-
ಈ ಮೌನಗೀತೆ ನಿನಗಾಗಿ ಬರೆದೆ
ಈ ಹೃದಯ ಕದವ ನಿನಗಾಗಿ ತೆರೆದೆ
ಬಣ್ಣಗಳ ರಂಗೋಲಿ ಭಾವನೆಯ ಬಣ್ಣಿಸುತ
ಬಿಡುಗಡೆ ಇಲ್ಲದೆ ಬಂಧಿಸಿದೆ
ಬರಡಾದ ಈ ಮನಕೆ ಭಾಷೆಗಳ ಲೇಪಿಸುತ
ಕನಸ್ಸಿನ ಲೋಕದಿ ಸಾಗಿದೆ
ಈ ಮೌನಗೀತೆ ನಿನಗಾಗಿ ಬರೆದೆ
ಈ ಹೃದಯ ಕದವ ನಿನಗಾಗಿ ತೆರೆದೆ
ಸಹಿಸಿ ನಿಂತಿಹೆ ನನ್ನಯ ಈ ಮನವಿ
ಒಪ್ಪಿಕೊ ಒಮ್ಮೆಲೆ ಓ ನನ್ನ ಪ್ರಿಯಸಖಿಯೆ
ಕಾರ್ಮೋಡ ಕವಿದಿರುವ ಈ ಸಂಜೆ ಹೊತ್ತಿನಲಿ
ಹಂಬಲಿಸಿ ಆತುರದಿ ಉತ್ತರವ ಕಾಯುತಲಿ
ಈ ಹೃದಯಕ್ಕೆ ಬಲಗಾಲಿಡು
ನಿನ್ನ ಉಸಿರಿನ ಉಸಿರಲಿ ನಾನಿರುವೆ
||ಈ ಮೌನಗೀತೆ ನಿನಗಾಗಿ ಬರೆದೆ
ಈ ಹೃದಯ ಕದವ ನಿನಗಾಗಿ ತೆರೆದೆ||
ಸಮ್ಮತಿ ನೀಡಲು ಮನಸ್ಸಾರೆ ಕಾದಿರುವೆ
ಒಪ್ಪಿಗೆ ಪಡೆಯಲು ಬಾ ಬೇಗ ಪ್ರಿಯಸಖನೆ
ಕಾರಂಜಿ ಪ್ರೀತಿಯನು ಕಣ್ಣಲಿ ಹೊಮ್ಮಿಸುತ
ನಿನಗಾಗಿ ಪರಿತಪಿಸೊ ಮನಸ್ಸಿನಲಿ ಪರದಾಟ
ಈ ಹೃದಯಕ್ಕೆ ಬಲಗಾಲಿಡು
ನಿನ್ನ ಉಸಿರಿನ ಉಸಿರಲಿ ನಾನಿರುವೆ
||ಈ ಮೌನಗೀತೆ ನಿನಗಾಗಿ ಬರೆದೆ
ಈ ಹೃದಯ ಕದವ ನಿನಗಾಗಿ ತೆರೆದೆ||
-
ಈ ಮೌನಗೀತೆ ನಿನಗಾಗಿ ಬರೆದೆ
ಈ ಹೃದಯ ಕದವ ನಿನಗಾಗಿ ತೆರೆದೆ
ಬಣ್ಣಗಳ ರಂಗೋಲಿ ಭಾವನೆಯ ಬಣ್ಣಿಸುತ
ಬಿಡುಗಡೆ ಇಲ್ಲದೆ ಬಂಧಿಸಿದೆ
ಬರಡಾದ ಈ ಮನಕೆ ಭಾಷೆಗಳ ಲೇಪಿಸುತ
ಕನಸ್ಸಿನ ಲೋಕದಿ ಸಾಗಿದೆ
ಈ ಮೌನಗೀತೆ ನಿನಗಾಗಿ ಬರೆದೆ
ಈ ಹೃದಯ ಕದವ ನಿನಗಾಗಿ ತೆರೆದೆ
ಸಹಿಸಿ ನಿಂತಿಹೆ ನನ್ನಯ ಈ ಮನವಿ
ಒಪ್ಪಿಕೊ ಒಮ್ಮೆಲೆ ಓ ನನ್ನ ಪ್ರಿಯಸಖಿಯೆ
ಕಾರ್ಮೋಡ ಕವಿದಿರುವ ಈ ಸಂಜೆ ಹೊತ್ತಿನಲಿ
ಹಂಬಲಿಸಿ ಆತುರದಿ ಉತ್ತರವ ಕಾಯುತಲಿ
ಈ ಹೃದಯಕ್ಕೆ ಬಲಗಾಲಿಡು
ನಿನ್ನ ಉಸಿರಿನ ಉಸಿರಲಿ ನಾನಿರುವೆ
||ಈ ಮೌನಗೀತೆ ನಿನಗಾಗಿ ಬರೆದೆ
ಈ ಹೃದಯ ಕದವ ನಿನಗಾಗಿ ತೆರೆದೆ||
ಸಮ್ಮತಿ ನೀಡಲು ಮನಸ್ಸಾರೆ ಕಾದಿರುವೆ
ಒಪ್ಪಿಗೆ ಪಡೆಯಲು ಬಾ ಬೇಗ ಪ್ರಿಯಸಖನೆ
ಕಾರಂಜಿ ಪ್ರೀತಿಯನು ಕಣ್ಣಲಿ ಹೊಮ್ಮಿಸುತ
ನಿನಗಾಗಿ ಪರಿತಪಿಸೊ ಮನಸ್ಸಿನಲಿ ಪರದಾಟ
ಈ ಹೃದಯಕ್ಕೆ ಬಲಗಾಲಿಡು
ನಿನ್ನ ಉಸಿರಿನ ಉಸಿರಲಿ ನಾನಿರುವೆ
||ಈ ಮೌನಗೀತೆ ನಿನಗಾಗಿ ಬರೆದೆ
ಈ ಹೃದಯ ಕದವ ನಿನಗಾಗಿ ತೆರೆದೆ||