
ನೆಲ ಜಲ ರಕ್ಷಣೆ ಕಾಯಕತೆ
ಹಗಲಿರುಳೆನ್ನದೆ ಶ್ರಮಿಸಿದರು
ಲಾಠಿ ಬೂಟಿನ ಒದೆ ತಿಂದು
ಶತ್ರುಗಳೆದೆಯ ಮೆಟ್ಟಿದರು
ಉಪವಾಸ ಸೆರೆವಾಸ
ಎದೆಗುಂದದೆ ಮುನ್ನಗಿದರು
ಅವಮಾನ ಅದೇ ಬಹುಮಾನ
ಎಂದರು ಕನ್ನಡ ಸಿಂಹಗಳು
ಅಳಿದರು ಕನ್ನಡ
ಉಳಿದರು ಕನ್ನಡ
ಎದೆಯನೇ ಸೀಳು ನೀ
ಹರಿವುದು ಕನ್ನಡ
ಭೋರ್ಗರೆವುದು ಕನ್ನಡ
ನನ್ನ ಮಣ್ಣಿದು
ನನ್ನ ಮಣ್ಣಿದು
ನನ್ನ ಮಣ್ಣಿದು
ಕನ್ನಡ ಮಣ್ಣು
ನನ್ನುಸಿರಲ್ಲಿ ಕಂಪಿಸೋ ಮಣ್ಣು
ಧಮನಿ ಧಮನಿಯಲ್ಲಿ ನರ್ತಿಸೋ ಮಣ್ಣು
ವಿಶ್ವಮಾನವತೆ ಸಾರಿದ ಮಣ್ಣು
ಕನ್ನಡತಿ.. ಈ ಪುಣ್ಯವತಿ..
ನನ್ನಡೆದ ಸೌಭಾಗ್ಯವತಿ…
ನನ್ನ ಮಣ್ಣಿದು
ನನ್ನ ಮಣ್ಣಿದು
ನನ್ನ ಮಣ್ಣಿದು
ಕನ್ನಡ ಮಣ್ಣು
ನನ್ನುಸಿರಲ್ಲಿ ಕಂಪಿಸೋ ಮಣ್ಣು
ಧಮನಿ ಧಮನಿಯಲ್ಲಿ
ನರ್ತಿಸೋ ಮಣ್ಣು
ವಿಶ್ವಮಾನವತೆ ಸಾರಿದ ಮಣ್ಣು
ಕನ್ನಡತಿ.. ಈ ಪುಣ್ಯವತಿ..
ನನ್ನಡೆದ ಸೌಭಾಗ್ಯವತಿ…
ನನ್ನ ಮಣ್ಣಿದು
ನನ್ನ ಮಣ್ಣಿದು
ನನ್ನ ಮಣ್ಣಿದು
ಕನ್ನಡ ಮಣ್ಣು
ನನ್ನುಸಿರಲ್ಲಿ ಕಂಪಿಸೋ ಮಣ್ಣು
ಧಮನಿ ಧಮನಿಯಲ್ಲಿ
ನರ್ತಿಸೋ ಮಣ್ಣು
ವಿಶ್ವಮಾನವತೆ ಸಾರಿದ ಮಣ್ಣು
ಕನ್ನಡತಿ.. ಈ ಪುಣ್ಯವತಿ..
