Arere Nanna Kannu-duet Lyrics

in Vajramukhi

Video:

LYRIC

ಅರೆರೆ ನನ್ನ ಕಣ್ಣು ನಿನ್ನ ಕಣ್ಣುಗಳನ್ನು
ದಿನವೂ ಕದ್ದು ನೋಡಿದೆ
ಮನಸ್ಸೆ ಇನ್ನು ಇನ್ನು ನಿನ್ನ ಅಂದವನ್ನು
ಬಹಳ ಮುದ್ದು ಮಾಡಿದೆ
ಒಲವು ಕಳ್ಳ ಹೆಜ್ಜೆ ಇಟ್ಟು ಬಂತು ಇಲ್ಲಿ
ಮನಸ್ಸಿನ ಗೋಡೆ ಮೇಲೆ ಲಾಗ ಹಾಕಿದೆ
ಹೃದಯಕೆ ಒಂದು ಗೆಜ್ಜೆ ಕಟ್ಟಿ ನಿಂತೆ ಇಲ್ಲಿ
ಒಲವಿನ ಆಲಾಪನೆ ಶುರುವಾಗಿದೆ
ಅರೆರೆ ನನ್ನ ಕಣ್ಣು ನಿನ್ನ ಕಣ್ಣುಗಳನ್ನು
ದಿನವೂ ಕದ್ದು ನೋಡಿದೆ
 
ನಿನ್ನ ಕಂಡಾಗೆಲ್ಲಎದೆಯು ಸಿಕ್ಕಾಪಟ್ಟೆ
ಜಗಳ ಶುರು ಮಾಡಿದೆ ಜಗಳ ಶುರು ಮಾಡಿದೆ
ಓ ನೀನೆ ಬೇಕು ಅಂತ ಅಷ್ಟೆ ಸಾಕು ಅಂತ
ಮನಸ್ಸೆ ಹಠ ಮಾಡಿದೆ ಮನಸ್ಸೆ ಹಠ ಮಾಡಿದೆ
ಮನಸ್ಸಿಗೆ ಯಾರು ಬರಬಾರದು
ಅನುವುದು ನಿನ ನೋಡಿ ಮರೆತಾಗಿದೆ
ಹರೆಯ ಯಾರೂನು ಕದಿಬಾರದು
ಅನುವುದು ಯಾವಾಗ ನಾ ಮೀರಿದೆ
ಬದುಕು ನಿನಗೆ ಮುಡಿಪಿಡುವೆ ಓಓ
ಕೊನೆಯವರೆಗು ಜೊತೆ ಇರುವೆ
 
||ಅರೆರೆ ನನ್ನ ಕಣ್ಣು ನಿನ್ನ ಕಂಗಳನ್ನು
ದಿನವೂ ಕದ್ದು ನೋಡಿದೆ
ಅರೆರೆ ನನ್ನ ಕಣ್ಣು ನಿನ್ನ ಕಣ್ಣುಗಳನ್ನು
ದಿನವೂ ಕದ್ದು ನೋಡಿದೆ ||
 
ಮೋಹ ಚಂದ ಚಂದ ಸನಿಹ ಇನ್ನು ಚಂದ
ವಿರಹ ಇರಬಾರದು ವಿರಹ ಇರಬಾರದು
ದೂರ ಹೋಗಿ ನಾವು ಬಾಳೊ ಬಾಳೆ ಚಂದ
ಜಗಕೆ ಸಿಗಬಾರದು ಜಗಕೆ ಸಿಗಬಾರದು
ತುಟಿಗಳ ಮೇಲೆ  ನಿನ್ನ ನಾಮವೇ
ಕನಸಲು ಕಾಣೋದು ನಿನ್ನ ಪ್ರೇಮವೇ
ಪ್ರತಿ ಕಡೆ ನಿಂದೇನೆ ಪ್ರತಿ ರೂಪವೇ
ಹರೆಯದ ಈ ರಾಗ  ಅನುರಾಗವೇ
ನೀನೆ ನನ್ನ ಲವಲವಿಕೆ
ಇದುವೆ ಇದುವೆ ನನ್ನ ಹರಿಕೆ
 
||ಅರೆರೆ ನನ್ನ ಕಣ್ಣು ನಿನ್ನ ಕಣ್ಣುಗಳನ್ನು
ದಿನವೂ ಕದ್ದು ನೋಡಿದೆ
ಮನಸ್ಸೆ ಇನ್ನು ಇನ್ನು ನಿನ್ನ ಚಿತ್ರವನ್ನು
ಬಹಳ ಮುದ್ದು ಮಾಡಿದೆ
ಒಲವು ಕಳ್ಳ ಹೆಜ್ಜೆ ಇಟ್ಟು ಬಂತು ಇಲ್ಲಿ
ಮನಸ್ಸಿನ ಗೋಡೆ ಮೇಲೆ ಲಾಗ ಹಾಕಿದೆ ||
 

Arere Nanna Kannu-duet song lyrics from Kannada Movie Vajramukhi starring Neethu, Dileep Pai, Sanjana, Lyrics penned by V Nagendra Prasad Sung by Santhosh Venky, Anuradha Bhat, Music Composed by Raj Bhaskar, film is Directed by N Adithya Kunigal and film is released on 2019