Mandahasadanthe Lyrics

in Typical Kailas

LYRIC

ಮಂದಹಾಸದಂತೆ ಬಂದೆ ನೀನು ಮಾಯಾವಿ
ಎಂದಿಗಿಂತ ಈಗ ನಾನು ಹೆಚ್ಚೆ ವ್ಯಾಮೋಹಿ
ಈಗಿಂದೀಗ ಈ ಹೃದಯ ಬಂದು ಸ್ವೀಕರಿಸು
ಅತಿಯಾಗೆ ನನ್ನನು ಪ್ರೀತಿಸು
ಅಂತರಂಗ ನಿನ್ನದಾಯ್ತು ಒಂದೇ ಮಾತಲ್ಲಿ
ಎಂತ ಚೆಂದ ಬೆಳಕು ನೀನು ಬಂದ ಹೊತ್ತಲ್ಲಿ
ಈಗಿಂದೀಗ ಮುಂಗುರುಳ ಹೀಗೆ ನೇವರಿಸು
ಬಿಡದಂತೆ ನನ್ನನ್ನು ಪ್ರೀತಿಸು
ನನ್ನ ಮನಸ್ಸಲ್ಲಿ ನೀನೆ ಕೂತಿರಲು
ಹೇಗೆ ವಾಸಿಯಾದೀತು ಈ ಮರುಳು
ಈಗಿಂದೀಗ ತೋಳಿನಲಿ ಜಾಗ ಕಾದಿರಿಸು
ಹಟದಿಂದ ನನ್ನನ್ನು ಪ್ರೀತಿಸು
 
ನಾನು ಮುಟ್ಟಿ ನೋಡಬಲ್ಲ ಸ್ವಪ್ನ ನೀನೀಗ
ನನ್ನ ಹಾಡಿನಲ್ಲಿ ಬಂದು ಕೂತೆ ಯಾವಾಗ
ಈಗಿಂದೀಗ ಚಂದ್ರನಿಗೆ ವಾರ್ತೆ ನೀ ಕಳಿಸು
ಮಗುವಂತೆ ನನ್ನನ್ನು ಪ್ರೀತಿಸು
ಒಂದು ಕ್ಷಣ ಕೂಡ ದೂರ ಹೋಗದಿರು
ಆಗ ನಿಂತೆ ಹೋದೀತು ಈ ಉಸಿರು
ಈಗಿಂದೀಗ ಮುತ್ತಿನಲಿ ನೀನು ಉತ್ತರಿಸು
ಪಿಸುಗುಟ್ಟಿ ನನ್ನನ್ನು ಪ್ರೀತಿಸು
 
||ಮಂದಹಾಸದಂತೆ ಬಂದೆ ನೀನು ಮಾಯಾವಿ
ಎಂದಿಗಿಂತ ಈಗ ನಾನು ಹೆಚ್ಚೆ ವ್ಯಾಮೋಹಿ
ಈಗಿಂದೀಗ ಈ ಹೃದಯ ಬಂದು ಸ್ವೀಕರಿಸು
ಅತಿಯಾಗೆ ನನ್ನನು ಪ್ರೀತಿಸು||
 

Mandahasadanthe song lyrics from Kannada Movie Typical Kailas starring Srujan Lokesh, Vrunda (Pavana), Omprakash Rao, Lyrics penned by Jayanth Kaikini Sung by Anuradha Bhat, Music Composed by V Manohar, film is Directed by B N Mallika and film is released on 2014