ನನ್ನಡೆದ ಸೌಭಾಗ್ಯವತಿ…
ಕನ್ನಡ ಕವಿಗಳ ಸಾಲುಗಳು
ನಿನ್ನ ಕಣ್ಣಿಗೆ ಕಾಡಿಗೆಯು
ಜ್ಞಾನ ಪೀಠದ ಗೌರವವೂ
ತಾಯೆ ನಿನಗೆ ಸಿಂಧೂರವು
ಜನಪದ ಕಲೆಗಳ ಸಿಂಚನವೇ
ಕನ್ನಡಾಂಬೆಯ ಕೈಬಳೆಯು
ಮನುಕುಲ ಮೆಚ್ಚುವ ನಾಟ್ಯಕಲೆ
ಅವಳ ಕಾಲ್ಗಳಿಗೆ ಅರ್ಪುಗೆಯು
ಮಲೆನಾಡ ಹಸಿರಸಿರಿ
ನಿನ್ನ ಒಡಲಿಗೆ ಉಡುಗೆಗಳು
ಶಿಲ್ಪಿಗಳ ಶಿಲ್ಪಕಲೆ
ಮಾತೇ ನಿನಗೆ ಒಡವೆಗಳು
ಕ್ಷಮಿಸುವಾ ಮನುಜನೆ
ಕನ್ನಡ ಮಣ್ಣಲಿ
ಸ್ವರ್ಗವಾ ಕಾಣುವೆ
ನನ್ನಈ ಮಣ್ಣಲಿ
ಪುಣ್ಯದ ಮಣ್ಣಲಿ
ನನ್ನ ಮಣ್ಣಿದು
ನನ್ನ ಮಣ್ಣಿದು
ಹೋ ಸುಂದರ ಅರಣ್ಯಧಾಮಗಳು
ಕನ್ನಡಾಂಬೆಯ ಕೇಶಗಳು
ನೇಗಿಲ ಯೋಗಿಯ ಬೆಳೆಯೆಲ್ಲಾ
ಅವಳ ಮುಡಿಗೆ ಕುಸುಮಗಳು
ಹರಿಯುವ ನದಿಯ ನೀರೆಲ್ಲಾ
ಅವಳ ಎದೆಯ ಅಮೃತವೂ
ಧುಮುಕುವ ಜೋಗದ ಸಿರಿಯೆಲ್ಲಿ
ತುಂಬಿದೆ ನಗೆಯ ನರ್ತನವು
ಈ ನಾಡ ಶ್ರೀಗಂಧ
ಕನ್ನಡಾಂಬೆಯ ಮಾಂಗಲ್ಯ
ಕೋಲಾರ ಕೈವಾರ
ಓಲೆ ಜುಮುಕಿ ಮೂಗುತಿಯು
ಇದ್ದರೆ ಬದುಕು ನೀ
ನನ್ನ ಈ ಮಣ್ಣಲಿ
ಮಡಿದರೆ ಹೆಮ್ಮೆಯೇ
ಕನ್ನಡ ಮಣ್ಣಲಿ
ಧರ್ಮದ ತೌರಲಿ
ಕನ್ನಡ ಮಣ್ಣನ್ನು ರಕ್ಷಿಸಲು
ನೆತ್ತರವನ್ನೇ ಹರಿಸಿದರು
ಈ ಕನ್ನಡ ತಾಯಿಯ ಮಡಿಲಲ್ಲಿ
ವೀರ ಮರಣವ ಹೊಂದಿದರು
ನೆಲ ಜಲ ರಕ್ಷಣೆ ಕಾಯಕತೆ
ಹಗಲಿರುಳೆನ್ನದೆ ಶ್ರಮಿಸಿದರು
ಲಾಠಿ ಬೂಟಿನ ಒದೆ ತಿಂದು
ಶತ್ರುಗಳೆದೆಯ ಮೆಟ್ಟಿದರು
ಉಪವಾಸ ಸೆರೆವಾಸ
ಎದೆಗುಂದದೆ ಮುನ್ನಗಿದರು
ಅವಮಾನ ಅದೇ ಬಹುಮಾನ
ಎಂದರು ಕನ್ನಡ ಸಿಂಹಗಳು
ಅಳಿದರು ಕನ್ನಡ
ಉಳಿದರು ಕನ್ನಡ
ಎದೆಯನೇ ಸೀಳು ನೀ
ಹರಿವುದು ಕನ್ನಡ
ಭೋರ್ಗರೆವುದು ಕನ್ನಡ
ನನ್ನ ಮಣ್ಣಿದು
ನನ್ನ ಮಣ್ಣಿದು
ನನ್ನ ಮಣ್ಣಿದು
ಕನ್ನಡ ಮಣ್ಣು
ನನ್ನುಸಿರಲ್ಲಿ ಕಂಪಿಸೋ ಮಣ್ಣು
ಧಮನಿ ಧಮನಿಯಲ್ಲಿ ನರ್ತಿಸೋ ಮಣ್ಣು
ವಿಶ್ವಮಾನವತೆ ಸಾರಿದ ಮಣ್ಣು
ಕನ್ನಡತಿ.. ಈ ಪುಣ್ಯವತಿ..
ನನ್ನಡೆದ ಸೌಭಾಗ್ಯವತಿ…
Nanna Mannidu song lyrics from Kannada Movie Veera Parampare starring Ambarish, Sudeep, Aindritha Ray, Lyrics penned by S Narayan Sung by Shankar Mahadevan, Music Composed by S Narayan, film is Directed by S Narayan and film is released on 2010