Mohini Mohini Lyrics

in Vajrayudha

Video:

LYRIC

-
ಮೋಹಿನಿ ಮೋಹಿನಿ ಮಾಯೆ ನಾನು
ಮೋಹಿನಿ ಆಟದ ಬೊಂಬೆ ನೀನು
ಮೋಹಿನಿ ಮೋಹಿನಿ ಮಾಯೆ ನಾನು
ಮೋಹಿನಿ ಆಟದ ಬೊಂಬೆ ನೀನು
ನಾನು ಹೇಳಿದಂತೆ ಕೇಳು ಈಗ
ವಾಸಿಮಾಡು ನನ್ನ ಪ್ರೇಮ ರೋಗ
 
ಮೋಹಿನಿ ಮೋಹಿನಿ ಮಾಯೆ ನಾನು
ಮೋಹಿನಿ ಆಟದ ಬೊಂಬೆ ನೀನು
ಮೋಹಿನಿ ಮೋಹಿನಿ ಮಾಯೆ ನಾನು
ಮೋಹಿನಿ ಆಟದ ಬೊಂಬೆ ನೀನು
ನಾನು ಹೇಳಿದಂತೆ ಕೇಳು ಈಗ
ವಾಸಿಮಾಡು ನನ್ನ ಪ್ರೇಮ ರೋಗ
 
ಕೇಳೊ ಗಂಡು ಬೊಂಬೆಯೆ
ಲೋಕ ಮೆಚ್ಚೊ ರಂಭೆಯೆ
ನಿನ್ನ ನೋಡಿ ಬಂದಿದೆ ಕಣ್ಣ ಮುಂದೆ ನಿಂತಿದೆ
ಪ್ರೇಮಸೂತ್ರ ಹೇಳೊ ಹಾಗೆ ಕೂಡಿ ಹಾಡು ಎಂದಿದೆ
ಮಂದಹಾಸ ತೋರಿಸು ಕಣ್ಣಕಣ್ಣ ಸೇರಿಸು
ಅಂತರಂಗ ನಿನ್ನದು ಇನ್ನು ಮೇಲೆ ನನ್ನದು
ಒಂದೆ ಕೋಣೆ ಒಂದೆ ಮಂಚ ಇನ್ನು ಮುಂದೆ ನಮ್ಮದು
ಬಾರೊ ಪ್ರಿಯ ಪ್ರಿಯ ವಿರಹವಿರಲು
ಭಯ ನಯ ವಿನಯಗಳು ಏಕೆ ಸರಸದಲಿ ಈ ಹರೆಯದಲಿ
 
||ಮೋಹಿನಿ ಮೋಹಿನಿ ಮಾಯೆ ನಾನು
ಮೋಹಿನಿ ಆಟದ ಬೊಂಬೆ ನೀನು
ಮೋಹಿನಿ ಮೋಹಿನಿ ಮಾಯೆ ನಾನು
ಮೋಹಿನಿ ಆಟದ ಬೊಂಬೆ ನೀನು
ನಾನು ಹೇಳಿದಂತೆ ಕೇಳು ಈಗ
ವಾಸಿಮಾಡು ನನ್ನ ಪ್ರೇಮ ರೋಗ||
 
ಒಂದು ಒಳ್ಳೆ ಚುಂಬನ ನೀಡಿ ತಾರೊ ಕಂಪನ
ಮುದ್ದು ಮುದ್ದು ಮಾತಲ್ಲಿ ಅಪ್ಪಿಕೊಂಡು ತೋಳಲಿ
ಚಂದಮಾಮ ನಾಚೊ ಹಾಗೆ ಪೋಲಿಗಾದೆ ಹೇಳು ಬಾ
ಏನು ಇನ್ನು ಯೋಚನೆ ಕೇಳು ಪ್ರೇಮ ಯಾಚನೆ
ಇಂತು ಒಂದು ರಾತ್ರಿಯ ಸ್ನೇಹಬೇಡ ಗೆಳೆಯ
ಮುಂದೆ ಎಂದು ನೀನೆ ಬಂಧು ನನ್ನ ಬಾಳ ಒಡೆಯ
ಬಾರೊ ಪ್ರಿಯ ಪ್ರಿಯ ಬಯಕೆ ಇರಲು
ಭಯ ನಯ ವಿನಯಗಳು ಏಕೆ ಪ್ರಣಯದಲಿ ಈ ಪ್ರಥಮದಲಿ
 
||ಮೋಹಿನಿ ಮೋಹಿನಿ ಮಾಯೆ ನಾನು
ಮೋಹಿನಿ ಆಟದ ಬೊಂಬೆ ನೀನು
ಮೋಹಿನಿ ಮೋಹಿನಿ ಮಾಯೆ ನಾನು
ಮೋಹಿನಿ ಆಟದ ಬೊಂಬೆ ನೀನು
ನಾನು ಹೇಳಿದಂತೆ ಕೇಳು ಈಗ
ವಾಸಿಮಾಡು ನನ್ನ ಪ್ರೇಮ ರೋಗ||

Mohini Mohini song lyrics from Kannada Movie Vajrayudha starring Ananthnag, Ramesh Aravind, Malashree, Lyrics penned by Hamsalekha Sung by Chithra, Music Composed by Hamsalekha, film is Directed by B Ramamurthy and film is released on 1992